ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕಾಾಗಿ ದುಡಿದ ನಿಷ್ಠಾಾವಂತ ನಾಯಕರನ್ನು, ಕಾರ್ಯಕರ್ತರ ಬೆನ್ನಿಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ದೇವೇಗೌಡರ ಋಣ ತಾಲೂಕಿನ ಜನತೆಯ ಮೇಲಿದ್ದು ಅದನ್ನು ತೀರಿಸುವ ಕೆಲಸ ನಾವೆಲ್ಲರೂ ಮಾಡುತ್ತೇವೆ ಎಂದ ಜೆಡಿಎಸ್ ತಾಲೂಕಾಧ್ಯಕ್ಷ ಬುಡ್ಡನಗೌಡ ಜಾಗಟಗಲ್ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಇನ್ನಷ್ಟು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ತಿಳಿಸಿದರು.
ಅವರಿಂದು ನಗರದ ಅತ್ತನೂರು ಂಕ್ಷನ್ ಹಾಲ್ ನಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ತಾಲೂಕಿಗೆ ದೇವೇಗೌಡರು ನೀಡಿದ ಕೊಡುಗೆ ಹಾಗೂ ಪಕ್ಷದ ಹಲವಾರು ನಾಯಕರ ಅವಿರತ ಶ್ರಮದ ಲವಾಗಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಶಾಸಕಿಯಾಗಿ ಕರೆಮ್ಮ ನಾಯಕ ಆಯ್ಕೆೆಯಾದರು. ಮನೆ ಮನೆ ಪಾದಯಾತ್ರೆೆ ಮಾಡಿ ಅಕ್ರಮ ಮರಳುಗಾರಿಕೆ, ಮಟ್ಕಾಾ, ಜೂಜಾಟ, ಇಸ್ಪೀಟ್ ತಡೆಯುವುದಾಗಿ ಅರಕೇರಾ ತಾಲೂಕು ಕೇಂದ್ರ ರದ್ದು, ತಾಲೂಕಿನ ಕೊನೆ ಭಾಗದ ರೈತರಿಗೆ ನೀರು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಲಾಗಿತ್ತು. ಅಲ್ಲದೇ ತಮ್ಮ ಕುಟುಂಬದ ಯಾರೊಬ್ಬರು ರಾಜಕೀಯದಲ್ಲಿ ಹಾಗೂ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಆಣೆ – ಪ್ರಮಾಣ ಮಾಡಿದ್ದರಿಂದ ದೇವದುರ್ಗ ಕ್ಷೇತ್ರದ ಸ್ವಾಾಭಿಮಾನಿ ಮತದಾರರು ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿಗೆ ಕಾರಣರಾದರು. ಆದರೆ, ಗೆದ್ದ ಶಾಸಕಿ ಕರೆಮ್ಮ ನಾಯಕಿ ಅವರು ನೀಡಿದ ಭರವಸೆಗಳೆಲ್ಲ ಮರೆತು ಅವೆಲ್ಲವುಗಳಿಗೆ ಜೀವ ತುಂಬಿದ್ದಾಾರೆ. ನಿಷ್ಠಾಾವಂತ ಕಾರ್ಯಕರ್ತರಿಗೆ, ಮುಖಂಡರಿಗೆ ಗೌರವ ಇಲ್ಲದ ಸ್ಥಿಿತಿ ನಿರ್ಮಾಣವಾಗಿದೆ ಎಂದು ವಾಗ್ದಾಾಳಿ ನಡೆಸಿದರು.
ಈ ಹಿನ್ನೆೆಲೆಯಲ್ಲಿ ನಮ್ಮ ಶಾಸಕಿ ವಿರುದ್ಧ ನಾವೇ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಎಂದ ಅವರು ಯಾವುದೇ ಕಾರಣಕ್ಕೆೆ ಬುಡ್ಡನಗೌಡ ಪಕ್ಷ ಬಿಡುವ ಮಾತೇ ಇಲ್ಲ. ಹನುಮಂತಪ್ಪ ಆಲ್ಕೋೋಡ್ ಕಾಲದಿಂದಲೂ ಜೆಡಿಎಸ್ ಕಟ್ಟುವ , ತಾಲೂಕಿನ ಜನತೆಗೆ ದೇವೇಗೌಡರು ನೀಡಿದ ಕೊಡುಗೆ ನೆನಪಿಸುವ ಕೆಲಸ ಮಾಡುತ್ತಲೆ ಇದ್ದೇನೆ. ಇಂತಹ ಶಾಸಕರು ಹಲವರು ಬಂದಿದ್ದಾಾರೆ, ಹೋಗಿದ್ದಾಾರೆ,ಹೋಗುತ್ತಾಾರೆ ಆದರೆ ಕಾರ್ಯಕರ್ತರು ಪಕ್ಷ ಎನ್ನುವುದು ಶಾಶ್ವತವಾಗಿ ಉಳಿಯಬೇಕಿದೆ ಎಂದರು.
