ಸುದ್ದಿಮೂಲವಾರ್ತೆ
ಕೊಪ್ಪಳ ಆ 19: ಇಂದು ಕ್ಯಾಮರಾ ತಂತ್ರಜ್ಞಾನ ಬದಲಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಫೋಟೊಗ್ರಾಫರಗಳು ಹೊಸತನವನ್ನು ಅಳವಡಿಸಿಕೊಂಡು ಉತ್ತಮ ಫೋಟೊ ಗ್ರಾಫರ್ ಆಗಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಕೆ ರವಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ತಾಲೂಕಾ ಫೋಟೊ ಹಾಗು ವಿಡಿಯೋಗ್ರಾಫರ ಸಂಘದಿಂದ ಆಯೋಜಿಸಿದ್ದ 184 ನೆಯ ಛಾಯಗ್ರಹಣ ದಿನಾಚರಣೆಯನ್ನು ಫೋಟೊ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.
ಒಂದು ಫೋಟೊ ನೂರ ಪದಗಳಿಗೆ ಸಮ. ಫೋಟೊಗ್ರಾಫರಗಳು ಸಮಯಪ್ರಜ್ಞೆ ಬೆಳೆಸಿಕೊಂಡು ಉತ್ತಮ ಭಾವನೆಯ ಫೋಟೊಗಳನ್ನು ತೆಗೆಯಬೇಕೆಂದು ಹೇಳಿದರು.
ಇದೇ ಸಮಯದಲ್ಲಿ ಅತಿಥಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಛಾಯಗ್ರಾಹಕ ತಿಮ್ಮರಾಯಪ್ಪ ಕೆಂಪಣ್ಣ ಫೋಟೊ ಸತ್ಯವನ್ನೇ ಹೇಳುತ್ತದೆ. ಯಾವುದೇ ಸಂದರ್ಭದಲ್ಲಿ ಒಂದು ಫೋಟೊ ಸತ್ಯಕ್ಕೆ ಸಾಕ್ಷಿಯಾಗುತ್ತದೆ. ಫೋಟೊ ಕ್ಯಾಮರಾ ತಾನು ಏನು ಚಲನೆ ಮಾಡುವುದಿಲ್ಲ. ಆದರೆ ಫೋಟೊಗ್ರಾಫರ ಜಾಣ್ಮೆಯಿಂದ ಅದರ ಹೆಸರು ಬರುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಪತ್ರಕರ್ತ ಶರಣಪ್ಪ ಬಾಚಲಾಪುರ ಇಂದು ನಾಗರಿಕ ಪ್ರತಿಕೋದ್ಯಮ ಬಂದಂತೆ, ನಾಗರಿಕ ಫೊಟೊಗ್ರಾಫರ ಪದ್ದತಿ ಇದೆ. ಆದರೆ ಭಾವನೆಗಳನ್ನು ಸೆರೆಬಹಿಡಿಯುವ ಕಲೆ. ಜಾಣ್ಮೆ.ತಾಳ್ಮೆ ಫೋಟೊಗ್ರಾಫರಗಳಿಗಿದೆ ಎಂದರು.
ಈ ಸಂದರ್ಭದಲ್ಲಿ ಫೋಟೊಗ್ರಾಫರ. ವಿಡಿಯೋ ಸಂಘದ ಅಧ್ಯಕ್ಷ ತಿಲಕಭೀಮರಾವ್ ಪದಕಿ. ವನ್ಯಜೀವಿ ಛಾಯಗ್ರಾಹಕ ಸಾದಿಕ ಕೆಎನ್ ಕೆ. ಉದ್ಯಮಿ ಶ್ರೀನಿವಾಸ ಗುಪ್ತಾ. ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶೋಕ ಹುಣಸಿಗಿಡದ ಹಾಗು ಬಸವರಾಜ ಕಂಪ್ಲಿ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಹಿರಿಯ ಛಾಯಗ್ರಾಹಕರಾದ ವಿರುಪಣ್ಣ ಶಿವಶಿಂಪಿ. ಬಸವರಾಜ, ಶರಣಪ್ಪ ಮುದ್ಲಾಪುರ ಹಾಗು ದೇವಪ್ಪ ತಿಗರಿಯವರನ್ನು ಸನ್ಮಾನಿಸಲಾಯಿತು.