ಕಲಬುರಗಿ, ಜು.30: ಕ್ಷಮೆ ಕೇಳುವುದಕ್ಕೆ ನಾವೇನು ತಪ್ಪು ಮಾಡಿಲ್ಲ. ನಾನು ಕ್ಷಮೆ ಕೇಳಿಲ್ಲ, ಕೇಳುವುದು ಇಲ್ಲ ಎಂದು ಆಳಂದ ಶಾಸಕ ಬಿ ಆರ್ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶಾಸಕಾಂಗ ಪಕ್ಷದ ಸಭೆ ಕರೆ ಎಂದಿರುವ ಶಾಸಕರು ಕ್ಷಮೆ ಕೇಳಿದ್ದಾರೆ ಎನ್ನುವ ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿ, ಯಾರು ಕ್ಷಮೆ ಕೇಳಿದ್ದಾರೋ ಗೋತ್ತಿಲ್ಲ, ನಾನಂತು ಕ್ಷಮೆ ಕೇಳಿಲ್ಲ. ಕ್ಷಮೆ ಕೇಳುವಂತಹ ಹೇಡಿತನ ನನ್ನಲ್ಲಿ ಇಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನಮ್ಮ ಆಗ್ರಹವಾಗಿತ್ತು. ಅದರಂತೆ ಸಭೆ ಕರೆದಿದ್ದರು, ಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡಿದ್ದಾರೆ ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜಿನಾಮೆ ನೀಡುವದಾಗಿ ಹೇಳಿ ಅರ್ಧಕ್ಕೆ ಎದ್ದು ಹೋರಗಿರುವ ವಿಚಾರದ ಬಗ್ಗೆ ಅವರು ಮಾತನಾಡಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಎದ್ದು ಹೊರ ನಡೆದಿದ್ದು ನಿಜ. ಆ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಅವರು ಕರೆದು ಸಮಾಧಾನ ಮಾಡಿದರು. ಆದರೆ, ನನ್ನ ಆತ್ಮ ಗೌರವಕ್ಕೆ ಧಕ್ಕೆ ಬಂದರೆ ರಾಜಿನಾಮೆ ನೀಡುವುದಾಗಿ ಹೇಳಿದ್ದೆನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋನ್ ಮಾಡಿ ಮಾತನಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕಡಿಮೆ ಹಣ ಬರುತ್ತದೆ. ಮುಂದಿನ ವರ್ಷದಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡುವದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ನಾನು ಎಲ್ಲೂ ಹೇಳಿಲ್ಲ, ಪತ್ರದಲ್ಲಿಯು ಉಲ್ಲೇಖ ಮಾಡಿಲ್ಲ. ಆ ಪತ್ರದ ಸಂಭಂಧ ನಿನ್ನೆ ಅಧಿಕಾರಿಗಳು ಬಂದು ತನಿಖೆ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.