ಚಿಂತಾಮಣಿ: ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ಬರ ಬಂದು ಜನ ಪರದಾಡುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನಾ, ನೀನಾ ಎಂದು ಕಿತ್ತಾಟ ನಡೆಸುತ್ತಿದಾರೆ. ಅಧಿಕಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕೊಟ್ಟಿರುವ ಜನರ ಕಷ್ಟಕ್ಕೆ ಸ್ಪಂದಿಸಿ, ಇಲ್ಲವಾದರೇ ಅಧಿಕಾರ ಬಿಟ್ಟು ತೊಲಗಿ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಗುಡಿಗಿದ್ದಾರೆ.
ಚಿಂತಾಮಣಿ ತಾಲೂಕು ಕೈವಾರ ಹೋಬಳಿ ತಳಗವಾರ, ವೈಜಕೂರು ಗ್ರಾಮಗಳಲ್ಲಿ ಭಾನುವಾರ ರಾಜ್ಯ ಬಿಜೆಪಿ ಪಕ್ಷದ ತಂಡದಿಂದ ಬರ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಬರ ಅಧ್ಯಯನ ಪ್ರವಾಸದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ಎಸ್ ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ಛಲವಾಧಿ ನಾರಾಯಣಸ್ವಾಮಿ,ದೇವನಹಳ್ಳಿ ವೇಣುಗೋಪಾಲ್ ಮತಿತ್ತರರು ತಳಗವಾರ ಹಾಗೂ ವೈಜಕೂರು ಗ್ರಾಮಗಳಲ್ಲಿನ ಹಲವು ರೈತರ ತೋಟಗಳಿಗೆ ಬೇಟಿ ನೀಡಿ ಮಳೆ ಇಲ್ಲದೆ ಬಾಡಿಹೋಗಿರುವ ರಾಗಿ ಬೆಳೆ ಮತಿತ್ತರ ಬೆಳೆಗಳನ್ನು ವಿಕ್ಷಣೆ ಮಾಡಿ, ರೈತರೊಂದಿಗೆ ಚರ್ಚೆ ನಡೆಸಿದರು.
ಈವೇಳೆ ಮಾತನಾಡಿದ ಸಿ.ಟಿ. ರವಿ, ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆ ಕೂಡ ಬಂದಿಲ್ಲ, ಇರುವ ಆಲ್ಪಸ್ವಲ್ಪ ಬೆಳೆಯನ್ನಾದರೂ ಕಾಪಾಡಿಕೊಳ್ಳೋಣವೆಂದರೆ ರಾಜ್ಯದಲ್ಲಿನ ಕಾಂಗ್ರೇಸ್ ಸರಕಾರ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ, ಇವರ ಖಜಾನೆ ಖಾಲಿಯಾಗಿದ್ದು, ನಲವತ್ತು ಸಾವಿರ ಕೋಟಿ ನಷ್ಟ ಅಂತ ಹೇಳುತ್ತಾರೆ, 324ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇನ್ನೂ ಬಿಡುಗಡೆ ಮಾಡಿಲ್ಲ. ಇದುವರೆಗೂ ರೈತರ ಕಷ್ಟ ಸುಖಗಳನ್ನು ವಿಚಾರಿಸಲು ಯಾವುದೇ ಅಧಿಕಾರಿ ಹಾಗೂ ಸಚಿವರು ಬಂದಿಲ್ಲ. ಇವರದೇನಿದ್ದರೂ ಬೆಳಿಗ್ಗೆ ಬ್ರೇಕ್ ಪಾಸ್ಟ್, ಮಿಟಿಂಗ್, ಮದ್ಯಾಹ್ನ ಸುರ್ಜೇವಾಲ, ವೇಣುಗೋಪಾಲ್ ಜೊತೆ ಕಲೆಕ್ಷನ್ ಮಿಟಿಂಗೂ, ಸಾಯಂಕಾಲ ಡಿನ್ನರ್ ಪಾರ್ಟಿ ಇಷ್ಟೇ ಇವರ ಅಭಿವೃದ್ದಿ ಎಂದ ಅವರು ಜನತೆ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ನೀಡಿ, ಅಧಿಕಾರದಲ್ಲಿ ಕುಳ್ಳರಿಸಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಸಾದ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದರು.
ಸಂಸದ ಎಸ್ ಮುನಿಸ್ವಾಮಿ ರವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬರಗಾಲ ಆವರಸಿದ್ದು, ಈ ಕುರುಡು ಸರಕಾರ ಕಾಂಚಾಣದ ಹಿಂದೆ ಹೋಗಿ, ರೈತರನ್ನು ಕಡೆಗೆಣಿಸುತ್ತಿರುವ ವಿಷಯ ರಾಜ್ಯದ ಜನತೆಗೆ ಗೊತ್ತಿರುವ ವಿಷಯ, ಕಾಂಗ್ರೇಸ್ ಪಕ್ಷದವರು ಮೋಜು ಮಸ್ತಿಗಳನ್ನು ಮಾಡಿಕೊಂಡು ಬೆಳಗ್ಗೆ ಟಿಫನ್ ಪಾರ್ಟಿ, ರಾತ್ರಿ ಡಿನ್ನರ್ ಪಾರ್ಟಿ, ಮಾಡಿಕೊಂಡು ಸುರ್ಜೇವಾಲ ಮತ್ತು ವೇಣುಗೋಪಾಲ್ ರವರಿಗೆ ಹಣವನ್ನು ಕಲೆಕ್ಷನ್ ಮಾಡಿ ಐದು ರಾಜ್ಯಗಳ ಚುನಾವಣೆಗೆ ಕಳುಹಿಸುವಲ್ಲಿ ಬ್ಯುಸಿಯಾಗಿ ರಾಜ್ಯದ ರೈತರನ್ನು ಕಡೆಗೆಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ, ಬಿಜೆಪಿ ಪಕ್ಷದ ಮುಖಂಡರಾದ ಮಾಡಿಕೆರೆ ಆರುಣ್ ಬಾಬು, ಸೀಕಲ್ ರಾಮಚಂದ್ರಗೌಡ, ಮುನಿರಾಜು, ಬಳುವನಹಳ್ಳಿ ಲೊಕೇಶ್, ಸಂಪಂಗಿ, ಬಿಜೆಪಿ ತಾ. ಅಧ್ಯಕ್ಷ ಶಿವಾರೆಡ್ದಿ, ನಗರ ಘಟಕ ಅಧ್ಯಕ್ಷ ಮಹೇಶ್ ಬೈ,ತಳಗವಾರ ಪ್ರತಾಪ್,ಡಾಬಾ ಮಂಜು, ವೆಂಕಟಶಿವಪ್ಪ, ಮನೋಹರ್, ದೇವರಾಜ್, ಕುರುಬೂರು ರಾಜು, ಪ್ರದೀಪ್, ಆರುಣ್, ಗೋವಿಂದ, ಭಾಗ್ಯಮ್ಮ, ಸುರೇಶ್ ಸೇರಿದಂತೆ ಎಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರು ಮತಿತ್ತರರು ಉಪಸ್ಥಿತರಿದ್ದರು.