ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.19:
ಪೋಕ್ಸೋೋ ಸಂತ್ರಸ್ತೆೆಯ ಸಂಪೂರ್ಣ ಮಾಹಿತಿಯನ್ನು ಬಿಜೆಪಿಯ ಪ್ರತಿಭಟನಾ ರ್ಯಾಾಲಿಯಲ್ಲಿ ಮಾಜಿ ಸಚಿವ ಬಿ.
ಶ್ರೀರಾಮುಲು ಅವರು ಬಹಿರಂಗಪಡಿಸಿದ ಕಾರಣ ಅವರ ವಿರುದ್ಧ ಪೋಕ್ಸೋೋ ಕಾಯ್ದೆೆ ಅಡಿಯಲ್ಲಿ ಬಳ್ಳಾಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿದ್ದಾಾರೆ.
ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾಾನರ್ ಗಲಭೆಯನ್ನು ಖಂಡಿಸಿ ಬಳ್ಳಾಾರಿಯ ಎಪಿಎಂಸಿ ಆವರಣದಲ್ಲಿ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನಾ ರ್ಯಾಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿಿದ್ದಾಾಗ, ಬಿ.ಶ್ರೀರಾಮುಲು ವಿದ್ಯಾಾರ್ಥಿನಿಯ ಹೆಸರು, ಕುಟುಂಬದ ವಿವರಗಳು, ಶಿಕ್ಷಣ ಸಂಸ್ಥೆೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದರು.
ಬಿ. ಶ್ರೀರಾಮುಲು ಅವರು ಭಾಷಣದಲ್ಲಿ ಸಂತ್ರಸ್ತೆೆಯ ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಾಗಿ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅವರು, ಬಳ್ಳಾಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ (ಗುನ್ನೆೆ ನಂ – 12/2026 ಕಲಂ 23(1) (2) ಪೋಕ್ಸೋೋ ಕಾಯ್ದೆೆ 2012 ಮತ್ತು 74 ಜೆಜೆ ಕಾಯ್ದೆೆ) ಅಡಿ ಪ್ರಕರಣವನ್ನು ಭಾನುವಾರ ದಾಖಲಿಸಿ, ಬಿ. ಶ್ರೀರಾಮುಲು ಅವರು ಮಾತನಾಡಿರುವ ವೀಡಿಯೋ ಮತ್ತು ಆಡಿಯೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದಾಾರೆ ಎಂದು ಹೇಳಲಾಗಿದೆ.
ಈ ಪ್ರಕರಣದ ತನಿಖಾಧಿಕಾರಿಗಳಾಗಿ ಮಹಿಳಾ ಪೊಲೀಸ್ ಠಾಣೆಯ ರಮೇಶ್ ಕುಲಕರ್ಣಿ ಅವರು ನೇಮಕಗೊಂಡಿದ್ದಾಾರೆ.

