ಸುದ್ದಿಮೂಲ ವಾರ್ತೆ
ಮಾನ್ವಿ,ಏ.20: ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವಿ.ನಾಯಕ ಅಪಾರ ಜನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ವಾಲ್ಮೀಕಿ ವೃತ್ತದಿಂದ ತಹಸೀಲ್ ಕಚೇರಿವರೆಗೆ ಭಾರಿ ಪ್ರಮಾಣದ ಮೆರವಣಿಗೆ ನಡೆಸಿ ಟಿಎಪಿಸಿಎಂಎಸ್ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ನಂತರ ತಹಸೀಲ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಕ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತೆಲಂಗಾಣ ಲೋಕಸಭಾ ಸದಸ್ಯ ಇಂದ್ರಸೇನಾ ರೆಡ್ಡಿ, ಮಾನ್ವಿ ಕ್ಷೇತ್ರದ ಉಸ್ತುವಾರಿ ಕೀರ್ತಿ ರೆಡ್ಡಿ, ಮುಖಂಡರಾದ ಜೆ.ಶರಣಪ್ಪಗೌಡ, ಕೆ.ಬಸವಂತಪ್ಪ, ಮಾನಪ್ಪ ನಾಯಕ, ಕೊಟ್ರೇಶಪ್ಪ ಕೋರಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಲ್ಲನಗೌಡ ನಕ್ಕುಂದಿ, ತಿಮ್ಮಾರೆಡ್ಡಿ ಭೋಗಾವತಿ, ಶರಣಪ್ಪಗೌಡ ನಕ್ಕುಂದಿ, ಉಮೇಶ ಸಜ್ಜನ್, ಅಯ್ಯಪ್ಪ ನಾಯಕ ಮ್ಯಾಕಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.