ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.04:
ಸರಕಾರದ ಮಹತ್ವಾಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶೈಕ್ಷಣಿಕ ಅಭ್ಯುದಯದ ಹಾಗೂ ಉಚಿತ ಅನ್ನದಾಸೋಹದಂತಹ ಕಾರ್ಯಗಳನ್ನು ವೀರಶೈವ ವಿದ್ಯಾಾವರ್ಧಕದಂತಹ ಸಂಸ್ಥೆೆಗಳು ಹಾಗೂ ಮಠ ಮಾನ್ಯಗಳು ನಾಡಿನಾದ್ಯಂತ ಕೈಗೊಂಡಿರುವುದರಿಂದ ನಾವು ಶೈಕ್ಷಣಿಕ ಅಭ್ಯದಯದಲ್ಲಿ ದಾಪುಗಾಲು ಹಾಕಲು ಸಾಧ್ಯವಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರು ಅಭಿಪ್ರಾಾಯಪಟ್ಟರು.
ಪಟ್ಟಣದ ವೀರಶೈವ ವಿದ್ಯಾಾವರ್ಧಕ ಸಂಘದಡಿ ನಡೆಸಲಾಗುವ ಬಸವೇಶ್ವದ ಕಲಾ, ವಿಜ್ಞಾಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಾಲಯದ ಬೆಳ್ಳಿಿಹಬ್ಬದ ಸಂಭ್ರಮ ಕಾರ್ಯಕ್ರಮ ಶನಿವಾರ ಉದ್ಘಾಾಟಿಸಿ ಮಾತನಾಡುತ್ತ, ಶಿಕ್ಷಣದ ಎಲ್ಲಾಾ ಕೋರ್ಸ್ ತೆರೆಯುವ ಜತೆಗೆ ಬಾಲಕಿಯರ ವಸತಿ ನಿಲಯ ಹಾಗೂ ಇಂದು ಸರ್ದಾರ ವಲ್ಲಭಾಯಿ ಪಟೇಲ್ ಬಾಲಕರ ವಸತಿ ನಿಲಯ ಲೋಕಾರ್ಪಣೆಯಾಗಿರುವುದು ಈಭಾಗದ ಬಡ ಮತ್ತು ಗ್ರಾಾಮೀಣ ಮಕ್ಕಳ ಶಿಕ್ಷಣಕ್ಕೆೆ ಅನೂಕೂಲವಾಗಿದೆ.
ಆದರೆ ಸಂಸ್ಥೆೆ ನಡೆಸುವುದು ಸಣ್ಣ ಕೆಲಸವಲ್ಲ ತುಂಬಾ ಕಷ್ಟಕರ ಕಾರ್ಯವಾಗಿದೆ ,ಈ ನಿಟ್ಟಿಿನಲ್ಲಿ ಸಂಸ್ಥೆೆಗಳು ಮತ್ತು ಮಠಮಾನ್ಯಗಳು ಇಂತಹ ಕಾರ್ಯ ಕೈಗೊಂಡಿರುವುದು ಸ್ತುತ್ಯಾಾರ್ಹ ಕಾರ್ಯ ಎಂದರು.
ಉತ್ತರ ಕರ್ನಾಟಕದ ಅದರಲ್ಲೂ ಕಲ್ಯಾಾಣ ಕರ್ನಾಟಕದ ಜಿಲ್ಲೆೆಗಳ ಮಕ್ಕಳು ದಕ್ಷಿಣ ಕರ್ನಾಟಕದ ಮೈಸೂರ ಬೆಂಗಳೂರ ಧಾರವಾಡ ವಿದ್ಯಾಾರ್ಥಿಗಳ ಜತೆ ಸ್ಪರ್ಧೆ ಮಾಡುವಂತಾಗಲು ತುಂಬಾ ಶ್ರಮವಹಿಸಿದ ಅಮರೆಗೌಡರ ಕಾರ್ಯ ಪರಿಶ್ರಮ ಬಹಳಷ್ಟಿಿದೆ. 3500 ವಿದ್ಯಾಾರ್ಥಿಗಳಿಗೆ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣದ ಜವಾಬ್ದಾಾರಿ ಸಂಸ್ಥೆೆಯ ಹೆಮ್ಮೆೆಯ ವಿಷಯವಾಗಿದೆ ಎಂದರು.
