ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.29; ಕೊಪ್ಪಳ ಜಿ.ಪಂ ಸಿಇಓ:ರಾಹುಲ್ ರತ್ನಂ ಪಾಂಡೆಯಯವರು ಅಳವಂಡಿ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನಹರಿಸಿ ಸ್ಪರ್ಧಾತ್ಮಕ ಪರೀಕ್ಷಗೆ ಸಿದ್ದರಾಗಲು ವಿದ್ಯಾರ್ಥಿಗಳಿಗೆ ಹೇಳಿದರು.
ಇದೇ ವೇಳೆ ಅಳವಂಡಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಮಕ್ಕಳ ಹಾಜರಾತಿ, ವಸತಿ ನಿಲಯದ ಆಹಾರ ದಾಸ್ತಾನು ರಿಜಿಸ್ಟರ್, ಕುಡಿಯುವ ನೀರು, ಉಪಾಹಾರ ವ್ಯವಸ್ಥೆ, ಶೌಚಾಲಯ, ಮಕ್ಕಳಿಗೆ ಕ್ರೀಡಾ ಸಾಮಗ್ರಿ, ಯೋಗಾಭ್ಯಾಸ ಸೇರಿದಂತೆ ವಸತಿ ನಿಲಯಗಳಲ್ಲಿ ಬಾಲಕಿಯರಿಗೆ ಆಯೋಜಿಸಿದ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದರು.
ಶಾಲೆಗೆ ಕಟ್ಡಡಗಳು ಅವಶ್ಯವಿರುವ ಕುರಿತು ಶಾಲಾ ಮುಖ್ಯೋಪಾಧ್ಯಯರು ವಿವರಿಸಿದರು. ಶೀಘ್ರದಲ್ಲಿಯೇ ಸಂಬಂಧಿಸಿದವರಿಗೆ ಮಾತನಾಡಿ ಕಟ್ಟಡ ಸಮಸ್ಯೆ ಬಗೆಹರಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಕಿರ್ದಿ, ಗ್ರಾಮಸ್ಥರಾದ ಮಲ್ಲಪ್ಪ ಬೆಣಕಲ್, ಪರಸಪ್ಪ ವಡ್ಡರ, ಶಾಲಾ ಮುಖ್ಯೋಪಾಧ್ಯಾಯಕಿ ಜಯಾ, ಗ್ರಾಮ ಪಂಚಾಯತಿ ಸಿಬ್ಬಂದಿ ಕರವಸೂಲಿಗಾರ ಶಿವಮೂರ್ತಿ, ಡಿಇಒ ದೇವೆಂದ್ರರಡ್ಡಿ ಹಾಜರಿದ್ದರು.