ಸುದ್ದಿಮೂಲ ವಾರ್ತೆ ನವದೆಹಲಿ, ನ.14:
ಬಿಹಾರದ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಧೂಳೀಪಟವಾಗಿ ಎನ್ಡಿಎಗೆ ಅಭೂತಪೂರ್ವ ಜಯ ದೊರೆತಿದೆ ಎಂದು ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಹೇಳಿದರು.
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಅವರು ಬಿಹಾರ ಚುನಾವಣೆಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊೊಂಡು ಮಾತನಾಡಿದರು.
ಬಿಹಾರದಲ್ಲಿ ಮತ್ತೆೆ ಜಂಗಲ್ ರಾಜ್ ಸರ್ಕಾರ ಅಧಿಕಾರಕ್ಕೆೆ ಬರದಂತೆ ಮತದಾರರು ತಡೆದಿದ್ದಾರೆ. ಇನ್ನು ಮುಂದೆ ಎಂದಿಗೂ ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತ ಬರುವುದಿಲ್ಲ. ನಾವು ಜನತಾ ಜನಾರ್ದನನ ಸೇವಕರು. ಬಿಹಾರದಲ್ಲಿ ಜನರು ಮತ್ತೆೆ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆೆ ತಂದಿದ್ದಾರೆ. ಬಿಹಾರದ ಮತದಾರರು ಈ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ. ಎನ್ಡಿಎ ಬೆಂಬಲಿಸಿದ ಬಿಹಾರದ ಜನತೆಗೆ ಹಾಗೂ ಇಡೀ ದೇಶದ ಜನರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಇದು ಎನ್ಡಿಿಎ ವಿಜಯವಲ್ಲ. ಪ್ರಜಾಪ್ರಭುತ್ವದ ವಿಜಯ. ಈ ಚುನಾವಣೆ ಭಾರತ ಚುನಾವಣಾ ಆಯೋಗದ ನಂಬಿಕೆಯನ್ನು ಹೆಚ್ಚಿಿಸಿದೆ. ಹೆಚ್ಚಿಿನ ಮತದಾನ ಮಾಡಿಸಲು ಚುನಾವಣಾ ಆಯೋಗದ ಪಾತ್ರ ಅಧಿಕವಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೇವಲ ಮೂರು ತಾಸಿನಲ್ಲಿ ಮತದಾನ ಮುಗಿದಿತ್ತು. ಮತದಾರರು ಭಯ ಇಲ್ಲದೆ ಮತದಾನ ಮಾಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಲಿಲ್ಲ. ಎರಡು ಹಂತದಲ್ಲಿ ಅಧಿಕ ಮತದಾನ ನಡೆಯಿತು. ಇದಕ್ಕೆೆಲ್ಲ ಚುನಾವಣಾ ಆಯೋಗ ಕಾರಣ ಎಂದರು.
ದೇಶದಲ್ಲಿ ಯುವಕರ ಸಂಖ್ಯೆೆ ಅಧಿಕವಾಗಿದೆ. ಅದರಲ್ಲೂ ಬಿಹಾರದ ಯುವಕರು ಮುಂಚೂಣಿಯಲ್ಲಿದ್ದಾರೆ. ಬಿಹಾರದ ಯುವಕರು ಇನ್ನು ಮುಂದೆ ಉತ್ತಮ ಶಿಕ್ಷಣ ಪಡೆಯಲಿದ್ದಾರೆ ಎಂದರು.
ಬಿಹಾರದ ಮತದಾರು ಮತದಾರರ ಪಟ್ಟಿಿಯ ವಿಶೇಷ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಬಿಹಾರದಲ್ಲಿ ನ್ಯಾಾಯಯುತವಾದ ಮತದಾನ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರಿಗೂ ಕಡ್ಡಾಾಯ. ಭಾರತದ ಜನ ಈಗ ಕೇವಲ ಅಭಿವೃದ್ಧಿಿಯನ್ನಷ್ಟೇ ನೋಡುತ್ತಿಿದ್ದಾರೆ. ಬಿಹಾರದಲ್ಲಿ ಇನ್ನೂ ಎಂದಿಗೂ ಜಂಗಲ್ ರಾಜ್ ಮರಳಿ ಬರುವುದಿಲ್ಲ. ಇಷ್ಟು ದಿವಸ ಬಿಹಾರದ ಜನರು ಜಂಗಲ್ ರಾಜ್ ವ್ಯವಸ್ಥೆೆ ಅನುಭವಿಸಿದ್ದರು ಕಾಂಗ್ರೆೆಸ್ ಮತ್ತು ಕೆಂಪು ಬಾವುಟದವರ ಹೆದರಿಕೆಯಿಂದ ಜನ ನರಳುತ್ತಿಿದ್ದರು.
