ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕೆಆರ್ಎಸ್ ಪಕ್ಷದ ಅಭ್ಯರ್ಥಿಯಾಗಿ ಜನನಿ ವತ್ಸಲ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ನಾಮಪತ್ರ ಸಲ್ಲಿಕೆಗೆ ಕೇವಲ ಆರು ಮಂದಿ ಮಾತ್ರ ತೆರಳಬೇಕು ಎಂದಿದೆ. ನಾವು ದುಡ್ಡುಕೊಟ್ಟು ಸಾವಿರಾರು ಜನರನ್ನು ಕರೆತಂದರೆ ಮತ್ತೆ ಆ ಹಣ ಸಂಪಾದಿಸಲು ಸಾರ್ವಜನಿಕರ ಹಣವನ್ನೇ ದುರ್ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಹೀಗಾಗಿ ಒಂದು ಓಟಿಗೆ ಒಂದು ರೂಪಾಯಿ ಪಡೆದು ಜನರ ಸೇವೆಗೆ ನಿರ್ಧರಿಸಿದ್ಧೇನೆ ಎಂದು ಹೇಳಿದರು.
ಯಾರಿಗೂ ತೊಂದರೆ ಕೊಡದೆ, ಪರಿಸರ ಮಾಲಿನ್ಯ ಮಾಡದೆ, ವಾಹನ ಸಂಚಾರಿಗಳಿಗೆ ಯಾವುದೆ ತೊಂದರೆ ಇಲ್ಲದೆ ನಮ್ಮನ್ನು ಪ್ರೀತಿಸುವವರು ಪಕ್ಷದ ಪದಾಧಿಕಾರಿಗಳು ಜನ್ಮಕೊಟ್ಟ ತಂದೆ ತಾಯಿ ಅವರ ಬಳಿ ಅರ್ಶಿವಾದ ಪಡೆದು ನಾಮ ಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದರು.
ಬಸವರಾಜು, ಹಿರಿಯ ಘಟಕದ ಸಂಚಾಲಕರು ರಾಮರೆಡ್ಡಿ ಎನ್,ಕೋಲಾರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮತ್ತು ಹನುಮಂತಪ್ಪ ಹಾಗೂ ಬಿಟಿಎಂ ಕ್ಷೇತ್ರದ ಸೈನಿಕರು ಜನನಿ ವತ್ಸಲ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.