ಸುದ್ದಿಮೂಲವಾರ್ತೆ
ಕೊಪ್ಪಳ ಜು 22: ವಿಧಾನಸಭೆಯಿಂದ 10 ಜನ ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಿದ ಪ್ರಕರಣ ಹಾಗು ಹಿಂದು ಕಾರ್ಯಕರ್ತರ ಹತ್ಯೆ. ಭಜರಂಗ ದಳ ಕಾರ್ಯಕರ್ತರ ಗಡಿಪಾರು ಮಾಡಲು ಮುಂದಾಗಿರುವದನ್ನು ವಿರೋಧಿಸಿ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ಮಾಡಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸರಕಾರದ ವಿರುದ್ದ ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಆರ್ ಬಿ ಪಾನಗಂಟಿ ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದೇ ಸಂದರ್ಭದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ. ರಾಜ್ಯ ಸರಕಾರ ಹಿಂದುಗಳ ರಕ್ಷಣೆ ಮಾಡಲು ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಪ್ರದೀಪ ಹಿಟ್ನಾಳ ರಾಜ್ಯದಲ್ಲಿಯ ಸಿದ್ದರಾಮಯ್ಯ ಸರಕಾರ ಒಂದು ಕೋಮಿನವರ ಓಲೈಸುತ್ತಿದೆ. ಸಂವಿದಾನದ ವಿರುದ್ದವಾಗಿ ಸ್ಪೀಕರ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಜನ ವಿರೋಧಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ ಎಂ ಭೂಸನೂರಮಠ, ಮಹಾಂತೇಶ ಪಾಟೀಲ. ಸುನೀಲ ಹೆಬಸೂರು, ಮಹಾಲಕ್ಷ್ಮಿ ಕಂದಾರಿ, ರಾಜು ಬಾಕಳೆ, ಗೀತಾ ಪಾಟೀಲ. ಕೀರ್ತಿ ಪಾಟೀಲ, ನೀಲಕಂಠಯ್ಯ ಹಿರೇಮಠ , ಮಹೇಶ ಅಂಗಡಿ ಸೇರಿ ಹಲವರು ಇದ್ದರು.