ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜೂ.1: ಕೋಚಿಮುಲ್ ವತಿಯಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಗರದ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಾಲು ವಿತರಿಸುವ ಮೂಲಕ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ರವಿಕಿರಣ್ ಮಾತನಾಡಿ, ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭ ಹಾಗೂ ಪ್ರಾಮುಖ್ಯತೆ ಕುರಿತು ಪ್ರತಿಯೊಬ್ಬರಿಗೂ ಅರಿವು ಅಗತ್ಯ ಪೌಷ್ಟಿಕಾಂಶದ ಕೊರತೆ ನೀಗಿಸಲು ಹಾಲು ಬಹಳ ಮುಖ್ಯವಾದದ್ದು ಆದ್ದರಿಂದ ನಂದಿನಿ ಹಾಲು ಬಳಸುವ ಮೂಲಕ ಆರೋಗ್ಯವಾಗಿರುವ ಜೊತೆಗೆ ರೈತರಿಗೆ ಪರೋಕ್ಷವಾಗಿ ಸಹಕರಿಸದಂತಾಗುತ್ತದೆ ಎಂದರು.
ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ನಿರ್ದೇಶನದಂತೆ ಪ್ರತಿ ವರ್ಷ ಜೂನ್ ರಂದು ಆಚರಿಸಲಾಗುತ್ತಿದೆ ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದು ಇದರ ಉದ್ದೇಶ ಆಗಿದೆ ಎಂದರು.
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜನಾಯಕ್ ಮಾತನಾಡಿ, ಕೆಎಂಎಫ್ ಮೂಲಕ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಗುಡ್ಲೈಫ್ ಹಾಲು ಪೂರೈಕೆ ಮಾಡುವ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಇದರಿಂದ ರೋಗಿಗಳಿಗೆ ಅನುಕೂಲವಾಗಲಿದೆ ಅದಕ್ಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಯ ಪರವಾಗಿ ಕೋಚಿಮುಲ್ ಮತ್ತು ಕೆಎಂಎಫ್ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೋಚಿಮುಲ್ ವಿಸ್ತರಣಾಧಿಕಾರಿ ಉಮೇಶ್ ರೆಡ್ಡಿ, ಜಯಚಂದ್ರ, ಮಂಜುನಾಥ್, ಶಂಕರ್ ಕುಮಾರ್, ಗುಲಾಬ್ ಜಾನ್,ಆರೋಗ್ಯ ಇಲಾಖೆಯ ಅಕ್ಕಲರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.