ಸುದ್ದಿಮೂಲವಾರ್ತೆ
ಕೊಪ್ಪಳ,ಆ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸಿರಿಧಾನ್ಯದ ಬಳಕೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕೊಪ್ಪಳ ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ಬಸಪ್ಪ ರವರು ಉದ್ಘಾಟಿಸಿದರು.
ಕೊಪ್ಪಳ ತಾಲೂಕಿನ ಯೋಜನಾಧಿಕಾರಿಗಳಾದ ಶ್ಜಗದೀಶ್ ಕೆ ಎಚ್ ಇವರು ಸಿರಿಧಾನ್ಯದ ಬಳಕೆಯ ಮಹತ್ವ ಹಾಗೂ ಉತ್ತಮ ಆರೋಗ್ಯ ಕಾಪಾಡುವಲ್ಲಿ ಇವುಗಳ ಬಳಕೆಯ ಕುರಿತು ಮಾಹಿತಿ ನೀಡಿದರು.
ಕೊಪ್ಪಳ ರೈತ ಉತ್ಪಾದಕ ಕಂಪನಿಯ CEO ಆಗಿರುವ ಮಂಜುನಾಥ್ ಸಿರಿಧಾನ್ಯದ ಮೌಲ್ಯವರ್ಧನೆ ಹಾಗೂ ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸಲು ಪ್ರಾರಂಭಿಸುವಂತೆ ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರು ಸಿರಿಧಾನ್ಯದ ಅಡುಗೆಯನ್ನು ತಯಾರಿಸಿದ್ದರು. ಉತ್ತಮ ಆರೋಗ್ಯ ಹೊಂದುವಲ್ಲಿ ಸಿರಿಧಾನ್ಯದ ಮಹತ್ವವನ್ನು ಸದಸ್ಯರು ತಿಳಿದರು.
ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರ ಶ್ರೀಮತಿ ಗೀತಾ ನಿರೂಪಿಸಿ ವಂದಿಸಿದರು. ಸೇವಾ ಪ್ರತಿನಿಧಿ ಶ್ರೀಮತಿ ವೀಣಾ ಹಾಗೂ ಕೇಂದ್ರದ ಸದಸ್ಯರು ಆಸಕ್ತಿಯಿಂದ ಪಾಲ್ಗೊಂಡಿದ್ದರು.