ಸುದ್ದಿಮೂಲ ವಾರ್ತೆ ಬೀದರ್, ಡಿ.21:
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ವಾರದೊಳಗೆ ಬಾಕಿ ಬಿಲ್ ಪಾವತಿ ಮಾಡದಿದ್ದರೆ ರೈತರ ಜೊತೆಗೂಡಿ ಹೋರಾಟ ಆರಂಭಿಸುವುದು ಅನಿವಾರ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬೀದರ್ ದಕ್ಷಿಣ ಶಾಸಕ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಾಳೆ ಎಚ್ಚರಿಕೆ ನೀಡಿದ್ದಾರೆ.
ಸಾಕಷ್ಟು ಹೋರಾಟದ ಬಳಿಕ ಜಿಲ್ಲೆಯಲ್ಲಿ ಟನ್ ಕಬ್ಬಿಿಗೆ 2950 ರೂ. ದರ ನಿಗದಿಪಡಿಸಲಾಗಿದೆ. ಇದು ಮುಖ್ಯಮಂತ್ರಿಿ ಘೋಷಿಸಿದ ದರಕ್ಕಿಿಂತ ಟನ್ ಗೆ 350 ಕಡಿಮೆಯಾಗಿದೆ. ಸೂಕ್ತ ದರ ಕೊಡದೆ ರೈತರಿಗೆ ಅನ್ಯಾಾಯ ಮಾಡಲಾಗಿದೆ. ಇದೀಗ ಕಬ್ಬು ಸಾಗಿಸಿ ತಿಂಗಳು ಕಳೆದರೂ ಹಣ ಪಾವತಿಸದೆ ರೈತರ ಗಾಯದ ಮೇಲೆ ಬರೆ ಎಳೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಹಾಗೂ ಜಿಲ್ಲಾಡಳಿತ ರೈತರ ವಿಷಯದಲ್ಲಿ ನುಡಿದಂತೆ ನಡೆಯದೆ ಅನ್ನದಾತರಿಗೆ ಮತ್ತಷ್ಟು ಸಂಕಷ್ಟಕ್ಕೆೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ಇಲ್ಲಿ ಹೊರಡಿಸಿದ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕಬ್ಬು ನಿಯಂತ್ರಣ, ಪೂರೈಕೆ ಕಾಯ್ದೆೆ ಪ್ರಕಾರ ಕಾರ್ಖಾನೆಗೆ ಕಬ್ಬು ಸಾಗಿಸಿದ 14 ದಿನದೊಳಗೆ ರೈತರಿಗೆ ಹಣವನ್ನು ಪಾವತಿಸಬೇಕು. ಪಾವತಿ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಹಾಗೂ ನಿಗದಿತ ಸಮಯದೊಳಗೆ ಬಾಕಿ ನೀಡದ ಹಣಕ್ಕೆೆ ಶೇ.7.5 ರಷ್ಟು ಬಡ್ಡಿಿ ಸಮೇತ ಹಣ ಕೊಡಿಸುವ ಜವಾಬ್ದಾಾರಿ ಜಿಲ್ಲಾಡಳಿತದ ಮೇಲಿದೆ. ಆದರೆ ಇಲ್ಲಿ ಒಂದು ತಿಂಗಳು ಕಳೆದರೂ ಸಕ್ಕರೆ ಕಾರ್ಖಾನೆಯವರು ಬಾಕಿ ಕೊಡುತ್ತಿಿಲ್ಲ. ಜಿಲ್ಲಾಡಳಿತ ಏಕೆ ಮೌನವಾಗಿದೆ? ಸಚಿವ ಖಂಡ್ರೆೆ ಅವರು ಈ ವಿಷಯದಲ್ಲಿ ಏಕೆ ಮಾತನಾಡುತ್ತಿಿಲ್ಲ ಎಂದು ಪ್ರಶ್ನಿಿಸಿದ್ದಾರೆ.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಎರಡು, ಖಾಸಗಿ ವಲಯದ ಮೂರು ಪ್ರಮುಖ ಸಕ್ಕರೆ ಕಾರ್ಖಾನೆಗಳಿವೆ. ಇವು ಪ್ರಸಕ್ತ ಹಂಗಾಮು ಆರಂಭಿಸಿ ಒಂದೂವರೆ ತಿಂಗಳಾಗುತ್ತಿಿದೆ. ಈವರೆಗೆ ಯಾರೂ ರೈತರಿಗೆ ಕಬ್ಬಿಿನ ಬಿಲ್ ಪಾವತಿ ಮಾಡದಿರುವುದು ವಿಚಿತ್ರ ಎನಿಸಿದೆ. ಅತಿವೃಷ್ಟಿಿಯಿಂದ ಬೆಳೆ ಹಾನಿಯಾದ ಕಾರಣ ಜಿಲ್ಲೆಯ ರೈತರು ಅನೇಕ ಸಮಸ್ಯೆೆ, ಸಂಕಷ್ಟಗಳನ್ನು ಎದುರಿಸುತ್ತಿಿದ್ದಾರೆ. ಈಗ ಕಬ್ಬು ಹಾಕಿದ ರೈತರಿಗೆ ಬೆಲೆ ಸಹ ಕೈ ಸೇರುತ್ತಿಿಲ್ಲ. ರೈತರು ಪ್ರತಿಭಟನೆ ನಡೆಸುತ್ತಿಿದ್ದ ವೇಳೆ ಕಬ್ಬಿಿನ ಬಿಲ್ ನಿಗದಿತ ಸಮಯದೊಳಗೆ ಕೊಡಿಸುವ ಜಿಮ್ಮೇದಾರಿ ನನ್ನದು ಎಂದು ಡಿಸಿಯವರು ಹೇಳಿದ್ದರು. ಈಗೇಕೆ ನುಡಿದಂತೆ ನಡೆಯುತ್ತಿಿಲ್ಲ. ಡಿಸಿಯವರ ಮೇಲೆ ಯಾರದಾದರೂ ಒತ್ತಡ ಇದೆಯಾ? ರೈತರು ಗಂಭೀರ ಸ್ಥಿಿತಿಗೆ ಸಿಲುಕಿದರೂ ಅವರ ಸಮಸ್ಯೆೆ ಗಂಭೀರವಾಗಿ ಪರಿಗಣಿಸದಿರುವುದು ದುರಾದೃಷ್ಟಕರ ಸಂಗತಿ. ಬಾಕಿ ಪಾವತಿಗೆ ಪಕ್ಷ ವಾರದ ಗಡುವು ನೀಡುತ್ತಿಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ ಎಂದಿದ್ದಾರೆ.

