ಸುದ್ದಿಮೂಲ ವಾರ್ತೆ ಬೀದರ್, ಡಿ.24:
ವಿಶ್ವ ರೈತ ದಿನಾಚರಣೆಯ ಅಂಗವಾಗಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಹಾಗೂ ಬೀದರ್ ಜಿಲ್ಲಾಾ ಸಮಗ್ರ ಅಭಿವೃದ್ಧಿಿ ಜಂಟಿ ಕ್ರಿಿಯಾ ಸಮಿತಿ ವತಿಯಿಂದ ನಗರದಲ್ಲಿ ರೈತ ಮುಖಂಡರ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ಆಯೋಜಿಸಲಾಯಿತು.
ಕಲ್ಯಾಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಾಪಕ ಅಧ್ಯಕ್ಷ ಲಕ್ಷಣ ದಸ್ತಿಿ ಮಾತನಾಡಿ, ಬೀದರ್ ಜಿಲ್ಲೆೆಯ ಜ್ವಲಂತ ಸಮಸ್ಯೆೆಗಳಲ್ಲಿ ಕಾರಂಜ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸರಿಯಾದ ಪರಿಹಾರ ದೊರಕದಿರುವುದು ಅತ್ಯಂತ ಗಂಭೀರ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.
2024ರ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ ಉಪಸ್ಥಿಿತಿಯಲ್ಲಿ ಕಲಬುರಗಿ ಪ್ರಾಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕಿದ್ದರೂ ವಿಳಂಬವಾಗಿದೆ. ಆದರೂ ಡಿಸೆಂಬರ್ ಅಂತ್ಯದೊಳಗೆ ವರದಿ ಸರ್ಕಾರಕ್ಕೆೆ ಸಲ್ಲಿಸಲಾಗುವುದು ಎಂದು ಪ್ರಾಾದೇಶಿಕ ಆಯುಕ್ತರು ಭರವಸೆ ನೀಡಿದ್ದಾಾರೆ ಎಂದು ತಿಳಿಸಿದರು.
ಈ ವರದಿ ಸಲ್ಲಿಕೆಯಾದ ಬಳಿಕ ಜಿಲ್ಲಾಾ ಉಸ್ತುವಾರಿ ಸಚಿವರು ಇದನ್ನು ಸವಾಲಾಗಿ ತೆಗೆದುಕೊಂಡು ಹೊಸ ವರ್ಷದ ಆರಂಭದಲ್ಲಿಯೇ ರೈತರಿಗೆ ಸಿಹಿ ಸುದ್ದಿ ನೀಡಬೇಕು ಎಂದು ಅವರು ಒತ್ತಾಾಯಿಸಿದರು.
ಸಭೆಯಲ್ಲಿ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯ ಪುನರಾರಂಭ, ಬೆಳೆಗಳಿಗೆ ವೈಜ್ಞಾಾನಿಕ ಬೆಂಬಲ ಬೆಲೆ ನಿಗದಿ ಹಾಗೂ ರೈತರು ಪಕ್ಷಾತೀತವಾಗಿ ಒಂದಾಗುವ ಅಗತ್ಯವಿದೆ ಎಂಬ ಮೂರು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಎಲ್ಲ ರೈತರು ಕೈ ಎತ್ತಿಿ ಅಂಗೀಕರಿಸಿದರು.
ಹಿರಿಯ ನ್ಯಾಾಯವಾದಿ ಹಾಗೂ ರೈತ ಹೋರಾಟಗಾರ ಬಾಬು ಹೊನ್ನಾಾ ನಾಯಕ ಮಾತನಾಡಿ, ಜನವರಿ 16ರಂದು ನಡೆಯುವ ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ರೈತರಿಗೆ ಮಾಸಿಕ ಗೌರವಧನ ನೀಡುವ ವಿಷಯದಲ್ಲೂ ಧ್ವನಿ ಎತ್ತುವ ಅಗತ್ಯವಿದೆ ಎಂದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಬರುವ ವರ್ಷದ ಮೊದಲ ತಿಂಗಳಲ್ಲೇ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಹೋರಾಟ ಪುನರಾರಂಭವಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರರಾದ ರಾಜಪ್ಪ ಕೋಸಂ, ಡಾ. ರಾಜಶೇಖರ, ಜ್ಞಾಾನೋದಯ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ದಶರಥ ಗುರು, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಾಯಿ ಸಮಿತಿ ಸದಸ್ಯ ವಿನಯ್ ಕುಮಾರ್ ಮಾಳಗೆ, ಹರ್ಷವರ್ಧನ್ ರಾಥೋಡ್, ಸಂಗಾರೆಡ್ಡಿಿ ಮೊಹಮ್ಮದ್ ಸೋಲಾಪುರಿ, ಎಂ.ಡಿ. ಯೂಸ್ು, ಲಕ್ಷ್ಮೀಬಾಯಿ ಖೌದೇ, ತೇಜಮ್ಮ ಹಿಲಾಲ್ಪುರ್, ಶಂಕರ ರಾವ್ ಮನ್ನಳ್ಳಿಿ, ಶಿವ ಬಗದಲ, ಮಾದಪ್ಪ ಬಸವರಾಜ ಹಿಂದಾ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊೊಂಡು ಚರ್ಚೆ ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಂಡರು.
ಸಭೆಯನ್ನು ಹಿರಿಯ ಹೋರಾಟಗಾರ ವೀರಭದ್ರಪ್ಪ ಉಪ್ಪಿಿನ ಅವರು ನಿರೂಪಿಸಿ, ಸ್ವಾಾಗತ ಕೋರಿ ವಂದಿಸಿದರು.
ರೈತ ದಿನಾಚರಣೆ ಅಂಗವಾಗಿ ದುಂಡು ಮೇಜಿನ ಸಭೆ ಬಿಎಸ್ಎಸ್ಕೆ ಪುನರಾರಂಭ ಸೇರಿ ಮೂರು ನಿರ್ಣಯಗಳಿಗೆ ಒಪ್ಪಿಗೆ

