ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.11: ಒಕ್ಕಲಿಗರು ಕೇವಲ ಕೃಷಿ ಚಟುವಟಿಕೆ ಮಾಡಿಕೊಂಡು ಹಳ್ಳಿಗಳಲ್ಲಿ ನೆಲೆಸಿದ್ದರು. ಆದರೆ, ಈಗ ಮಕ್ಕಳ ವಿಧ್ಯಾಭ್ಯಾಸದ ಸಲುವಾಗಿ ಹಳ್ಳಿ ತೊರೆದು ನಗರ ಪ್ರದೇಶಕ್ಕೆ ಬರುತಿದ್ದು ಸಮಾಜದಲ್ಲಿ ಉನ್ನತ ಸಾಧನೆಗೆ ಶಿಕ್ಷಣ ಅತಿ ಮುಖ್ಯವಾಗಿದ್ದು ಮಕ್ಕಳು ಉತ್ತಮ ಸಂಸ್ಕಾರವಂತ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ನಗರದ ಪಟೇಲ್ ನಾರಾಯಣಗೌಡ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದವತಿಯಿಂದ 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಉತ್ತಮವಾದ ಸಮುದಾಯ ಭವನ ನಿರ್ಮಾಣ ವಸತಿ ಶಾಲೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶವಿದೆ. ನಗರ ಪ್ರದೇಶದಲ್ಲಿ ವಾಸಿಸುವ ಒಕ್ಕಲಿಗರು ಬಹುತೇಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಂದವರೇ ಆಗಿದ್ದಾರೆ ಎಂದರು.
ಬೆಂಗಳೂರಿನ ಜನತೆಗೆ ಕಾವೇರಿ ನೀರು ಕುಡಿಯುವ ಭಾಗ್ಯ ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೂ ತರಲು ಈಗಾಗಲೇ ಎಲ್ಲಾ ರೀತಿಯ ಕ್ರಮ ವಹಿಸಲಾಗಿದ್ದು 6ಟಿಎಂಸಿ ನೀರು ಪಡೆಯಲು ಅಮೃತ್ ಯೋಜನೆಯಡಿ 56 ಕೋಟಿ ಹಣ ಬಿಡುಗಡೆ ಆಗುವ ಹಂತದಲ್ಲಿದ್ದು, ಆದಷ್ಟು ಬೇಗ ಹೊಸಕೋಟೆ ಜನರಿಗೆ ಕಾವೇರಿ ನೀರನ್ನು ಒದಗಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಕೆ ಪದ್ಮನಾಭ್ ಮಾತನಾಡಿ, ಒಕ್ಕಲಿಗ ಜನಾಂಗ ಕೇವಲ ಒಕ್ಕಲುತನದಲ್ಲಿ ಮಾತ್ರ ಪ್ರಗತಿಯನ್ನು ಸಾಧಿಸದೆ ವಿಧ್ಯಾಭ್ಯಾಸದಲ್ಲೂ ಉತ್ತಮ ಸಾದನೆ ಮಾಡುತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಬಾರಿ ಒಕ್ಕಲಿಗರು ಹೆಚ್ಚಿನ ಅಂಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ ನಾಗರಾಜ್, ಎಲ್ ಜಿ ಪೌಂಡೇಷನ್ ಅಧ್ಯಕ್ಷ ಲಕ್ಷ್ಮಣ್ ಗೌಡ, ಉದ್ಯಮಿ ಬಿ.ವಿ ಬೈರೇಗೌಡ ಮುಖಂಡರುಗಳಾದ ಬಚ್ಚಣ್ಣ, ನಟರಾಜ್, ಮುನೇಗೌಡ, ಸಿ.ಆರ್.ಗೌಡ, ನಂಜುಂಡೇಗೌಡ, ಉಮಾ ಬಚ್ಚೇಗೌಡ, ಪ್ರತಿಭಾ ಶರತ್, ಸುಮಾ, ಲಕ್ಷ್ಮಿದೇವಿ ಹಾಜರಿದ್ದರು.