ಸುದ್ದಿಮೂಲ ವಾರ್ತೆ ಬೆಂಗಳೂರು, ಅ.16:
ಪೆರಿೆರಲ್ ವರ್ತುಲ ರಸ್ತೆೆಯನ್ನು ಬೆಂಗಳೂರು ವಾಣಿಜ್ಯ ಕಾರಿಡಾರ್ ಎಂದು ಹೆಸರು ಬದಲಿಸಿ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹಿಂದಿನ ಸರ್ಕಾರಗಳು ಈ ಯೋಜನೆ ಕೈಬಿಡಲು ನಿರ್ಧರಿಸಿದ್ದವು. ಕಾಂಗ್ರೆೆಸ್ ಸರ್ಕಾರ ಯೋಜನೆ ಕೈಬಿಡದೆ ಜಾರಿಗೊಳಿಸಲು ನಿರ್ಧರಿಸಿ ಸಚಿವ ಸಂಪುಟದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿಿ ಸಚಿವ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಿಯಲ್ಲಿ ತಿಳಿಸಿದರು.
ಪೆರಿೆರಲ್ ವರ್ತುಲ ರಸ್ತೆೆಯನ್ನು ಬೆಂಗಳೂರು ವಾಣಿಜ್ಯ ಕಾರಿರ್ಡಾ ಎಂದು ಬದಲಿಸಲಾಗಿದೆ. ಹಿಂದಿನ ಸರ್ಕಾರ 100 ಕಿ. ಮೀ. ಉದ್ದದ ರಸ್ತೆೆ ನಿರ್ಮಾಣಕ್ಕೆೆ ಯೋಜನೆ ರೂಪಿಸಿತ್ತು. ನಾವು ಒಟ್ಟು 117 ಕಿ.ಮೀ. ಉದ್ದದ ಕಾರಿರ್ಡಾ ನಿರ್ಮಿಸಲು ಸಂಪುಟದಲ್ಲಿ ಒಪ್ಪಿಿಗೆ ನೀಡಿದ್ದೇವೆ. ಬೆಂಗಳೂರು ಹೊರವಲಯದಲ್ಲಿ ಈ ಕಾರಿಡಾರ್ ಹಾದುಹೋಗಲಿದೆ. ಈಗಾಗಲೇ ಮೈಸೂರು ರಸ್ತೆೆಯ ಚಳ್ಳಘಟ್ಟದಿಂದ ಮಾಗಡಿ ರಸ್ತೆೆವರೆಗೆ ಕಾರಿಡಾರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದನ್ನು ಮುಂದುವರೆಸಿ ಮಾಗಡಿ ರಸ್ತೆೆಯಿಂದ ತುಮಕೂರು ರಸ್ತೆೆ ಹಾದು ಯಲಹಂಕ, ಕೋಗಿಲು ಮೂಲಕ ಎಲೆಕ್ಟ್ರಾಾನಿಕ್ ಸಿಟಿ ತಲುಪಲಿದೆ. ಅಲ್ಲಿಂದ ರಸ್ತೆೆ ಮುಂದುವರೆದು ಮೈಸೂರು ರಸ್ತೆೆಯಲ್ಲಿ ಅಂತ್ಯಗೊಳ್ಳಲಿದೆ. ಈ ರಸ್ತೆೆ ನಿರ್ಮಾಣವಾದರೆ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗುತ್ತದೆ ಎಂದು ಅವರು ಹೇಳಿದರು.
