ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಬೋಧಗಯಾದ ಬುದ್ಧವೇದ ಮಹಾಬೋಧಿ ಮಹಾವೀರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ದರಿಗೆ ನೀಡಲು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಸಿದ್ದಾರ್ಥ ಬುದ್ಧ ವಿಹಾರದ ಸಂಘಟನೆ ಒತ್ತಾಾಯಿಸಿತು.
ನಗರದ ಅಪರ ಜಿಲ್ಲಾಾಧಿಕಾರಿ ಮೂಲಕ ರಾಜ್ಯಪಾಲರಿಗೆ ಕೇಂದ್ರ ಮತ್ತು ಬಿಹಾರ ಸರ್ಕಾರಕ್ಕೆೆ ಸೂಕ್ತ ಶಿಾರಸು ಮಾಡಲು ಮನವಿ ಸಲ್ಲಿಸಿದರು. ಬೋಧಗಯಾ ಟೆಂಪಲ್ ಆ್ಯಕ್ಟ್ 1949 ರದ್ದುಗೊಳಿಸಿ ಬುದ್ಧವೇದ ಮಹಾಬೋಧಿ ಮಹಾವೀರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ದರಿಗೆ ನೀಡಲು ಸೂಕ್ತ ಶಿಾರಸು ಮಾಡಬೇಕು, ಬೋಧಗಯಾ ಟೆಂಪಲ್ ಆವರಣದಲ್ಲಿ ಅತಿಕ್ರಮಣ ಮಾಡಿಕೊಂಡು ಜಾಗ ಸಂಪೂರ್ಣವಾಗಿ ಬೌದ್ದರಿಗೆ ನೀಡಬೇಕು, ಹಿಂದೂ ಧರ್ಮದ ಕ್ರಿಿಯಾ ಚಟುವಟಿಕೆಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು, ಕಳೆದ ಬಜೆಟ್ ನಲ್ಲಿ ಘೋಷಿಸಿದ ಇತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿಿ ಪ್ರಾಾಧಿಕಾರ ಪೂರ್ಣ ಪ್ರಮಾಣದಲ್ಲಿ ರಚಿಸಿ 7 ಸ್ಟಾಾರ್ ಪ್ರವಾಸಿ ತಾಣವನ್ನಾಾಗಿ ಅಭಿವೃದ್ಧಿಿ ಮಾಡಬೇಕು, ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ ಆರ್ಥಿಕ ಅಭಿವೃದ್ಧಿಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿಿ ನಿಗಮ ಸ್ಥಾಾಪಿಸಬೇಕು, ಮಹಾತ್ಮ ಗೌತಮ ಬುದ್ಧ ಜಯಂತಿಗೆ ಸಾರ್ವತ್ರಿಿಕ ರಜೆ ಘೋಷಣೆ ಮಾಡಬೇಕು, ಬುದ್ಧ ವಿಹಾರಗಳಿಗೆ ಸೌಕರ್ಯ ಒದಗಿಸಬೇಕು, ರಾಜ್ಯದಲ್ಲಿರುವ ಸಾಮ್ರಾಾಟ ಅಶೋಕರ ಗುಲ್ಬರ್ಗ ಜಿಲ್ಲೆಯ ಸನ್ನತಿ, ರಾಯಚೂರು ಜಿಲ್ಲೆಯ ಮಸ್ಕಿಿ, ಕೊಪ್ಪಳದ ಗವಿಮಠ ಭಾಲ್ಕಿಿ ಗುಂಡ, ಬಳ್ಳಾಾರಿ ಜಿಲ್ಲೆಯ ನಿಟ್ಟೂರ, ಉದುಂಗೋಳ, ಚಿತ್ರದುರ್ಗ ಜಿಲ್ಲೆಯ ಅಶೋಕ ಸಿದ್ದಾಾಪುರ, ಬ್ರಹ್ಮಗಿರಿ, ಜಟ್ಟಿಿಂಗ್ ರಾಮೇಶ್ವರ, ಬೆಂಗಳೂರು ಗ್ರಾಾಮಾಂತರ ಜಿಲ್ಲೆಯ ರಾಜಘಟ್ಟ ಶಿಲಾಶಾಸನಗಳ ಅಭಿವೃದ್ದಿ ಪಡಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ತಿಮ್ಮ ಗುರು, ಸದಸ್ಯರಾದ ಎಚ್ ಆಂಜನೇಯ, ದೇವೇಂದ್ರ ದಾದಸ್, ಆರ್. ನರಸಿಂಹಲು ಇತರರಿದ್ದರು.
ಬಿಹಾರದ ಬೋಧಗಯಾ ಆಡಳಿತ ಬೌದ್ಧರಿಗೆ ಒದಗಿಸಲು ಒತ್ತಾಯ

