ಸುದ್ದಿಮೂಲ ವಾರ್ತೆ ಮಸ್ಕಿ, ಜ.11:
ಮಳೆಯಾದಾಗ ಹಳ್ಳದ ಮೂಲಕ ಹರಿದು ಹೋಗುವ ನೀರನ್ನು ಬ್ಯಾಾರೇಜ್ ನಿರ್ಮಿಸಿ ತಡೆದು ನಿಲ್ಲಿಸುವುದರಿಂದ ಅಂತರ್ಜಲ ಹೆಚ್ಚಳ ಜತೆಗೆ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು_ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಾಲೂಕಿನ ಮಾರಲದಿನ್ನಿಿ ತಾಂಡ ಹಾಗೂ ಮಟ್ಟೂರು ತಾಂಡದ ಹತ್ತಿಿರದ ಹಳ್ಳಕ್ಕೆೆ ಬ್ಯಾಾರೇಜ್ ಕಮ್ ಬ್ರಿಿಜ್ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,ಇದರಿಂದಾಗಿ ರೈತಾಪಿ ವರ್ಗಕ್ಕೆೆ ಅನುಕೂಲವಾಗಲಿದೆ. ಕೃಷಿ ಚುಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಈ ಬ್ಯಾಾರೇಜ್ ನಿರ್ಮಾಣದಿಂದಾಗಿ ನೂರಾರು ಎಕರೆ ಕೃಷಿ ಚಟುವಟಿಕೆಗಳ ಮಾಡಲು ಸಹಾಯವಾಗಲಿದೆ. ಬಡಜನರ ಉದ್ಧಾಾರಕ್ಕಾಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಮಾಡಿದೆ ಅವುಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳ, ಮಲ್ಲಿಕಾರ್ಜುನ್ ಪಾಟಿಲ್, ಯದಲದಿನ್ನಿಿ, ಬಸನಗೌಡ ಪೊಲೀಸ್ ಪಾಟೀಲ್, ಶಿವಣ್ಣ ನಾಯಕ ಮತ್ತು ಕಾಂಗ್ರೆೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿಿತರಿದ್ದರು.
ಬ್ಯಾರೇಜ್ ಕಮ್ ಬ್ರಿಜ್ನಿಂದ ರೈತರಿಗೆ ಅನುಕೂಲ – ಬೋಸರಾಜು

