ಸುದ್ದಿಮೂಲ ವಾರ್ತೆ ಕೊಪ್ಪಳ, ಜ.01:
ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾಾ ಮಹೋತ್ಸವದ ಅಂಗವಾಗಿ ಸವಪಟ ಆರೋಹಣ ಮೂಲಕ ಜಾತ್ರೆೆಯ ಸಕಲ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಇಂದು ಶ್ರೀಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ಬಸವ ಪಟ ಆರೋಹಣ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗಿತು.
ಭಕ್ತರೆಲ್ಲರೂ ಕೂಡಿಕೊಂಡು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆೆ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಶ್ರದ್ಧೆೆಯಿಂ ಕೈಯಲ್ಲಿ ಹಿಡಿದು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ಐದು ಸಾರಿ ಪ್ರದಕ್ಷಿಣೆ ಹಾಕುತ್ತಾಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ಮುಂಭಾಗದ ಎದುರಿಗಿರುವ ಶಿಲಾಸ್ತಂಭಕ್ಕೆೆ ಬಸವಪಟವನ್ನುಆರೋಹಣಗೊಳಿಸಿದರು.
ಬಸವಪಟಆರೋಹಣ ಮಾಡುವಉದ್ದೇಶ: ನಮ್ಮದು ಕೃಷಿ ಪ್ರಧಾನ ನಾಡು.ಆಕಾರಣಕ್ಕಾಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಈ ನಾಡಿನಲ್ಲಿ ಸದಾಕಾಲ ಉತ್ತಮ ಮಳೆ, ಉತ್ತಮ ಬೆಳೆ ಬಂದುರೈತಾಪಿ ವರ್ಗಕ್ಕೆೆ ಸುಖ, ಶಾಂತಿ, ಸಮೃದ್ಧಿಿ ಸದಾದೊರೆಯಲೆಂಬ ಆಶಯಕ್ಕಾಾಗಿ ಬಸವಪಟ ಆರೋಹಣ ಕಾರ್ಯಕ್ರಮವು ಜರುಗುತ್ತದೆ. ಶ್ರೀಮಠದ ಜಾತ್ರಾಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.
ಗದ್ದುಗೆಯ ಮೇಲೆ ಶೋಭಾಯಮಾನವಾದ ಪಂಚಕಳಸಗಳು: ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಪಂಚಕಳಸಗಳು ಶೋಭಾಯಮಾನ ವಾದವು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀಗವಿಮಠದ ಕರ್ತೃ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿವಸಗಳು ಸಮೀಪಿಸುತ್ತಿಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾಾರೆ.
ನಂತರ ಆವುಗಳನ್ನು ಶೃಂಗಾರಗೊಳಿಸಿ ಶ್ರೀಗವಿಮಠಕ್ಕೆೆ ಶ್ರಧ್ದಾಾ ಭಕ್ತಿಿಯಿಂದ ಭಜನೆ, ಡೋಲು, ಭಕ್ತಿಿ ಭಾವದಿಂದ ಶ್ರೀಮಠಕ್ಕೆೆ ತರುತ್ತಾಾರೆ. ಈ ಪಂಚಕಳಸಗಳನ್ನು ಆಯಾ ಓಣಿಯ ದೈವದವರು ಶ್ರೀ ಗವಿಮಠಕ್ಕೆೆತಂದು ಏರಿಸಿ ಪೂಜೆ ಮಾಡಿಸಿ ಪ್ರಸಾದ ಪಡೆದು ಮರಳುತ್ತಾಾರೆ. ಇದು ಪ್ರತಿವರ್ಷದ ಸಂಪ್ರದಾಯ ಹಾಗೂ ಪದ್ಧತಿ. ಭಕ್ತರು ಶ್ರೀಗವಿಮಠದ ಗೋಪುರಕ್ಕೆೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾಾರೆ.
ಜಂಗಮಾರಾಧನೆ : ಶ್ರೀ ಗವಿಸಿದ್ಧೇಶ್ವರ ಜತ್ರಾಾ ಮಹೋತ್ಸವದ ನಿಮಿತ್ಯ ಶ್ರೀಮಠದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳು ಜರುಗುತ್ತವೆ. ಪಂಚ ಕಳಸಗಳ ಕಳಸಾರೋಹಣ ನಂತರ ಇದೇ ಉರಿನ ಎಲ್ಲ ಜಂಗಮ ಪುಂಗವರಿಗೆ ಭೂರಿ ಭೋಜನ ಪ್ರಸಾದ, ಜಂಗಮರಾಧನೆ ಕಾರ್ಯ ಅನೂಚಾನವಾಗಿ ನಡೆದು ಬಂದಿದೆ. ಪ್ರಸಾದದತರು ವಾಯ ದಕ್ಷಿಣೆ ಹಾಗೂ ತಾಂಬೂಲಾಧಿಗಳನ್ನು ನೀಡಿಜಂಗಮ ಯೋಗಿಗಳ ಸಮಾರಾಧನೆಯು ನೆರವೇರಿತು.