ವಿಶೇಷ ಆಹ್ವಾಾನಿತರಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಉಪಕುಲಪತಿ ಡಾ, ಡಿ.ವಿ. ಪರಮಶಿವಮೂರ್ತಿ ಕಲ್ಯಾಾಣ ಪುಸ್ತಕ ಬಿಡುಗಡೆ ಮಾತನಾಡಿ ಮೈಸೂರ ಭಾಗದಲ್ಲಿ 96% ಉನ್ನತ ಶಿಕ್ಷಣ ಪಡೆದರೆ ಈ ಭಾಗದಲ್ಲಿ 43% ಮಾತ್ರ ಶಿಕ್ಷಣ ಪಡೆಯಲಾಗುತ್ತಿಿದೆ. ಆರ್ಥಿಕ ಸಮಸ್ಯೆೆಯಿಂದ ಶೇ30% ಮಕ್ಕಳು ಪದವಿ ಮತ್ತು ಉನ್ನತ ಶಿಕ್ಷಣ ಅರ್ಧಕ್ಕೆೆ ನಿಲ್ಲಿಸಿ ವಂಚಿತರಾಗದಂತೆ ಅಲೆಮಾರಿ ಜನಾಂಗವು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ ಇಂದು ದೇಶ ವೈಜ್ಞಾಾನಿಕ ತಂತ್ರಜ್ಞಾಾನ ಅಭಿವೃದ್ದಿ ಸಂಸ್ಕೃತಿಯಲ್ಲಿ ಬೇರೆ ದೇಶಗಳಿಗಿಂತ ಮುಂದಿದೆ. ಇಂದು ಬೇರೆ ದೇಶಗಳು ನಮ್ಮತ್ತ ತಿರುಗಿ ನೋಡುತ್ತಿಿವೆ. ಕಲ್ಯಾಾಣ ಕರ್ನಾಟಕದ ಭಾಗದ ಅಭಿವೃದ್ಧಿಿಗೆ ನಮ್ಮಭಾಗದ ದೊಡ್ಡ ಕೈಗಾರಿಕೆಗಳ ಸ್ಥಾಾಪನೆಯಿಂದ ವಿದ್ಯಾಾವಂತ ಯುವಕರಿಗೆ ಉದ್ಯೋೋಗಾವಕಾಶ ಕಲ್ಪಿಿಸಲು ಸರಕಾರ ಹೆಚ್ಚಿಿನ ಮಹತ್ವ ನೀಡಲು ಜನಪ್ರತಿನಿಧಿಗಳ ಜವಾಬ್ದಾಾರಿ ಮಹ್ವದ್ದಾಾಗಿದ್ದು ನಿಟ್ಟಿಿನಲ್ಲಿ ಕಾರ್ಯತತ್ವಗೊಂಡರೆ ಅಸಮತೋಲನ ನಿವಾರಣೆಯಾಗಲಿದೆ ಎಂದರು.
ಸಂಸ್ಥೆೆಯ ಅಧ್ಯಕ್ಷ ಮಾಜಿಸಚಿವ ಅಮರೇಗೌಡ ಪಾಟೀಲ್ ಬಯ್ಯಾಾಪುರ ಮಾತನಾಡಿ ಶಿಕ್ಷಣ ಸಂಸ್ಥೆೆ ನಡೆಸುವುದು ಕಷ್ಟಕರ ಕೆಲಸ. ಬಡ ಮತ್ತು ಗ್ರಾಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಂಸ್ಥೆೆಯ ಉದ್ದೇಶವಾಗಿದೆ ಎಂದರು. ಆಡಳಿತಾಧಿಕಾರಿ ಬಸವಂತರಾಯ ಕುರಿ ಸಂಸ್ಥೆೆ ಕಷ್ಟದ ಹಾದಿಯಲ್ಲಿ ನಡೆದು ಬಂದ ಹಾಗೂ ಬಡ ಗ್ರಾಾಮೀಣ ಮಕ್ಕಳ ಶೈಕ್ಷಣಿಕ ಅಭುದಯಕ್ಕೆೆ ನೀಡಿದ ಕೊಡುಗೆ ಕಷ್ಟ ಕಾಲದಲ್ಲಿ ಸಂಸ್ಥೆೆ ನಡೆಸಿದ ಮಹನೀಯ ಕಾರ್ಯ ಸ್ಮರಿಸಿದರು.
ಕಾರ್ಯದರ್ಶಿ ಭೂಪನಗೌಡ ಪಾಟೀಲ್ ಕರಡಕಲ್ ಸ್ವಾಾಗತಿಸಿದರು. ವಿಧಾನ ಪರಿಷತ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿದರು. ಶರಣಗೌಡ ಪಾಟೀಲ್ ಬಯ್ಯಾಾಪುರ, ಭೂಪನಗೌಡ, ಪ್ರಾಾಚಾರ್ಯ ಬಸವರಾಜ ಮೇಟಿ ಸೇರಿ ಗಣ್ಯರು ಶಿಕ್ಷಕರು ವಿಧ್ಯಾಾರ್ಥಿಗಳು ಸಿಬ್ಬಂದಿ ಭಾಗಿಯಾಗಿದ್ದರು. ಪ್ರಾಾಚಾರ್ಯ ವೀರೇಶ ಪವಾರ ನಿರ್ವಹಿಸಿದರು.
ವೀ.ವಿ. ಸಂಘದ ಶಾಲಾ-ಕಾಲೇಜಿನ 25ರ ಬೆಳ್ಳಿ ಹಬ್ಬದ ಸಂಭ್ರಮ ಶೈಕ್ಷಣಿಕ ಅಭ್ಯುದಯಕ್ಕೆ ಸಂಸ್ಥೆ,ಮಠಮಾನ್ಯಗಳ ಕೊಡುಗೆ ಅಪಾರ : ದರ್ಶನಾಪೂರ