ಅಲ್ಲದೇ ದೇವದುರ್ಗ ಕ್ಷೇತ್ರದ ಮತದಾರರು ಜೆಡಿಎಸ್ ನಾಯಕತ್ವವನ್ನು ನಂಬಿ ಮತ ಹಾಕಿದ್ದಾರೆ. ಆದರೆ ಹೊಂದಾಣಿಕೆ ರಾಜಕಾರಣದಿಂದ ಜನರು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಪಕ್ಷ ದುರ್ಬಲಗೊಳಿಸಲು ಬಿಡುವುದಿಲ್ಲ. ದೇವದುರ್ಗದ ಪ್ರತಿಯೊಬ್ಬ ಕಾರ್ಯಕರ್ತರ ಮನೆಮನೆಗೆ ಹೋಗಿ ಪಕ್ಷ ಉಳಿಸಲು ಹೋರಾಟ ಮಾಡುತ್ತೇನೆ. ಯಾವುದೇ ಅಕ್ರಮ, ಅನ್ಯಾಾಯ ನಡೆಯಲು ಅವಕಾಶ ಕೊಡೋದಿಲ್ಲ. ನಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಹೋರಾಟ ಮಾಡುತ್ತೇವೆ ಎಂದರು.
ಹಿಂದುಳಿದ ತಾಲೂಕುಗಳಿಗೆ ವರ್ಷಕ್ಕೆೆ 100 ರಿಂದ 150 ಕೋಟಿ ರೂಪಾಯಿ ಅನುದಾನ ಬರುತ್ತಿಿದ್ದು ಭೂಸೇನಾ ನಿಗಮದ ಯೋಜನೆಯ ಹೆಸರಿನಲ್ಲಿ ಅಭಿವೃದ್ಧಿಿ ಕಾಮಗಾರಿ ನೀಡಲಾಗುತ್ತಿಿದೆ. ನೇರವಾಗಿ ಬಡವರಿಗೆ, ಜನರಿಗೆ ತಲುಪಬೇಕಾದ ಸೌಲಭ್ಯಗಳು ಮಧ್ಯವರ್ತಿಗಳ ಕೈಗೆ ಹೋಗುತ್ತಿಿವೆ. ಕಾಮಗಾರಿಗಳಲ್ಲಿ ಶೇ.47ರಷ್ಟು ಕಮಿಷನ್ ಕಡಿತ ಮಾಡಲಾಗುತ್ತಿಿದೆ. ಉಳಿದ ಹಣದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಾದ ಸ್ಥಿಿತಿ ಬಂದಿದೆ. ಇದರ ಪರಿಣಾಮವಾಗಿ ಕಾಮಗಾರಿಗಳ ಗುಣಮಟ್ಟ ಕುಸಿದಿದ್ದು, ಹಲವರಿಗೆ ವರ್ಷಗಳಿಂದ ಹಣ ಪಾವತಿ ಆಗಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಪಕ್ಷದ ಮುಖಂಡರಾದ ಸಿದ್ದನಗೌಡ ಮೂಡಲಗುಂಡಾ, ಭೀಮಣ್ಣಘಿ, ಶಿವರಾಜ ಕೊತ್ತದೊಡ್ಡಿಿಘಿ, ರಂಗಣ್ಣ ಕೋಲ್ಕಾಾರ್, ಚೆನ್ನಪ್ಪ ಗೆಜ್ಜೆೆಬಾವಿ, ಶಿವರಾಜ ಮುಂಡರಗಿ, ದಾವೂದ್, ಮಲ್ಲಿಕಾರ್ಜುನ ಕೊತ್ತದೊಡ್ಡಿಿಘಿ, ಶ್ರೀನಿವಾಸ ತಿಮ್ಮಾಾಪೂರ ಸೇರಿ ಕಾರ್ಯಕರ್ತರಿದ್ದರು.
ಜೆಡಿಎಸ್ ಉಳಿವಿಗಾಗಿ ಶಾಸಕಿ ಕರೆಮ್ಮ ನಾಯಕ ವಿರುದ್ಧ ಹೋರಾಟ – ಬುಡ್ಡನಗೌಡ ಪಾಟೀಲ್

