ಸುದ್ದಿಮೂಲ ವಾರ್ತೆ ಸಿಂಧನೂರು, ಜ.20:
ಸಮಾಜದಲ್ಲಿ ಜಾತಿ, ಮೌಢ್ಯತೆಯ ವಿರುದ್ದ ಹರಿತವಾದ ಸಾಹಿತ್ಯದ ಮೂಲಕ ಸಮರ ಸಾರಿ ಪರಿವರ್ತನೆಗೆ ನಾಂದಿ ಹಾಡಿದರು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಅವರು ಸೋಮವಾರ ನಗರದ ಮಿನಿವಿಧಾನಸೌಧದಲ್ಲಿ ಹಮ್ಮಿಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೇಮರೆಡ್ಡಿಿ ಮಲ್ಲಮ್ಮನವರಿಂದ ಪರಿವರ್ತನೆ ಹೊಂದಿ ಯೋಗಿಯಾಗಿ, ಕವಿಯಾಗಿ, ದಾರ್ಶನಿಕರಾಗಿ, ಶರಣರಾಗಿ ಕತ್ತಲಿನ ಸಮಾಜಕ್ಕೆೆ ವೇಮನ ಚೈತನ್ಯ ನೀಡಿದರು. ಅವರು ಸಮಾಜಕ್ಕೆೆ ನೀಡಿದ ತತ್ವ ಸಿದ್ದಾಾಂತ, ವಿಚಾರಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬದುಕಬೇಕಿದೆ. ದೇಶದಲ್ಲಿ ಶೇ.40 ಜನ ಬಡತನ ರೇಖೆಗಿಂತ ಕೆಳಗಿದ್ದಾಾರೆ. ಅವರಿಗೆ ಆರ್ಥಿಕ, ಶೈಕ್ಷಣಿಕ, ಇತರ ಸೌಲಭ್ಯಗಳನ್ನು ಕಲ್ಪಿಿಸಿ ಕೊಡುವ ನಿಟ್ಟಿಿನಲ್ಲಿ ಪ್ರಯತ್ನಗಳಾಗಬೇಕಿದೆ ಎಂದರು.
ಹೋರಾಟಗಾರ ಹೆಚ್.ಎನ್.ಬಡಿಗೇರ್ ಮಾತನಾಡಿ, ವೇಮನ ಅವರ ಸಂತ, ಮಹಾತ್ಮ, ಶರಣ, ಜ್ಞಾಾನಿ, ತತ್ವಜ್ಞಾಾನಿ. ತಮ್ಮ ಹರಿತವಾದ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಅವರ ಜೀವನ ಚರಿತ್ರೆೆಯೇ ಅದ್ಭುತವಾಗಿದೆ. ಸರ್ವಜ್ಞರಷ್ಟೇ ವಚನಗಳನ್ನು ಅವರು ಬರೆದಿದ್ದಾಾರೆ. ಅವರ ವಚನಗಳು ತೆಲುಗಿನಲ್ಲಿದ್ದ ಹಿನ್ನಲೆಯಲ್ಲಿ ನಮ್ಮ ಭಾಗದಲ್ಲಿ ಹೆಚ್ಚು ಪ್ರಚಾರವಾಗಿಲ್ಲ. ಬ್ರಿಿಟೀಷ್ ಅಧಿಕಾರಿಗಳ ವೇಮನರ ವಚನಗಳನ್ನು ಅನುವಾದ ಮಾಡಿದರು. ಅವರ ಚತುಷ್ಪದಿ ಕಾವ್ಯಗಳಲ್ಲಿ ಸಮಾಜದ ಮೌಢ್ಯತೆ, ಸಂಸಾರ, ವೈಚಾರಿಕತೆ ಬಗ್ಗೆೆ ವಿಶ್ಲೇಷಣೆ ಮಾಡಿದ್ದಾಾರೆ. ಅವರ ಆಶಯಗಳು ಸಮಾಜಕ್ಕೆೆ ತಿಳಿಯಬೇಕಾದರೆ ಅವರ ಸಾಹಿತ್ಯ ಕನ್ನಡಕ್ಕೆೆ ಅನುವಾದ ಮಾಡುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ, ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಬಸವ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರಾಮನಗೌಡ ಮಲ್ಕಾಾಪುರ, ರೆಡ್ಡಿಿ ಸಮಾಜದ ಅಧ್ಯಕ್ಷ ಸತ್ಯನಗೌಡ ವಳಬಳ್ಳಾಾರಿ, ಸರ್ವೋತ್ತರೆಡ್ಡಿಿ, ನಗರ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಖಾಜಿ ಮಲಿಕ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು, ಮುಖಂಡರಾದ ರಾಜಶೇಖರ ಪಾಟೀಲ್, ಮಲ್ಲನಗೌಡ ಮಾವಿನಮಡ್ಗು, ಮಲ್ಲಿಕಾರ್ಜುನ ಜೀನೂರು, ಬಸವರಾಜ ಸಾಹುಕಾರ ಕುರುಕುಂದಾ, ತಿಮ್ಮಣ್ಣ ಸಾಹುಕಾರ ಕುರುಕುಂದಾ, ವೀರೇಶ ನಾಡಗೌಡ, ಮಹಾಂತೇಶ ಬಪ್ಪೂೂರು, ಶರಣಪ್ಪ ಗುಂಜಳ್ಳಿಿ, ಪರ್ವತರೆಡ್ಡಿಿ ಹತ್ತಿಿಗುಡ್ಡ, ಶಿರಸ್ತೆೆದಾರ ಅಂಬದಾಸ ಸೂರ್ಯವಂಶಿ ಸೇರಿದಂತೆ ಅನೇಕರು ಇದ್ದರು.
ತಾಲೂಕಾಡಳಿತದಿಂದ ವೇಮನ ಜಯಂತಿ ಆಚರಣೆ ಜಿಡ್ಡುಗಟ್ಟಿದ ಸಮಾಜಕ್ಕೆ ಚೈತನ್ಯ ನೀಡಿದ ವೇಮನ – ಬಾದರ್ಲಿ

