ಸುದ್ದಿಮೂಲ ವಾರ್ತೆ ಚಿಂದ್ವಾಾರ (ಮಧ್ಯ ಪ್ರದೇಶ) , ಅ.05:
ಕೋಲ್ಡ್ರ್ಿ ಕೆಮ್ಮಿಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪೊಲೀಸರು ಡಾ. ಪ್ರವೀಣ್ ಸೋನಿ ಎಂಬ ವೈದ್ಯನನ್ನು ಭಾನುವಾರ ಬಂಧಿಸಿದ್ದಾರೆ.
ಕೋಲ್ಡ್ರ್ೀ ಸಿರಪ್ ಸೇವಿಸಿದ ಪರಿಣಾಮ ಮಧ್ಯ ಪ್ರದೇಶದಲ್ಲಿ 10 ಮಕ್ಕಳು ಮೃತಪಟ್ಟಿಿದ್ದವು.
ಮೃತ ಮಕ್ಕಳಲ್ಲಿ ಬಹುತೇಕರು ಪರಾಸಿಯಾದಲ್ಲಿರುವ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಅವರ ಖಾಸಗಿ ಕ್ಲಿಿನಿಕ್ನಲ್ಲಿ ಚಿಕಿತ್ಸೆೆ ಪಡೆದಿದ್ದರು. ಸರ್ಕಾರಿ ವೈದ್ಯರಾಗಿಯೂ ಕೆಲಸ ಮಾಡುತ್ತಿಿರುವ ಸೋನಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿಿದ್ದ ಮಕ್ಕಳಿಗೆ ಕೋಲ್ಡ್ರಿ್ಿ ಸಿರಪ್ ಅನ್ನು ನೀಡುವಂತೆ ಸೂಚಿಸಿದ್ದರು.
ಸಿರಪ್ ತಯಾರಿಸಿದ ಕಂಪನಿ ಮತ್ತು ವೈದ್ಯ ಡಾ. ಸೋನಿ ವಿರುದ್ಧ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ನಂತರ, ವಿಶೇಷ ಪೊಲೀಸ್ ತಂಡವು ಚಿಂದ್ವಾಾರದ ರಾಜ್ಪಾಾಲ್ ಚೌಕ್ನಲ್ಲಿ ಡಾ. ಪ್ರವೀಣ್ ಸೋನಿಯನ್ನು ಬಂಧಿಸಿದೆ.
ಸರ್ಕಾರಿ ವೈದ್ಯರಾಗಿದ್ದೂ, ಡಾ. ಸೋನಿ ಖಾಸಗಿ ಚಿಕಿತ್ಸಾಾಲಯವನ್ನು ನಡೆಸುತ್ತಿಿದ್ದಾರೆ. ಚಿಕಿತ್ಸೆೆಗೆ ಬಂದ ಮಕ್ಕಳಿಗೆ ಅವರು ಕಂಪನಿಯೊಂದರ ಕೆಮ್ಮಿಿನ ಸಿರಪ್ ಅನ್ನು ಶಿಾರಸು ಮಾಡುತ್ತಿಿದ್ದರು. ಕೆಮ್ಮಿಿನ ಸಿರಪ್ ತಯಾರಿಕಾ ಕಂಪನಿ ಮತ್ತು ಡಾ. ಸೋನಿ ವಿರುದ್ಧ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 276, 105 ಮತ್ತು ಡ್ರಗ್ಸ್ ಮತ್ತು ಕಾಸ್ಮೆೆಟಿಕ್ಸ್ ಕಾಯ್ದೆೆ – 1940ರ ಸೆಕ್ಷನ್ 27ಅ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅಜಯ್ ಪಾಂಡೆ ಹೇಳಿದ್ದಾರೆ.
ಕೆಮ್ಮಿಿನ ಸಿರಪ್ ಸೇವಿಸಿದ ಆರಂಭದಲ್ಲಿ ಮಕ್ಕಳು ಚೇತರಿಸಿಕೊಳ್ಳುತ್ತಿಿರುವಂತೆ ಕಂಡುಬಂದಿದ್ದರು, ನಂತರ ತೀವ್ರ ಅನಾರೋಗ್ಯ ಸಮಸ್ಯೆೆ ಉಂಟಾಗಿ ಮೂತ್ರಪಿಂಡ ವೈಲ್ಯಗೊಂಡು ಮೃತಪಟ್ಟಿಿದ್ದಾರೆ. ಘಟನೆಯ ನಂತರ, ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿ್ಿ ತಯಾರಿಸುವ ತಮಿಳುನಾಡು ಮೂಲದ ಕಾಂಚೀಪುರಂನಲ್ಲಿರುವ ಶ್ರೀಸನ್ ಾರ್ಮಾಸ್ಯುಟಿಕಲ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದೆ.
