ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.07:
ರಾಜ್ಯದಲ್ಲಿ ಅಹಿಂದ ನಾಯಕ ಹಾಗೂ ದೀರ್ಘಾವಧಿಯ ಮುಖ್ಯಮಂತ್ರಿಿ ಯಾಗಿ ಸಿದ್ದರಾಮಯ್ಯ ನವರ ಆಡಳಿ ಕುರಿತು ಇಂದು ಸಂಜೆ ಸ್ಥಳೀಯ ನೂರಾರು ಕಾಂಗ್ರೆೆಸ್ ಕಾರ್ಯಕರ್ತರು ಗ್ರಾಾಮದ ಅಂಬೇಡ್ಕರ್ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿ ಪಟಾಕಿ ಸಿಡಿಸಿ ,ಸಿಹಿ ಹಂಚಿದರು,
ಕಾಂಗ್ರೆೆಸ್ ಮುಖಂಡ ರಾಜ ವಾಸುದೇವ ನಾಯಕ ವಕೀಲರು ಮಾತನಾಡಿ, ಸಿದ್ದರಾಮಯ್ಯ ನವರು ಕಳಂಕ ಇಲ್ಲದ ಪರಿಶುದ್ದ ಮುಖ್ಯ ಮಂತ್ರಿಿ ಯಾಗಿ ಕರ್ನಾಟಕದ ಎಲ್ಲಾ ಜನರಿಗೆ ಸಾಮಾಜಿಕ ನ್ಯಾಾಯ ಕೊಟ್ಟಿಿದ್ದಾರೆ, ರಾಜ್ಯದಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದು ದಿವಂಗತ ಮಾಜಿ ಮುಖ್ಯಮಂತ್ರಿಿ ದೇವರಾಜ ಅರಸರ ಆಡಳಿತದಂತೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿಿದ್ದಾರೆ, ಇವರು 7 ವರ್ಷ 325 ದಿನಗಳ ಕಾಲ ದೀರ್ಘಾವಧಿಯ ಮುಖ್ಯ ಮಂತ್ರಿಿ ಎಂದು ಹೆಸರು ಪಡೆದಿದ್ದಾರೆ ಎಂದು ಮಾತನಾಡಿದರು,
ಇದೆ ಸಂದರ್ಭದಲ್ಲಿ ಜಿ ಪಂ ಮಾಜಿ ಸದಸ್ಯರಾದ ಬಸವರಾಜ ಪಂಪಾಪತಿ ಮಾತನಾಡಿದರು. ಸಂಭ್ರಮಾಚರಣೆಯಲ್ಲಿ ಗ್ರಾಾಮ ಪಂಚಾಯತಿ ಸದಸ್ಯರಾದ ರಂಗನಾಥ ಕುದುರಿ, ಮುಖಂಡರಾದ ರಂಗಪ್ಪ ತೊಗರಿ, ದುರುಗಪ್ಪ ರಾಂಪಾಳಿ,ಹುಸೇನ್ ನಾಸಿ,ರಾಜ ತವಗ,ಹನುಮಂತ ಬಡಿಗೇರ,ಹುಸೇನ್ ಬಾಶ ( ಬೋದ್) ದನಂಜಯ್ಯ ಸ್ವಾಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ದೀರ್ಘಾವಧಿಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸಂಭ್ರಮಾಚರಣೆ

