ಸುದ್ದಿಮೂಲವಾರ್ತೆ
ಕೊಪ್ಪಳ,ನ.17: ಅಳವಂಡಿ ಹಾಗು ಕಂಪ್ಲಿ ಮಧ್ಯೆದ ಸೇತುವೆ ಬಿದ್ದು ಹೋಗಿದೆ. ಈ ಸೇತುವೆ ನಿರ್ಮಿಸಬೇಕೆಂದು ಅಳವಂಡಿಯ ಜ್ಞಾನೇಶಕುಮಾರ ಪಾಲಮಾರಿ ಒತ್ತಾಯಿಸಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಅಳವಂಡಿ ಹಾಗು ಕಂಪ್ಲಿ ಮಧ್ಯೆದ ಇರುವ ಹಳ್ಳ ಕೇವಲ 100 ಮೀಟರ್ ದೂರವಿದೆ. ಸೇತುವೆ ಇಲ್ಲದ ಕಾರಣ ಈಗ ಜನರು ಸುತ್ತಿಬಳಿಸಿ 4 ಕಿಮೀ ದೂರ ಕ್ರಮಿಸಬೇಕು. ಇಲ್ಲಿ ಹಳ್ಳವು ಕೊಳಚೆ ಇರುವದರಿಂದ ದೂರ ಬಳಸಿ ಬರಲು ಆಗುತ್ತಿಲ್ಲ. ಅಲ್ಲದೆ ಈಗ ವಿದ್ಯಾರ್ಥಿಗಳು ಕಂಪ್ಲಿ ಕಡೆ ಬರಲು ಆಗದೆ ಶಿಕ್ಷಣ ದಿಂದ ವಂಚಿತರಾಗುತ್ತಾರೆ.
ಈ ಸೇತುವೆಗಾಗಿ ಈಗಿನ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಮೂರು ಬಾರಿ ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಕೆಲಸವಾಗಿಲ್ಲ. ಈ ಕುರಿತು ಶಾಸಕರು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಈ ಕುರಿತು ಇಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಸಂತಕುಮಾರ ಹಾಗು ವಿಠ್ಠಲ ಕುಲಕರ್ಣಿ ಇದ್ದರು.