ಸಿರಪ್ ಮಾದರಿಗಳಲ್ಲಿ ವಿಷಕಾರಿ ದ್ರಾಾವಕ ಡೈಥಿಲೀನ್ ಗ್ಲೈಕೋಲ್ ಹೆಚ್ಚಿಿರುವುದು ದೃಢಪಟ್ಟಿಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಸಿರಪ್ನಲ್ಲಿ ಶೇ.48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆೆಯಾಗಿದೆ.
ಇದರ ನಂತರ ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಸಿರಪ್ ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ಘೋಷಿಸಿದೆ. ಮಧ್ಯಪ್ರದೇಶ ಸರ್ಕಾರ ರಾಜ್ಯಾಾದ್ಯಂತ ಕೋಲ್ಡ್ರಿ್ಿ ಸಿರಪ್ ಮಾರಾಟ ಮತ್ತು ವಿತರಣೆಯ ಮೇಲೆ ನಿಷೇಧ ಹೇರಿದೆ. ಇದರ ನಡುವೆ ನೆಕ್ಸ್ಟ್ರಾಾ-ಡಿಎಸ್ ಎಂಬ ಮತ್ತೊೊಂದು ಕೆಮ್ಮಿಿನ ಸಿರಪ್ ಮಾರಾಟವನ್ನೂ ಸಹ ನಿಷೇಧಿಸಲಾಗಿದೆ. ಕೋಲ್ಡ್ರಿ್ಿ ವಿಷಕಾರಿ ಎಂದು ದೃಢೀಕರಿಸುವ ಪರೀಕ್ಷಾ ವರದಿ ಶನಿವಾರ ಬಂದಿದೆ. ಆದರೆ ನೆಕ್ಸ್ಟ್ರಾಾ-ಡಿಎಸ್ನ ಪರೀಕ್ಷಾ ಲಿತಾಂಶಗಳು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ.
ಮೂತ್ರಪಿಂಡದ ಬಯಾಪ್ಸಿಿ ನಡೆಸಿದಾಗ ಡೈಥಿಲೀನ್ ಗ್ಲೈಕೋಲ್ ವಿಷಕಾರಿ ಅಂಶ ಇರುವಿಕೆ ದೃಢಪಟ್ಟಿಿದೆ. ಮಕ್ಕಳನ್ನು ಮೊದಲು ಚಿಂದ್ವಾಾರ ಜಿಲ್ಲಾ ಆಸ್ಪತ್ರೆೆಗೆ ದಾಖಲಿಸಲಾಯಿತು. ನಂತರ ಹೆಚ್ಚಿಿನ ಚಿಕಿತ್ಸೆೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆೆ ಸ್ಥಳಾಂತರಿಸಲಾಯಿತು. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ನಾಗ್ಪುರದಲ್ಲಿ ಮೂರು ಮಕ್ಕಳು ಸಾವನ್ನಪ್ಪಿಿದರು. ಚಿಂದ್ವಾಾರದಲ್ಲಿ ಆರು ಮಕ್ಕಳು ಮೃತಪಟ್ಟಿಿದ್ದಾರೆ.
ವಿಷಕಾರಿ ಸಿರಪ್ ಮಾರುಕಟ್ಟೆೆಗೆ ಹೇಗೆ ತಲುಪಿತು ಮತ್ತು ಅದನ್ನು ಮಕ್ಕಳಿಗೆ ಏಕೆ ಸೂಚಿಸಲಾಯಿತು ಎಂಬುದರ ಕುರಿತು ಅಧಿಕಾರಿಗಳು ಈಗ ವಿಸ್ತೃತ ತನಿಖೆಯನ್ನು ಪ್ರಾಾರಂಭಿಸಿದ್ದಾರೆ.
ಕೋಲ್ಡ್ರಿ್ಿ ಸಿರಪ್ ಅನ್ನು ಮಕ್ಕಳಿಗೆ ನೀಡದಂತೆ ಮತ್ತು ಮಕ್ಕಳಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆೆ ಉಂಟಾದರೆ ತಕ್ಷಣ ಹತ್ತಿಿರದ ಆರೋಗ್ಯ ಕೇಂದ್ರಕ್ಕೆೆ ಭೇಟಿ ನೀಡುವಂತೆ ಆರೋಗ್ಯಾಾಧಿಕಾರಿಗಳು ಪೋಷಕರಿಗೆ ಮನವಿ ಮಾಡಿದ್ದಾರೆ.