ಹುಡ್ಕೋೋದಿಂದ ಸಾಲ:
ಈ ಯೋಜನೆಗೆ ಒಟ್ಟು 27000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಾವು ಜಾರಿಗೊಳಿಸುವ ಪರಿಹಾರದಿಂದ ರೈತರು ಹಣದ ಬದಲು ಅಭಿವೃದ್ಧಿಿಪಡಿಸಿದ ನಿವೇಶನ ಆಯ್ಕೆೆ ಮಾಡಿಕೊಳ್ಳುವುದರಿಂದ 10 ಸಾವಿರ ಕೋಟಿ ರೂ.ಗಿಂತ ಕಡಿಮೆಯಾಗಬಹುದು. ಈಗ ಕೇಂದ್ರ ಸರ್ಕಾರದ ಹುಡ್ಕೋೋ ಸಂಸ್ಥೆೆ ಸಾಲ ನೀಡುತ್ತಿಿದೆ. ಅಂದಾಜು ಎರಡು ವರ್ಷಗಳಲ್ಲಿ ಕಾರಿಡಾರ್ ಕಾಮಗಾರಿ ಅಂತ್ಯಗೊಳಿಸಬೇಕು ಎನ್ನುವ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ದೊಡ್ಡ ಮಟ್ಟದ ಪರಿಹಾರ: ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆೆ ಅಗತ್ಯವಾದ ಭೂಮಿ ವಶಪಡಿಸಿಕೊಳ್ಳಲು ಹಲವು ರೀತಿಯ ಪರಿಹಾರಗಳನ್ನು ಸರ್ಕಾರ ಘೋಷಿಸಿದೆ. 20 ಗುಂಟೆವರೆಗಿನ ಜಮೀನು ಸ್ವಾಾಧೀನ ಪಡಿಸಿಕೊಂಡರೆ ಜಮೀನು ಮಾಲೀಕರಿಗೆ ಪರಿಹಾರವಾಗಿ ನಗದು ನೀಡಲಾಗುವುದು. ಇನ್ನು ಒಂದು ಎಕರೆ, ಎರಡು ಎಕರೆ ಜಮೀನು ಸ್ವಾಾಧೀನವಾದರೆ ಅಂತ ರೈತರಿಗೆ ಎರಡು ರೀತಿಯಲ್ಲಿ ಪರಿಹಾರ ನೀಡಲಾಗುವುದು. ಶೇ.35ರಷ್ಟು ಪರಿಹಾರ ಒಪ್ಪಿಿಕೊಂಡರೆ ರಸ್ತೆೆ ನಿರ್ಮಾಣವಾಗಿ ಉಳಿದ ಜಾಗದಲ್ಲಿ ರೈತರಿಗೆ ವಾಣಿಜ್ಯ ನಿವೇಶನ ನೀಡಲಾಗುವುದು. ಇದನ್ನು ಪಡೆದು ಅವರು ವಾಣಿಜ್ಯ ಚಟುವಟಿಕೆ ನಡೆಸಬಹುದು. ಶೇ.40 ರಷ್ಟು ಪರಿಹಾರ ಅಂದರೆ ರೈತರಿಗೆ ಬಿಡಿಎ ಅಭಿವೃದ್ಧಿಿಪಡಿಸಿದ ವಸತಿ ನಿವೇಶನ ನೀಡಲಾಗುವುದು. ರೈತರು ಬಿಡಿಎ ಅಭಿವೃದ್ಧಿಿಪಡಿಸಿದ ಯಾವುದಾದರೂ ಬಡಾವಣೆಯಲ್ಲಿ ವಸತಿ ನಿವೇಶನ ಪಡೆಯಬಹುದು. ಎ್ಎಆರ್ ಅಲ್ಲದೆ ಟಿಡಿಆರ್ ಕೂಡ ಪಡೆಯಬಹುದು ಎಂದರು.
ಈ ಪರಿಹಾರವನ್ನು ವಿರೋಧ ಪಕ್ಷದ ಕೆಲವು ನಾಯಕರು ಒಪ್ಪಿಿಕೊಂಡಿದ್ದಾರೆ. ಹೀಗಾಗಿ ರೈತರು ಭೂಮಿ ಸ್ವಾಾಧೀನಕ್ಕೆೆ ಹಿಂಜರಿಯುವುದಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಅವರು ಹೇಳಿದರು.
ಗ್ರಾಾಮೀಣ ಪ್ರದೇಶದಲ್ಲಿ ಮೂರು ಪಟ್ಟು ದರ: ಸರ್ಕಾರ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ವಶಪಡಿಸಿಕೊಳ್ಳುವ ಜಮೀನಿಗೆ ಎರಡು ರೀತಿಯಲ್ಲಿ ಪರಿಹಾರ ನೀಡಲಿದೆ. ನಗರ ಪ್ರದೇಶಗಳಲ್ಲಿ ಸ್ವಾಾಧೀನಕ್ಕೆೆ ಪಡೆಯುವ ಜಮೀನಿಗೆ ಸರ್ಕಾರದ ಮಾರ್ಗಸೂಚಿ ದರದ ಎರಡುಪಟ್ಟು ದರ ನೀಡಲಾಗುವುದು. ಗ್ರಾಾಮೀಣ ಪ್ರದೇಶದ ಜಮೀನಿಗೆ ಮೂರು ಪಟ್ಟು ದರ ನೀಡಲಾಗುವುದು ಎಂದು ಡಿಸಿಎಂ ಡಿಕೆಶಿ ಮಾಹಿತಿ ನೀಡಿದರು.
