ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.04:
ರಾಜ್ಯದಲ್ಲಿ ದ್ವೇಷ ಭಾಷಣಕ್ಕೆೆ ಕಡಿವಾಣ ಹಾಕುವ ನಿಟ್ಟಿಿನಲ್ಲಿ ಪ್ರತಿಬಂಧಕ ವಿಧೇಯಕಕ್ಕೆೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಿಗೆ ಸೂಚಿಸಲಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಅವರು ಸದ್ದಿಗೋಷ್ಠಿಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ದ್ವೇಷ ಭಾಷಣಕ್ಕೆೆ ಕಡಿವಾಣ ಹಾಕಲು ಕರ್ನಾಟಕ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ-2025ನ್ನು ಬೆಳಗಾವಿ ಅವಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಒಪ್ಪಿಿಗೆ ನೀಡಿದೆ. ವಿಧೇಯಕದಲ್ಲಿ ದ್ವೇಷ ಭಾಷಣ ಅಂದರೆ ಯಾವುದು. ಅದಕ್ಕೆೆ ವಿಧಿಸುವ ಶಿಕ್ಷೆಗಳ ಬಗ್ಗೆೆ ಸಂಪೂರ್ಣ ಮಾಹಿತಿ ಇರಲಿದೆ ಎಂದು ಅವರು ಹೇಳಿದರು.
ಧಾರ್ಮಿಕ ದತ್ತಿಿ ವಿಧೇಯಕಕ್ಕೂ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಿಗೆ ನೀಡಿದೆ. ಬಯಲುಸೀಮೆ ತಿದ್ದುಪಡಿ ವಿಧೇಯಕ, ಮಲೆನಾಡು ಅಭಿವೃದ್ಧಿಿ ಪ್ರಾಾಧಿಕಾರ ವಿಧೇಯಕ ಜಾನುವಾರು ಹತ್ಯೆೆ ಪ್ರತಿಬಂಧಕ ಹತ್ಯೆೆ ಸಂರಕ್ಷಣೆ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲು ಒಪ್ಪಿಿಗೆ ನೀಡಿದೆ ಎಂಬುದಾಗಿ ಹೇಳಿದರು.
ಸಾಮಾಜಿಕ ಬಹಿಷ್ಕಾಾರ ನಿಷೇಧ ವಿಧೇಯಕಕ್ಕೆೆ ಒಪ್ಪಿಿಗೆ ನೀಡಲಾಗಿದೆ. ಒಟ್ಟು 8 ಬಿಲ್ ಗೆ ಅನುಮೋದನೆ ಮಾಡಿದ್ದೇವೆ. ಮತೀಯ ದ್ವೇಷ ಭಾಷಣವೂ ಇದರಲ್ಲಿ ಸೇರಿದೆ. ದ್ವೇಷ ಭಾಷಣ,ಸೈದ್ಧಾಾಂತಿಕ ನಿಲುವುಗಳ ಬಗ್ಗೆೆ ಸ್ಪಷ್ಟವಾಗಿದೆ. ವಿಧೇಯಕದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.