ದಾಸೋಹಕ್ಕೆೆ ಚಾಲನೆ : ಗವಿಸಿದ್ಧೇಶ್ವರ ಜಾತ್ರಾಾ ಮಹೋತ್ಸದ ಮಹಾರಥೋತ್ಸವವು ದಿನಾಂಕ ಮಹಾದಾಸೋಹಕ್ಕೆೆ ಬುಧುವಾರ ಸಂಜೆ 7:00ಗಂಟೆಗೆ ಬಿಜಕಲ್ನ ಶ್ರ್ರೀ ಶಿವಬಸವ ಸ್ವಾಾಮಿಗಳವರು ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾಾಧಿಕಾರಿಗಳಾದ ಡಾ. ಸುರೇಶ ಇಟ್ನಾಾಳ್, ಕೊಪ್ಪಳ ಜಿಲ್ಲಾಾ ಪೋಲಿಸ್ ವರಿಷ್ಠಾಾಧಿಕಾರಿಗಳಾದ ರಾಮ ಎಲ್. ಅರಸಿದ್ಧಿಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಕ್ತರು ಈ ಸಂಧರ್ಭದಲ್ಲಿ ಉಪಸ್ಥಿಿತರಿದ್ದರು. 6ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆೆ ಪ್ರಸಾದ ಸ್ವೀಕರಿಸುವದು ಮಹಾದಾಸೋಹದ ವಿಶೇಷತೆಯಾಗಿದೆ.
ದಾಸೋಹ ಸೇವೆ ಸ್ಥಳದ ವಿಶೇಷತೆಗಳು :
ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಾಲಯದ ಹರ್ಬಲ್ ಗಾರ್ಡನ್ನಲ್ಲಿ ಇರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಪ್ರಸಾದ ಸ್ವೀಕರಿಸಲು ಹೆಚ್ಚು ವಿಶಾಲವಾದ ಸ್ಥಳಾವಕಾಶ ಕಲ್ಪಿಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾಾದ ಸಾಲುಗಳನ್ನು ನಿರ್ಮಿಸಲಾಗಿದೆ.
ಕೌಂಟರ್ ವ್ಯವಸ್ಥೆೆ : ಈ ವರ್ಷ ಸುಮಾರು 76 ಕೌಂಟರಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 40 ಕೌಂಟರಗಳು ಅನ್ನ ಸಾರು, 36 ಕೌಂಟರ ಗಳು ಸಿಹಿ ಪದಾರ್ಥ ವಿತರಣೆಗೆ ನಿರ್ಮಿಸಲಾಗಿದೆ.
ರೊಟ್ಟಿಿ ಕೋಣೆ : ಅಜ್ಜನ ಜಾತ್ರೆೆ ರೊಟ್ಟಿಿ ಜಾತ್ರೆೆಯೆಂದೆ ಪ್ರಸಿದ್ಧ. ಬೃಹಾದಾಕಾರದ 45*50 ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿಿ ಸಂಗ್ರಹಣಾ ಕೊಠಡಿ ಇವೆ.
ನೀರಿನ ವ್ಯವಸ್ಥೆೆ : 70 ನಲ್ಲಿ ಇರುವ ಎರಡು ನೀರಿನ ಕಟ್ಟೆೆಗಳು, 50 ನಲ್ಲಿ ಇರುವ ಇಂದು ಕಟ್ಟೆೆಯನ್ನು ಸಿದ್ಧಗೊಳಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆೆ ನೀರನ್ನು ಸೇವಿಸುವ ಅನೂಕುಲವಾದ ವ್ಯವಸ್ಥೆೆಯಿದೆ.
ಮಾದಲಿ ಕಟ್ಟೆೆ : ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆೆಯ ವಿಶೇಷವೂ ಹೌದು ಅದಕ್ಕೆೆಂದೆ 16*6 ಅಡಿ ವಿಸ್ತೀರ್ಣದ 3, 20*6 ಅಡಿ ವಿಸ್ತೀರ್ಣದ 3 ಕಟ್ಟೆೆಗಳು ಒಟ್ಟು 6 ಮಾದಲಿ ಕಟ್ಟೆೆಗಳು ನಿರ್ಮಾಣಗೊಂಡಿವೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆೆಕವಾಗಿ ಕೌಂಟರಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆೆ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಅಲ್ಲದೇ 04 ಪ್ರವೇಶ ದ್ವಾಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೋಲಿಸರು ಇರುತ್ತಾಾರೆ. ಪ್ರಸಾದ ನಿಲಯದ ಸುತ್ತಲೂ ಪೋಲಿಸ್ ಕಣ್ಗಾಾವಲು ಇದ್ದು, ತಂತಿ ಬೇಲಿಯನ್ನೂ ಸಹ ಅಳವಡಿಸಲಾಗಿದೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣ ಸಿಸಿ ಕ್ಯಾಾಮರಾಗಳನ್ನು ಅಳವಡಿಸಲಾಗಿದೆ. ಜಾತ್ರಾಾಮಹೋತ್ಸವ ಮಹಾದಾಸೋಹದಲ್ಲಿ ಒಂದು ದಿನಕ್ಕೆೆ ಸುಮಾರು 300 ರಿಂದ 400ರವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆಗೈದರೆ, ಪ್ರಸಾದ ವಿತರಣೆಯಲ್ಲಿ ಸುಮಾರು 500 ರಿಂದ 600 ಭಕ್ತರು ಪಾಲ್ಗೊೊಳ್ಳುವರು. ಜಾತ್ರಾಾಮಹೋತ್ಸವ ಪ್ರಾಾರಂಭದಿಂದ ಮುಕ್ತಾಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊೊಳ್ಳುವರು. ಜಾತ್ರೆೆಯ ಪ್ರಾಾರಂಭದಿಂದ ಮುಕ್ತಾಾಯದವರೆಗೆ ಸುಮಾರು 15 ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನೀರಿಕ್ಷೆ ಇದೆ.
ಗವಿಮಠದ ಜಾತ್ರೆ ವಿಧ್ಯುಕ್ತ ಚಾಲನೆ

