ಸುದ್ದಿಮೂಲ ವಾರ್ತೆ
ನರಗುಂದ,ಏ.19: ನರಗುಂದ ಮತಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ಇಂದು ನಾಮಪತ್ರ ಸಲ್ಲಿಸಿದರು ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಬಿಜೆಪಿಯ ಅಸಂಖ್ಯಾತ ಬೆಂಬಲಿಗರು, ಮಹಿಳೆಯರು, ಕಾರ್ಯಕರ್ತರು ಮತ್ತು ಸಿ ಸಿ ಪಾಟೀಲರ ಅಭಿಮಾನಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರ ಪ್ರಮುಖ ನಾಯಕರು ಮಾತನಾಡಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ವಿವರಿಸಿ ಮತಯಾಚಿಸಿದರು.