ಸುದ್ದಿಮೂಲ ವಾರ್ತೆ ಜಾಲಹಳ್ಳಿಿ,ನ.22:
ತಾಲೂಕಿನ ತಿಂಥಣಿ ಬ್ರಿಿಡ್ಜ್ ಗ್ರಾಾಮದಲ್ಲಿ ಭತ್ತ ಸೇರಿ ಕೃಷಿ ಉತ್ಪನ್ನ ವಸ್ತುಗಳ ಸಾಗಣೆ ಮಾಡುತ್ತಿಿದ್ದ ಲಾರಿಗಳಿಂದ ಹಣ ವಸೂಲಿ ಆರೋಪದ ಮೇಲೆ ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿಿ ಸೇರಿ ನಾಲ್ವರ ವಿರುದ್ಧ ಜಾಲಹಳ್ಳಿಿ ಪೊಲೀಸ್ ಠಾಣೆಯಲ್ಲಿ ಶನಿವಾರ ಕೇಸ್ ದಾಖಲಾಗಿದೆ.
ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿಿ, ಪ್ರಭಾರ ಕಾರ್ಯದರ್ಶಿ ನೀಲಪ್ಪ ಶೆಟ್ಟಿಿ, ಚಂದ್ರು ಪರಮಣ್ಣ, ರಮೇಶ ಗುಂಡಪ್ಪ ವಿರುದ್ಧ ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್ ಅಜೀಜ್ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ ಎಂದು ಜಾಲಹಳ್ಳಿಿ ಪಿಎಸ್ಐ ವೈಶಾಲಿ ಝಳಕಿ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ತಿಂಥಣಿ ಬ್ರಿಿಡ್ಜ್ನಲ್ಲಿ ಕೃಷಿ ಉತ್ಪನ್ನ ಸಾಗಿಸುವ ಲಾರಿಗಳ ಮೇಲೆ ಎಪಿಎಂಸಿ ಅಧ್ಯಕ್ಷರು, ಇಬ್ಬರು ಸಿಬ್ಬಂದಿಯನ್ನು ನೇಮಿಸಿ ಶುಲ್ಕ ವಸೂಲಿ ಮಾಡುತ್ತಿಿದ್ದರು.
ಪ್ರತಿಲಾರಿ 100ರೂ.ವಸೂಲಿ ಮಾಡಿ ಅವ್ಯವಹಾರ ನಡೆಸಲಾಗುತ್ತಿಿತ್ತು. ಎಪಿಎಂಸಿ ನಿಯಮದಲ್ಲಿ ಲಾರಿಗಳಿಗೆ ಶುಲ್ಕ ವಸೂಲಿ ಇಲ್ಲ. ಆದರೆ ನಿಯಮಬಾಹಿರ ವಸೂಲಿ ಮಾಡಲಾಗುತ್ತಿಿದೆ ಎಂದು ಅಬ್ದುಲ್ ಅಜೀಜ್ ದೂರಿನಲ್ಲಿ ತಿಳಿಸಿದ್ದಾರೆ.

