ಸುದ್ದಿಮೂಲ ವಾರ್ತೆ
ಆನೇಕಲ್,ಜೂ.23 : ದೇಹ, ಮನಸ್ಸು ಮತ್ತು ಆತ್ಮವನ್ನು ಕೂಡಿಸುವ ಕಲೆ ಯೋಗ ಎಂದು ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಡಾ. ಜಿಎಂಆರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅರಿವಿನ ಟ್ರಸ್ಟ್ ಮಂದಿರ ಕಾವಲವಸಹಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕುರಿತು ಮಾತನಾಡಿದರು. ವಿಶ್ವಕ್ಕೆಲ್ಲ ಯೋಗವನ್ನು ಪರಿಚಯಿಸಿದ ದೇಶ ನಮ್ಮದು. ಆಧುನಿಕ ಜಗತ್ತಿನಲ್ಲಿ ಯೋಗವನ್ನು ತೊರೆದು ಬಾಳುವಂತಹ ಮನುಷ್ಯನಿಲ್ಲ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್ ಮಾತನಾಡಿ, ಯೋಗ ಅಭ್ಯಾಸದಿಂದ ಸರ್ವ ಖಾಯಿಲೆಗಳು ವಾಸಿಯಾಗಿ ದೇಹವನ್ನು ಸಮತೋಲನದಲ್ಲಿ ಇರಿಸುತ್ತದೆ. ಆಧುನಿಕ ಪ್ರಪಂಚದಲ್ಲಿ ಸಾವಿರಾರು ಖಾಯಿಲೆಗಳು ಬದುಕನ್ನು ನಾಶಪಡಿಸುತ್ತಿವೆ. ಈ ಸಂದರ್ಭದಲ್ಲಿ ಯೋಗ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆದೂರು ಪ್ರಕಾಶ್, ಮಾತ್ರೆಗಳೊಂದಿಗೆ ಬದುಕುತ್ತಿರುವವರು ನಿಧಾನವಾಗಿ ಯೋಗ ಮತ್ತು ವ್ಯಾಯಾಮದಿಂದ ದೇಹವನ್ನು ಸದೃಢಗೊಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದಿನ ಆಹಾರ ಪದ್ಧತಿ ಮನುಷ್ಯನಿಗೆ ಮಾರಕವಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಮಾಪತಿ ಕ. ಚಂದ್ರಶೇಖರ್ ಸಿ ಆರ್ ಪಿ ಗಳಾದ ರಾಘವೇಂದ್ರ, ಮುನಿಕೃಷ್ಣಪ್ಪ, ರವಿಕುಮಾರ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ನಾರಾಯಣ್ ಅರಳಪ್ಪನವರ್ ಬಸವರಾಜ ಬಾಳೆಕಾಯಿ, ಯೋಗ ತರಬೇತುದಾರ ಮುರುಗಣ್ಣ, ಶಿಕ್ಷಕರಾದ ಚಂದ್ರಪ್ಪ, ಮಂಜುನಾಥ್, ಮುರಳಿ ಶಶಿಕುಮಾರ್ ಮೂರ್ತಿ, ಶ್ರೀನಿವಾಸ್, ರಾಮಚಂದ್ರ, ಚಂದ್ರಣ್ಣ, ದುಂಡಪ್ಪ, ಸೌಭಾಗ್ಯ, ಸ್ವಾತಿ, ಉಮಾದೇವಿ, ಕವನ, ಶೈಲಜಾ, ಚಂದ್ರಕಲಾ, ದೇವಿಕಾ, ನಳಿನ, ಕರ ವಸೂಲಿಗಾರರಾದ ಶ್ರೀನಿವಾಸ್, ಗೋವಿಂದ್ ರಾಜ್ಇತರರಿದ್ದರು