ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.15:
ತಾಲೂಕಿನ ಬಾಗಳಿ ಗ್ರಾಾಮದ ವ್ಯಾಾಪ್ತಿಿಯ ರೈತರ ಜಮೀನುಗಳಲ್ಲಿ ಮಂಗಳವಾರ ರಾತ್ರಿಿ ಲಕ್ಷಾಾಂತರ ರೂ ಮೊತ್ತದ ಪಂಪ್ ಸೆಟ್ಗಳ ವಿದ್ಯುತ್ ಕೇಬಲ್ ಕಳ್ಳರು ಕದ್ದೊೊಯ್ದಿಿದ್ದಾಾರೆ.
ತಾಲೂಕಿನ ಬಾಗಳಿ-ಕೋಡಿಹಳ್ಳಿಿ- ಚಿಕ್ಕಹಳ್ಳಿಿ ಮಾರ್ಗ ಮತ್ತು ಸುತ್ತಲಿನ ಪ್ರದೇಶದ ಬಡಮ್ಮನವರ ಸಣ್ಣ ಹನುಮಂತಪ್ಪ, ಆಳನ್ನವರ ಶೇಖರಪ್ಪ, ಮಣೇಗಾರ ಕರಿಬಸಪ್ಪ, ಹೆಚ್ ಎಂ ಮಂಜುನಾಥಯ್ಯ ಸ್ವಾಾಮಿ, ಹಾಗೂ ಚೌಡಪ್ಪನವರ ಅಜ್ಜಯ್ಯ ಸೇರಿದಂತೆ ಒಟ್ಟು ಏಳೆಂಟು ಜಮೀನುಗಳಲ್ಲಿ ಕೊಳವೆಬಾವಿ (ಬೋರ್ ವೆಲ್) ನಿಂದ ಯಂತ್ರಗಾರಗಳವರೆಗೆ ಹೊರಗೆ ಬಿಟ್ಟಿಿರುವ ಕೇಬಲ್ ಅನು ಸರಣಿಯಾಗಿ ಕಳ್ಳರು ಕತ್ತರಿಸಿ ಕದ್ದೊಯ್ದಿಿದ್ದಾರೆ.
ರೈತರು ಜಮೀನುಗಳಲ್ಲಿ ಇಲ್ಲದೆ ಇರುವ ಸಮಯ ಗಮನಿಸಿ ಕೈಚಳಕ ತೋರಿದ್ದಾರೆ, ಕಳ್ಳರ ತಂಡದ ಸದಸ್ಯರು ಕಳ್ಳತನ ಮಾಡುವ ಮತ್ತು ರೈತರ ಮೇಲೆ ನಿಗಾ ವಹಿಸುವ ಪ್ರತ್ಯೇಕ ಗುಂಪು ಮಾಡಿಕೊಂಡು ಅತ್ಯಂತ ವ್ಯವಸ್ಥಿಿತವಾಗಿ ಕೃತ್ಯ ನಡೆಸುತ್ತಿಿದ್ದಾರೆ,
ಈ ಹಿಂದೆ ಕಳೆದ 3 ತಿಂಗಳ ಹಿಂದೆಯಷ್ಟೇ ಲಕ್ಷಾಂತರ ಮೌಲ್ಯದ ಕೇಬಲ್ ಅನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿಿದ್ದರು ಆಗಾಗ ನಿರಂತರವಾಗಿ ಕಳ್ಳತನ ವಾಗುತ್ತಿಿದ್ದು, ಕೇಬಲ್ಗಳನ್ನು ತಂದು ಹಾಕಲು ರೈತರು ಸಾಲ ಮಾಡಬೇಕಾದ ಅನಿವಾರ್ಯತೆ ಇದೆ, ಕೇಬಲ್ ಇಲ್ಲದೆ ಹೋದರೆ ಜಮೀನುಗಳಿಗೆ ನೀರು ಹಾಯಿಸಲು ಸಾದ್ಯವಿಲ್ಲ, ಬೆಳೆಗಳು ಬತ್ತಿಿ ಹೋಗುತ್ತವೆ, ಪೋಲಿಸ್ ಇಲಾಖೆಯವರು ಕಳ್ಳತನ ಮಾಡುವರನ್ನು ಪತ್ತೆೆ ಹಚ್ಚಿಿ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಬಿ ಬಿ ರವೀಂದ್ರ ಆಗ್ರಹಿಸಿದರು.
ಹರಪನಹಳ್ಳಿ : ರೈತರ ಜಮೀನುಗಳಲ್ಲಿ ಪಂಪ್ ಸೆಟ್ಗಳ ಕೇಬಲ್ ಸರಣಿ ಕಳ್ಳತನ