ವಿರೋಧ ಪಕ್ಷಗಳು ಆಡಳಿತದ ವೇಳೆ ಹೆದ್ದಾರಿಗಳ ಅಭಿವೃದ್ಧಿಿ ಬೇಡ ಎನ್ನುತ್ತಿಿದ್ದರು. ನಾವು ಅಧಿಕಾರಕ್ಕೆೆ ಬಂದ ನಂತರ ಅಭಿವೃದ್ಧಿಿ ಕಾಣಿಸುತ್ತಿಿದೆ. ಈಗ ಬಿಹಾರದ ಜನ ಅಭಿವೃದ್ಧಿಿಯನ್ನು ನಂಬಿದ್ದಾರೆ ಎಂದರು.
ವಂಶವಾದಕ್ಕೆೆ ಅಂತ್ಯ:
ಇಂದಿನ ಲಿತಾಂಶ ರಾಜಕೀಯದಲ್ಲಿ ವಂಶವಾದವನ್ನು ಕಡೆಗಣಿಸುವಂತೆ ಮಾಡಿದೆ. . ಈ ವಂಶವಾದ ಬಿಹಾರದ ಅಭಿವೃದ್ಧಿಿಯನ್ನು ಕಡೆಗಣಿಸಿತ್ತು. ಇಲ್ಲಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ವಿರೋಧ ಪಕ್ಷಗಳು ಹಾಳು ಮಾಡಿದ್ದವು. ಬಿಹಾರದಲ್ಲಿ ಹ್ಯಾಾಟ್ರಿಿಕ್ ಗೆಲುವು ಸಿಕ್ಕಿಿರುವುದು ಇದೇ ಮೊದಲು. 3ನೇ ಬಾರಿಯೂ ಎನ್ಡಿಿಎಯನ್ನು ಅಧಿಕಾರಕ್ಕೆೆ ತಂದಿದ್ದೀರಿ. ಚೆಟ್ ಪೂಜೆಯನ್ನು ಯುನೆಸ್ಕೋೋದ ಪಾರಂಪರಿಕ ಶ್ರೇೇಣಿಗೆ ಕೇಂದ್ರ ಸರ್ಕಾರ ಶಿಾರಸ್ಸು ಮಾಡಲಿದೆ. ಮಹಾರಾಷ್ಟ್ರದಲ್ಲೂ ಕೂಡ ಜನರು ಎನ್ಡಿಎ ಒಕ್ಕೂಟವನ್ನು ಬೆಂಬಲಿಸಿದ್ದಾರೆ.
ಕಾಂಗ್ರೆೆಸ್ ಪಕ್ಷ ದಶಕಗಳಿಂದ ಹಲವು ರಾಜ್ಯಗಳಲ್ಲಿ ಅಧಿಕಾರ ಇಲ್ಲದೆ ಒದ್ದಾಡುತ್ತಿಿದೆ. ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಹೆಚ್ಚಿಿನ ಸ್ಥಾಾನ ಗಳಿಸಿಲ್ಲ. 2024ರ ಚುನಾವಣೆ ಬಳಿಕ ಆರು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆೆಸ್ ನೂರು ಸಂಖ್ಯೆೆಯನ್ನು ದಾಟಿಲ್ಲ. ಪ್ರತಿ ಚುನಾವಣೆಯಲ್ಲೂ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿಿದೆ. ಕಾಂಗ್ರೆೆಸ್ನ ಅಜೆಂಡಾ ಮಾವೋವಾದಿ ಹಾಗೂ ಮುಸ್ಲಿಿಂ ಲೀಗ್ ಆಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆೆಸ್ ವಿಭಜನೆ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಕಾಂಗ್ರೆೆಸ್ ತಾನು ಮುಳುಗುವುದರ ಜೊತೆಗೆ ಮಿತ್ರ ಪಕ್ಷಗಳನ್ನು ಮುಳುಗಿಸುತ್ತಿಿದೆ. ಬಿಹಾರದಲ್ಲಿ ಕಾಂಗ್ರೆೆಸ್ ಕೆರೆಯಲ್ಲಿ ಮುಳುಗಿ ಇತರ ಮಿತ್ರ ಪಕ್ಷಗಳನ್ನು ಮುಳುಗಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಾಳಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾಾ ಹಾಗೂ ಇತರರು ಇದ್ದರು.

