ಸುದ್ದಿಮೂಲವಾರ್ತೆ
ಕೊಪ್ಪಳ,ಜು.30: ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಕರಾವಳಿ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಜಿಲ್ಲಾ ಹೋಟಲ್ ಮಾಲಿಕರ ಸಂಘ, ಶಿಕ್ಷಕರ ಕಲಾ ಸಂಘ, ಕಲರವ ಶಿಕ್ಷಕರ ಸೇವಾ ಬಳಗಗಳ ಆಶ್ರಯದಲ್ಲಿ ಮೊದಲ ಬಾರಿಗೆ ಶಿವಧೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ಅದ್ಧೂರಿಯಾಗಿ ಜರುಗಿತು.
ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರಾವಳಿಯ ಅದ್ಭುತವಾದ ಕಲೆ ವಿಶ್ವಕ್ಕೆ ಪರಿಚಯವಾಗಿದೆ, ಅದಕ್ಕೆ ಕಾಂತಾರಾ ಸಿನೆಮಾ ಹೆಚ್ಚು ಜನಪ್ರಿಯಗೊಳಿಸಿತು ಎನ್ನಬಹುದು. ಬಸವಣ್ಣನ ಹಾದಿಯಲ್ಲಿ ಸಾಗುವ ಜನ ಅಂದರೆ ಅದು ಕರಾವಳಿಯ ಈ ಹೋಡೆಲ್ ಉದ್ಯಮಿಗಳು, ಹಲವು ಜನರಿಗೆ ಕೆಲಸ ಕೊಟ್ಟು ದುಡಿದು ಶ್ರೀಮಂತರಾಗುವ ಜನ, ಸದಾ ಕೆಲಸದ ಒತ್ತಡದಲ್ಲಿ ಮನರಂಜನೆಗೆ ದೈವೀ ಕಲೆ ಯಕ್ಷಗಾನ ಆಡಿಸುವದು ಅಭಿನಂದನಾರ್ಹ ಎಂದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಜಿ. ಕೆ. ಶೆಟ್ಟಿ, ನಗರಸಭೆ ಸದಸ್ಯ ಅರುಣ ಅಪ್ಪುಶೆಟ್ಟಿ, ಸಾಹಿತಿ ಮಹಾಂತೇಶ ಮಲ್ಲನಗೌಡರ, ಹಿರಿಯ ವೈದ್ಯರಾದ ಡಾ. ಮಹೇಂದ್ರ ಕಿಂದ್ರೆ, ಉದ್ಯಮಿಗಳಾದ ಜೀವನಶೆಟ್ಟಿ, ಸಂಜೀವ ರಾವ್, ವಾಸು, ಪ್ರಾಣೇಶ ಪೂಜಾರ, ಸದಾಶಿವ ಅಮೀನ್, ಪ್ರಕಾಶ ಇತರರು ಇದ್ದರು.