65 ಮೀಟರ್ ಅಗಲದ ರಸ್ತೆೆ
ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಗಲ 65 ಮೀಟರ್ ಇರಲಿದೆ. ಉಳಿದ 35 ಮೀಟರ್ ಜಮೀನಿನಲ್ಲಿ ಸರ್ವಿಸ್ ರಸ್ತೆೆ ನಿರ್ಮಾಣ ಮಾಡಿ ಉಳಿದ ಜಾಗವನ್ನು ವಾಣಿಜ್ಯ ನಿವೇಶನಗಳನ್ನಾಾಗಿ ಮಾರ್ಪಡಿಸಿ ಯೋಜನೆಗೆ ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ನೀಡಲಾಗುವುದು ಎಂದು ಅವರು ಹೇಳಿದರು.
ಈ ಯೋಜನೆಗೆ ಈಗಾಗಲೇ 2007ರಲ್ಲೇ ನೋಟಿಫಿಕೇಶನ್ ಮಾಡಲಾಗಿದೆ. ಈ ಯೋಜನೆಯಲ್ಲಿ ಉತ್ತರ ಭಾಗದಲ್ಲಿ 1800 ಎಕರೆ, ದಕ್ಷಿಣ ಭಾಗದಲ್ಲಿ ಕೆಲವು ವಸತಿ ಪ್ರದೇಶಗಳನ್ನು ಸೇರಿಸಿದ್ದೇವೆ. ಅನೇಕ ರೈತರು, ಕೆಲವು ವಿರೋಧ ಪಕ್ಷಗಳ ಶಾಸಕರು ಕೂಡ ಇದು ಅತ್ಯುತ್ತಮ ಯೋಜನೆಯಾಗಿದೆ ಎಂದು ನನ್ನ ಬಳಿ ಹೇಳಿದ್ದಾರೆ. ನಾನು ಅವರ ಹೆಸರು ಹೇಳಿದರೆ ಅವರ ಪಕ್ಷದಲ್ಲಿ ಅವರಿಗೆ ತೊಂದರೆಯಾಗಲಿದೆಎಂದರು.
ಮೆಟ್ರೋೋ ಮಾರ್ಗಕ್ಕೂ ಜಾಗ
ಬೆಂಗಳೂರು ವಾಣಿಜ್ಯ ಕಾರಿಡಾರ್ ರಸ್ತೆೆ ನಿರ್ಮಾಣದ ವೇಳೆ ಮೆಟ್ರೋೋ ರೈಲು ಮಾರ್ಗಕ್ಕೂ ಜಾಗ ನಿಗದಿ ಮಾಡಲಾಗುವುದು. ಅಲ್ಲದೆ ಡಬ್ಬಲ್ ಡೆಕ್ಕರ್ ರಸ್ತೆೆ ನಿರ್ಮಾಣಕ್ಕೂ ಅವಕಾಶ ಕಲ್ಪಿಿಸಲಾಗುವುದು. ಎಲ್ಲ ರೀತಿಯಿಂದ ಮುಂದಾಲೋಚನೆ ಮಾಡಿ ಯೋಜನೆ ಜಾರಿಗೊಳಿಸಲಾಗುತ್ತಿಿದೆ. ಕಾರಿಡಾರ್ನಲ್ಲಿ ಅಲ್ಲಲ್ಲಿ ಟನಲ್ಗಳು ನಿರ್ಮಾಣವಾಗುತ್ತವೆ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಾರಿಡಾರ್ ನಿರ್ಮಾಣಕ್ಕೆೆ ತಗಲುವ ಹಣವನ್ನು ಕೇಂದ್ರ ಸರ್ಕಾರದ ಹುಡ್ಕೋೋ ಸಂಸ್ಥೆೆ ಸಾಲ ನೀಡಲಿದೆ. ಯೋಜನೆ ಸಿದ್ಧವಾದ ಕೂಡಲೇ ಹುಡ್ಕೋೋ ಹಣ ಬಿಡುಗಡೆ ಮಾಡಲಿದೆ ಎಂದರು.