ಸುದ್ದಿಮೂಲ ವಾರ್ತೆ ರಾಯಚೂರು, ಡಿ.21:
ಜಿಲ್ಲೆಯಲ್ಲಿ ಕೆರೆ-ಕಟ್ಟೆೆಗಳ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ಧಿಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲಾಗುತ್ತಿಿದ್ದು ಅದರ ಭಾಗವಾಗಿ ನಗರದೊಳಗಿನ ಎರಡು ಕೆರೆ ಅಭಿವೃದ್ದಿಗೆ ಅಣಿಯಾಗಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ರಾಯಚೂರು ನಗರದ ನೀರಬಾವಿಕುಂಟೆ ಕೆರೆಯ ಅಭಿವೃದ್ಧಿಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಈಗಾಗಲೆ ನಗರದ ಕೇಂದ್ರ ಭಾಗದಲ್ಲಿರುವ ಮಾವಿನಕೆರೆ ಅಭಿವೃದ್ದಿಗೊಳಿಸಲಾಗುತ್ತಿಿದೆ. ಇದೀಗ ನೀರಬಾವಿ ಕುಂಟೆ ಕೆರೆಯನ್ನು ಸುಮಾರು 8 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಿಗೊಳಿಸಲು ಕಾಮಗಾರಿ ಕೈಗೆತ್ತಿಿಕೊಳ್ಳಲಾಗಿದೆ, ಅಧಿಕಾರಿಗಳು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗಾಗಿ, ಕೃಷಿ ಚಟುವಟಿಕೆಗಳಿಗಾಗಿ ರೈತರು ಸೇರಿದಂತೆ ಕೆರೆ-ಕಟ್ಟೆೆಗಳ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ಅಲ್ಲದೆ ಅನೇಕ ಜಲಚರ ಪ್ರಾಾಣಿ-ಪಕ್ಷಿಗಳು ಅವಲಂಬನೆಯಾ ಗಿರುವುದರಿಂದ ಅಂತರ್ಜಲ ಸಮೃದ್ಧಿಿಗಾಗಿ ಎಲ್ಲ ಕೆರೆಗಳ ಸಂರಕ್ಷಣೆ ನಮ್ಮ ಜವಾಬ್ದಾಾರಿಯಾಗಿದೆ. ಕೆರೆ ಅಭಿವೃದ್ಧಿಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ಅಭಿವೃದ್ಧಿಿ ಕಾಮಗಾರಿಗಳಿಗೆ ಸಹಕರಿಸಬೇಕು ಹಂತ ಹಂತವಾಗಿ ನಮ್ಮ ಸರ್ಕಾರ ಜನಪರವಾದ ಅಭಿವೃದ್ಧಿಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ರೂಪಿಸಿದೆ. ಕೆರೆ ಭಾಗವನ್ನು ಒತ್ತುವರಿಯಾಗದಂತೆ ಅಧಿಕಾರಿಗಳು ಕೆರೆಯ ಸುತ್ತಲೂ ಗಡಿಭಾಗವನ್ನು ಭದ್ರಗೊಳಿಸಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಜಿ ಕುಮಾರ ನಾಯಕ, ಮಾಜಿ ಶಾಸಕ ಎ ಪಾಪಾರೆಡ್ಡಿಿ, ಕಾಂಗ್ರೆೆಸ್ ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಕೆ ಶಾಂತಪ್ಪ, ಜಯಣ್ಣ, ಜಯವಂತ ರಾವ್ ಪತಂಗೆ, ಶ್ರೀನಿವಾಸ ರೆಡ್ಡಿಿ, ಶೇಖರ ರೆಡ್ಡಿಿ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಮುನಿಸ್ವಾಾಮಿ, ಸುಭಾಷ್, ವಿಶಾಲ್ ರಡ್ಡಿಿ ಸೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಪಕ್ಷದ ಕಾರ್ಯಕರ್ತರು ಇದ್ದರು.
ನೀರಬಾವಿ ಕುಂಟೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಚಿವರಿಂದ ಚಾಲನೆ ಕೆರೆ-ಕಟ್ಟೆಗಳ ಸಂರಕ್ಷಣೆಗೆ ಬದ್ದತೆ ತೋರಿಸಿ, ಅಂತರ್ಜಲ ಸಮೃದ್ಧಿಗೆ ಕೈ ಜೋಡಿಸಿ – ಬೋಸರಾಜ್

