ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.31
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ – ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಿದೆ.
ಈ ಮೊದಲು ಮುಂದಿನ ವರ್ಷದ ಮಾರ್ಚ್ 3ರಂದು ನಿಗದಿಯಾಗಿದ್ದ 10ನೇ ತರಗತಿಯ ವಿದ್ಯಾಾರ್ಥಿಗಳ ಪರೀಕ್ಷೆಯನ್ನು ಮುಂದಿನ ವರ್ಷ ಮಾರ್ಚ್ 11 ರಂದು ನಡೆಸಲಾಗುವುದು ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. 12ನೇ ತರಗತಿಯ ಪರೀಕ್ಷೆಯ ದಿನಾಂಕವನ್ನು ಏಪ್ರಿಲ್ 10ಕ್ಕೆೆ ಬದಲಾಯಿಸಲಾಗಿದೆ.
ಈ ಪರೀಕ್ಷೆ 2026ರ ಮಾರ್ಚ್ 3ರಂದು ನಿಗದಿಯಾಗಿತ್ತು. ಆಡಳಿತಾತ್ಮಕ ಕಾರಣಗಳಿಂದಾಗಿ ಪರೀಕ್ಷಾ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಸಿಬಿಎಸ್ ಇ ಶಾಲೆಗಳು ಈ ಮಾಹಿತಿಯನ್ನು ಸಂಬಂಧಪಟ್ಟ ಎಲ್ಲಾ ವಿದ್ಯಾಾರ್ಥಿಗಳು ಮತ್ತು ಪೋಷಕರಿಗೆ ತಿಳಿಸುವಂತೆ ಕೋರಿದೆ.

