ಸುದ್ದಿಮೂಲ ವಾರ್ತೆ ಲಿಂಗಸಗೂರು, ನ.08:
ಲಿಂಗಸೂಗೂರು ಬಸ್ ನಿಲ್ದಾಾಣದಲ್ಲಿ ಶನಿವಾರ ಬೆಳಗ್ಗೆೆ ಸಂಭವಿಸಿದ ದುರ್ಘಟನೆಯಲ್ಲಿ 12ವರ್ಷದ ಬಾಲಕ ಸಿದ್ಧರಾಮ ಮೃತಪಟ್ಟಿಿದ್ದಾಾನೆ. ಅವನ ಜತೆಗಿದ್ದ 8ವರ್ಷದ ಧನಂಜ ಎಂಬ ಬಾಲಕನ ಎರಡು ಕೈಗಳು ತೀವ್ರವಾಗಿ ಗಾಯಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾಾನೆಂದು ಪೊಲಿಸ್ ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಳಗಿನ ವೇಳೆಯಲ್ಲಿ ಬಸ್ ನಿಲ್ದಾಾಣದಲ್ಲಿ ಜನಸಂದಣಿ ಸಂದರ್ಭ, ಬಸ್ ಚಾಲಕ ನಿಯಂತ್ರಣ ತಪ್ಪಿಿ ವೇಗವಾಗಿ ಬಸ್ ಚಲಾಯಿಸಿದ್ದು ಇಬ್ಬರು ಬಾಲಕರು ಬಸ್ ಚಕ್ರದಡಿಗೆ ಸಿಲುಕಿದರು. ಘಟನೆ ನಂತರ ಸ್ಥಳದಲ್ಲೇ ಆತಂಕದ ವಾತಾವರಣ ಉಂಟಾಯಿತು. ಘಟನೆ ಬಳಿಕ ಸ್ಥಳೀಯರು ಹಾಗೂ ಪ್ರಯಾಣಿಕರು ಆಕ್ರೋೋಶ ವ್ಯಕ್ತಪಡಿಸಿ ‘‘ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಲಿಂಗಸೂಗೂರಿನಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿಿವೆ. ಬಸ್ನಿಲ್ದಾಾಣದಲ್ಲಿ ಟ್ರಾಾಫಿಕ್ ನಿಯಂತ್ರಣವಿಲ್ಲ, ಸುರಕ್ಷತಾ ಕ್ರಮಗಳಿಲ್ಲ, ಇದು ನಿರ್ಲಕ್ಷ್ಯದ ಪರಾಕಾಷ್ಠೆೆ’’ ಎಂದು ಆರೋಪಿಸಿದರು. ಮೂರ್ನಾಾಲ್ಕು ತಿಂಗಳ ಹಿಂದೆ ಬಸ್ ನಿಲ್ದಾಾಣದಲ್ಲಿ ಕಾಲೇಜು ವಿದ್ಯಾಾರ್ಥಿನಿಯೊಬ್ಬಳ ಕಾಲಿನ ಮೇಲೆ ಬಸ್ ಹರಿದ ಪರಿಣಾಮ ಆಕೆ ಶಾಶ್ವತವಾಗಿ ಒಂದು ಕಾಲು ಕಳೆದುಕೊಂಡಿದ್ದಳು. ಆ ಘಟನೆಯ ನಂತರವೂ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದಿರುವುದು ಇದೀಗ ಪ್ರಶ್ನೆೆ ಎಬ್ಬಿಿಸಿದೆ. ಸಾರ್ವಜನಿಕರು ಸಾರಿಗೆ ಇಲಾಖೆಯು ಬಸ್ ನಿಲ್ದಾಾಣದ ಸುರಕ್ಷತಾ ವ್ಯವಸ್ಥೆೆಯನ್ನು ತುರ್ತು ಆಧಾರದ ಮೇಲೆ ಸುಧಾರಿಸಬೇಕು, ಸಿ.ಸಿ.ಟಿವಿ ಕ್ಯಾಾಮೆರಾ ಅಳವಡಿಸಬೇಕು, ಚಾಲಕರಿಗೆ ನಡವಳಿಕೆ ಹಾಗೂ ಸುರಕ್ಷತಾ ತರಬೇತಿ ನೀಡಬೇಕೆಂದು ಆಗ್ರಹಿಸಿದ್ದಾಾರೆ.

