ಸುದ್ದಿಮೂಲ ವಾರ್ತೆ ರಾಯಚೂರು, ೆ.26:
ತುಂಗಭದ್ರಾಾ ಜಲಾಶಯದ 33 ಕ್ರಸ್ಟ್ ಗೇಟ್ ಮೇ ತಿಂಗಳೊಳಗೆ ಅಳವಡಿಸಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಪ್ರಾಾಂತ ರೈತ ಸಂಘ ಜಿಲ್ಲಾಧ್ಯಕ್ಷ ಬಸವಂತರಾಯ ಗೌಡ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜಲಾಶಯಕ್ಕೆೆ ಗೇಟ್ ಅಳವಡಿಕೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿಿದ್ದು ಕಳೆದೆರಡು ತಿಂಗಳಲ್ಲಿ 10 ಗೇಟು ಅಳವಡಿಸಿದ್ದು ಮುಂದಿನ ಮೂರು ತಿಂಗಳಲ್ಲಿ 22 ಗೇಟುಗಳ ಅಳವಡಿಕೆ ಮಾಡುವುದು ಅನುಮಾನವಿದ್ದು ಇನ್ನಾಾದರೂ ಜವಾಬ್ದಾಾರಿ ಹೊತ್ತ ತುಂಗಭದ್ರಾಾ ಆಡಳಿತ ಮಂಡಳಿ ಅಧಿಕಾರಿಗಳು ನೀಡಿದ ಭರವಸೆಯಂತೆ ಏಪ್ರಿಿಲ್ ತಿಂಗಳಾಂತ್ಯಕ್ಕೆೆ ಕೆಲಸ ಪೂರ್ಣ ಮಾಡಿಸಬೇಕು.33 ಕ್ರಸ್ಟ್ ಗೇಟ್ ಅಳವಡಿಕೆ 45 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರ್ಧಾರವಿದ್ದು ಮುಂಗಾರಿಗಾದರೂ ನೀರಿನ ಅಭಾವ ರೈತರಿಗೆ ಆಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಿಸಲು ಆಗ್ರಹಿಸಿದರು.
ತುಂಗಭದ್ರಾಾ ಅಚ್ಚುಕಟ್ಟು ಪ್ರದೇಶದ ರೈತರು ಅತಿವೃಷ್ಟಿಿಯಿಂದ ಭತ್ತ ಮತ್ತು ಇತರ ಬೆಳೆಗಳ ಇಳುವರಿ ತಗ್ಗಿಿ ಅಪಾರ ನಷ್ಟ ಅನುಭವಿಸಿದ್ದಾರೆ. ಅದೇ ರೀತಿ ಎರಡನೇ ಬೆಳೆಯಲ್ಲಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆೆ ಗುರಿಯಾಗುವಂತೆ ಮಾಡಿದೆ.ಇದರಿಂದ ಗುಳೆ ಹೋಗುವಂತಾಗಿದೆ. ಉದ್ಯೋೋಗ ಖಾತ್ರಿಿ ಕೆಲಸಕ್ಕೆೆ ಹಣವೇ ಪಂಚಾಯಿತಿಗಳಲ್ಲಿಲ್ಲಘಿ. ಹೀಗಾಗಿ, ಗೇಟು ಅಳವಡಿಸುವ ಕಾಮಗಾರಿಯ ವೇಗ ಹೆಚ್ಚಿಿಸಿ ಕೆಲಸ ಮಾಡಿಸಲಿ, ನವಲಿ ಸಮಾಂತರ ಜಲಾಶಯದ ಆರಂಭ ಮತ್ತು ಉಪಕಾಲುವೆ ದುರಸ್ಥಿಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕೆ.ಜಿ ವೀರೇಶ, ಹನುಮಂತಪ್ಪಘಿ, ವೆಂಕಟೇಶ ಇದ್ದರು.

