ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ತಾಲೂಕಿನ ಶ್ರೀರಾಮನಗರ ಕ್ಯಾಾಂಪ್ ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಗೆ ಬಿಆರ್ಸಿ ಯೂನೂಸ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಇಂದು ಶಾಲೆಗೆ ಭೇಟಿ ನೀಡಿದ ಅವರು ಕುಡಿಯುವ ಆರ್ಓ ಪ್ಲಾಾಂಟ್ ಮೂಲಕ ನೀರು ಶುದ್ಧೀಕರಣ, ಶೌಚಾಲಯ, ಸ್ಮಾಾರ್ಟ್ ಕ್ಲಾಾಸ್ ನಿರ್ವಹಣೆ, ಕಿಚನ್ ಗಾರ್ಡನ್ ಹಾಗೂ ಮಕ್ಕಳ ಬರವಣಿಗೆಯನ್ನು ಪರಿಶೀಲಿಸಿದರು.
ದಾನಿಗಳ ಸಹಾಯ ಪಡೆದು ಶಾಲಾಭಿವೃದ್ದಿ ಮಾಡಿದ ಬಗ್ಗೆೆ ಮುಖ್ಯ ಶಿಕ್ಷಕಿ ಲಲಿತಾ, ಶಿಕ್ಷಕ ಮಹಾಂತೇಶ ಬಿರಾದಾರ ಅವರಿಂದ ಕೇಳಿ ತಿಳಿದು ಅತ್ಯುತ್ತಮವಾಗಿ ನಿರ್ವಹಿಸಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಿ ರಾವುತರಾವ್ ಬರೂರ ಇದ್ದರು.
ಶ್ರೀರಾಮನಗರ ಕ್ಯಾಾಂಪ್ ಶಾಲೆ ಅಭಿವೃದ್ದಿಗೆ ಬಿಆರ್ಪಿ ಮೆಚ್ಚುಗೆ

