ಸುದ್ದಿಮೂಲ ವಾರ್ತೆ ಮೈಸೂರು, ನ.21:
ಮೆಕ್ಕೆೆ ಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿ ಇರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದ್ದು, 10 ಲಕ್ಷ ಟನ್ ಮಟ್ರಿಿಕ್ ಟನ್ ಮೆಕ್ಕೆೆಜೋಳ ಖರೀದಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಕೇಂದ್ರದಿಂದ 70 ಲಕ್ಷ ಮೆ.ಟನ್ ಮೆಕ್ಕೆೆಜೋಳ ಆಮದು ಮಾಡಿಕೊಳ್ಳುತ್ತಿಿರುವುದನ್ನು ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಶುಕ್ರವಾರ ಮೈಸೂರಿನ ವಿಮಾನ ನಿಲ್ದಾಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕ್ವಿಿಂಟಾಲ್ ಮೆಕ್ಕೆೆಜೋಳಕ್ಕೆೆ 2400 ರೂ.ಗಳ ಬೆಂಬಲ ಬೆಲೆ (ಎಂಎಸ್ಪಿಿ) ನಿಗದಿಯಾಗಿದ್ದು, ಇದುವರೆಗೆ ಖರೀದಿ ಕೇಂದ್ರ ಪ್ರಾಾರಂಭವಾಗಿಲ್ಲ. ಖರೀದಿ ಪ್ರಕ್ರಿಿಯೆ ಪ್ರಾಾರಂಭಿಸಬೇಕೆಂದು ರೈತರು ಒತ್ತಾಾಯಿಸುತ್ತಿಿದ್ದಾರೆ ಎಂದರು.
ಮೆಕ್ಕೆೆ ಜೋಳದ ಖರೀದಿ ಬಗ್ಗೆೆ ಸಂಬಂಧಪಟ್ಟ ಸಚಿವರು , ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮಾರುಕಟ್ಟೆೆಯಲ್ಲಿ ಮೆಕ್ಕೆೆ ಜೋಳದ ಬೆಲೆ ಕುಸಿತ ಕಂಡಿದ್ದು, ಉತ್ಪಾಾದನೆ ಹೆಚ್ಚಾಾಗಿದೆ. ಸುಮಾರು 55 ಲಕ್ಷ ಮೆಟ್ರಿಿಕ್ ಟನ್ ನಷ್ಟು ಮೆಕ್ಕೆೆಜೋಳವನ್ನು ರೈತರು ಬೆಳೆಯಬಹುದೆಂಬ ಅಂದಾಜಿದೆ. ರಾಜ್ಯ ಸರ್ಕಾರ, ರೈತರಿಂದ ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆೆಜೋಳ ಖರೀದಿಗೆ ಖರೀದಿ ಕೇಂದ್ರ ಸ್ಥಾಾಪಿಸಲು ಸೂಚನೆ ನೀಡಲಾಗಿದೆ. ದೇಶದಲ್ಲಿಯೇ ಹೇರಳವಾಗಿ ಮೆಕ್ಕೆೆಜೋಳವನ್ನು ಬೆಳೆದಿದ್ದು, ಅದನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಪತ್ರಮುಖೇನ ಕೋರಲಾಗುವುದು ಎಂದರು.
ಕರ್ನಾಟಕವೂ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಮೆಕ್ಕೆೆ ಜೋಳ ಉತ್ಪತ್ತಿಿಯಲ್ಲಿ ಏರಿಕೆ ಕಂಡಿದ್ದರೂ ಸಹ , ಕೇಂದ್ರ ಸರ್ಕಾರ ಸುಮಾರು 70 ಲಕ್ಷ ಮೆ.ಟನ್ ನಷ್ಟು ಮೆಕ್ಕೆೆಜೋಳವನ್ನು ಆಮದು ಮಾಡಿಕೊಳ್ಳುತ್ತಿಿದೆ. ಕೇಂದ್ರದ ಈ ನಿರ್ಧಾರದಿಂದ ನೋಡಲ್ ಏಜೆನ್ಸಿಿಗಳಾದ ನೆಡ್, ಎನ್ ಸಿ ಸಿಎ್ ಸಂಸ್ಥೆೆಗಳು ಮೆಕ್ಕೆೆ ಜೋಳ ಖರೀದಿ ಪ್ರಕ್ರಿಿಯೆ ನಡೆಸದೇ ಇರುವುದರಿಂದ, ರೈತರು ಕೆಲವಡೆ ಧರಣಿ ನಡೆಸುತ್ತಿಿದ್ದಾರೆ ಎಂದು ಟೀಕಿಸಿದರು.
ಮೆಕ್ಕೆೆಜೋಳ ಖರೀದಿಗೆ ಡಿಸ್ಟಲರಿಗಳೊಂದಿಗೆ ಚರ್ಚೆ
ಡಿಸ್ಟಿಿಲರಿಗಳು ಮೆಕ್ಕೆೆ ಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಮೆಕ್ಕೆೆಜೋಳವನ್ನು ನಿಯಮಾನುಸಾರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಿಸಲು ಡಿಸ್ಟಲರಿ ಮಾಲೀಕರೊಂದಿಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳೆಹಾನಿ ಪರಿಹಾರಕ್ಕಾಾಗಿ ಕೇಂದ್ರಕ್ಕೆೆ ಮನವಿ
ಮೆಕ್ಕೆೆ ಜೋಳದ ಜೊತೆಗೆ ಹೆಸರು ಕಾಳು ಬೆಳೆ ಸಮಸ್ಯೆೆ ಬಗ್ಗೆೆ ಚರ್ಚಿಸಲಾಗಿದ್ದು, ಇದಕ್ಕೆೆ ಸಂಬಂಧಿಸಿದ ಎ್ ಎ ಕ್ಯು ಬದಲಾವಣೆಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸುವ ಜೊತೆಗೆ ಸಂಬಂಧಪಟ್ಟವರ ತಂಡ ಈ ಬಗ್ಗೆೆ ದೆಹಲಿಗೂ ಭೇಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ.
ಇತ್ತೀಚೆಗೆ ಪ್ರಧಾನಿಯವರನ್ನು ಭೇಟಿಯಾಗಿ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಕೋರಲಾಗಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 15.5 ಲಕ್ಷ ಹೆರ್ಕ್ಟೇ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರಾಜ್ಯದ ಮನವಿಗೆ ಕೇಂದ್ರ ಪೂರಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಾಸವನ್ನು ಮುಖ್ಯಮಂತ್ರಿಿಗಳು ವ್ಯಕ್ತಪಡಿಸಿದರು.
ಕೇಂದ್ರ ಮೆಕ್ಕೆೆಜೋಳ ಆಮದು ನಿಲ್ಲಿಸಬೇಕು: ಮುಖ್ಯಮಂತ್ರಿಿ ಸಿದ್ದರಾಮಯ್ಯ ಆಗ್ರಹ 10 ಲಕ್ಷ ಮೆಟ್ರಿಿಕ್ ಟನ್ ಮೆಕ್ಕೆೆಜೋಳ ಖರೀದಿಸಲು ನಿರ್ಧಾರ

