ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20:
ಜಿಲ್ಲೆಯಾದ್ಯಂತ ರೈತರ ಹಬ್ಬ ಎಳ್ಳ ಅಮಾವಾಸ್ಯೆೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರೈತರು ತಮ್ಮ ಹೊಲದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹೊಲದ ತುಂಬೆಲ್ಲಾ ಚರಗಾ ಚೆಲ್ಲಿ ಎಳ್ಳ ಅಮಾವಾಸ್ಯೆೆ ಹಬ್ಬ ಆಚರಿಸಿದರು.
ಹಳ್ಳಿಿಗಳಲ್ಲಿ ರೈತಾಪಿ ವರ್ಗದ ಕುಟುಂಬಗಳು ಹಬ್ಬದ ವಿಶೇಷವಾದ ನಾನಾ ತರಹದ ಪದಾರ್ಥಗಳಾದ ಕಡುಬು, ಭಜ್ಜಿಿ, ಭರ್ತ, ಪುಂಡಿ ಪಲ್ಲೆ, ಸಜ್ಜೆೆ ರೊಟ್ಟಿಿ ಹಾಗೂ ಹೋಳಿಗೆ ಸೇರಿ ವಿವಿಧ ರೀತಿಯ ಪದಾರ್ಥಗಳ ಮಾಡಿಕೊಂಡು ಎತ್ತಿಿನ ಬಂಡಿಯಲ್ಲಿ ತಮ್ಮ ಹೊಲಗಳಿಗೆ ತೆರಳಿ, ಕುಟುಂಬದ ಸದಸ್ಯರೆಲ್ಲರು ಒಟ್ಟಿಿಗೆ ಕುಳಿತು ರುಚಿಕರವಾದ ಊಟ ಸವಿದು ಎಳ್ಳ ಅಮಾವಾಸ್ಯೆೆ ಹಬ್ಬ ಸಂಭ್ರಮಿಸಿದರು.
ಇನ್ನೂ, ಕಲಬುರಗಿ ನಗರದ ಜನರು ಎಳ್ಳ ಅಮಾವಾಸ್ಯೆೆ ಹಬ್ಬದ ವಿಶೇಷ ಅಡುಗೆ ಮಾಡಿಕೊಂಡು, ತಮ್ಮ ಊರಿನಲ್ಲಿನ ಹೊಲಗಳಿಗೆ ಹಾಗೂ ನಗರದಲ್ಲಿನ ಉದ್ಯಾಾನಗಳಿಗೆ ತೆರಳಿ, ಹಬ್ಬದ ಊಟ ಸವಿದರು. ಅಲ್ಲದೇ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ರೈತರು ಎಳ್ಳ ಅಮಾವಾಸ್ಯೆೆ ಹಬ್ಬ ವಿಜೃಂಭಣೆಯಿಂದ ಆಚರಿಸಿದರು.
ಸಂಭ್ರಮದ ಎಳ್ಳ ಅಮಾವಾಸ್ಯೆ ಹಬ್ಬ ಆಚರಣೆ

