ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ರಾಯಚೂರು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬ್ರಾಾಹ್ಮಣ ಸಮುದಾಯದ ಗಾಯತ್ರಿಿ ಭವನಕ್ಕೆೆ ಅನುದಾನ ಮಂಜೂರು ಮಾಡುವಂತೆ ಅಖಿಲ ಕರ್ನಾಟಕ ಬ್ರಾಾಹ್ಮಣ ಮಹಾಸಭಾ ರಾಯಚೂರು ಸಮಿತಿ ಸಂಸದರಿಗೆ ಮನವಿ ಸಲ್ಲಿಸಿತು.
ನಗರದ ಕಚೇರಿಯಲ್ಲಿ ಸಂಸದ ಜಿ.ಕುಮಾರ ನಾಯಕ ಅವರಿಗೆ ಸಮುದಾಯದ ಪ್ರತಿನಿಧಿಗಳು, ಮುಖಂಡರು ಮನವಿ ಸಲ್ಲಿಸಿ ನಿರ್ಮಾಣವಾಗುತ್ತಿಿರುವ ಗಾಯತ್ರಿಿ ಭವನಕ್ಕೆೆ ಸುಮಾರು 50 ಲಕ್ಷ ಅನುದಾನ ಬಿಡುಗಡೆ ಮಾಡಿ ಮುಂದಿನ ಹಂತದ ಕಟ್ಟಡಕ್ಕೆೆ ಅನುಕೂಲ ಮಾಡಿಕೊಡಲು ಕೋರಿದರು.
ಸಮುದಾಯದ ಕಾರ್ಯಕ್ರಮ ಸಾಮಾಜಿಕ, ಸಂಘಟನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಭವನ ನಿರ್ಮಾಣವಾಗುತ್ತಿಿದ್ದು ಒಳಾಂಗಣ ವ್ಯವಸ್ಥೆೆಘಿ, ಅಗತ್ಯ ಸೌಲಭ್ಯಗಳಿಗೆ ಕೇಂದ್ರದ ಯೋಜನೆಯಡಿ ಅಥವಾ ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ ಅಡಿ ನೆರವು ನೀಡಲು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಮಹಾಪೋಷಕ ನರಸಿಂಗರಾವ್ ದೇಶಪಾಂಡೆ, ವೆಂಕಟ ಕೃಷ್ಣನ್, ಜಿಲ್ಲಾ ಪ್ರತಿನಿಧಿ ರಮೇಶ ಕುಲಕರ್ಣಿ, ಹಿರಿಯರಾದ ನಂದಾಪುರ ಶ್ರೀನಿವಾಸ್, ಅರವಿಂದ ಕುಲಕರ್ಣಿ, ಅನಿಲ್ ಕುಮಾರ ಗಾರಲದಿನ್ನಿಿ, ವೇಣುಗೋಪಾಲ್ ಇನಾಮ್ದಾಾರ, ಜಯಕುಮಾರ ಗಬ್ಬೂರ, ಪ್ರಾಾಣೇಶ ಮುತಾಲಿಕ್, ಸುಧೀರ, ಪ್ರವೀಣ್ ಕುಮಾರ, ರಾಮರಾವ್ ಗಣೇಕಲ್, ವೆಂಕಟೇಶ್ ಕೋಲಾರ, ರಮೇಶ್ ಬಾದರ್ಲಿ, ಹನುಮೇಶ್ ಸರ್ಾ, ಶ್ರೀನಿವಾಸ್ ಮಲ್ದಕಲ್, ವಿಜಯೀಂದ್ರ ಸಿರವಾರ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಬ್ರಾಹ್ಮಣ ಸಮಾಜದಿಂದ ಸಂಸದರಿಗೆ ಮನವಿ ಗಾಯತ್ರಿ ಭವನಕ್ಕೆ 50 ಲಕ್ಷ ಅನುದಾನ ನೀಡಲು ಮನವಿ

