ಸುದ್ದಿಮೂಲ ವಾರ್ತೆ ಬೆಂಗಳೂರು, ಜ.07:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ದಿಟ್ಟ ನಾಯಕತ್ವ, ದೂರದೃಷ್ಟಿಿಯ ಆಡಳಿತ ಮತ್ತು ಜನಪರ ಬದ್ಧತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಿಗೆ ಭದ್ರವಾದ ಅಡಿಪಾಯ ನಿರ್ಮಿಸಿದ ಹಿನ್ನೆೆಲೆಯಲ್ಲಿ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಿ ಅಭಿಪ್ರಾಾಯಪಟ್ಟರು.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಿಗಳಾಗಿ ಒಟ್ಟು 7 ವರ್ಷ 240 ದಿನಗಳನ್ನು ಪೂರೈಸಿದ್ದಾರೆ. ಇಷ್ಟು ಅವಧಿ ಪೂರ್ಣಗೊಳಿಸುವುದು ಸುಲಭ ಅಲ್ಲ. ಅವರ ರಾಜಕೀಯ ಬದ್ಧತೆಯಿಂದ ಇದು ಸಾಧ್ಯವಾಗಿದೆ ಎಂದರು.
ತಮ್ಮ ಆಡಳಿತ ಕಾಲದಲ್ಲಿ ಸಾಮಾಜಿಕ ನ್ಯಾಾಯವು ಕೇವಲ ಘೋಷಣೆಯಲ್ಲದೇ ಕಾರ್ಯರೂಪಕ್ಕೆೆ ಬಂದಿದ್ದು, ಸಮಾಜದ ಅಂಚಿನಲ್ಲಿರುವ ವರ್ಗಗಳಾದ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾಾತರು, ಮಹಿಳೆಯರು, ರೈತರು ಹಾಗೂ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ನೇರವಾಗಿ ತಲುಪುವಂತೆ ವ್ಯವಸ್ಥಿಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂವಿಧಾನದ ಆಶಯಗಳನ್ನು ನೆಲೆಗೊಳಿಸಿಕೊಂಡು, ಸಮಾನತೆ, ಸ್ವಾಾಭಿಮಾನ ಮತ್ತು ಮಾನವೀಯ ಮೌಲ್ಯಗಳನ್ನು ಆಡಳಿತದ ಕೇಂದ್ರ ಬಿಂದುಗೊಳಿಸಿರುವುದು ತಮ್ಮ ನಾಯಕತ್ವದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದ್ದಾರೆ.
ಪಾರದರ್ಶಕತೆ, ನೈತಿಕತೆ ಮತ್ತು ಜವಾಬ್ದಾಾರಿಯುತ ಆಡಳಿತವನ್ನು ತಾವು ಸದಾ ಪ್ರಾಾಮುಖ್ಯತೆಯಿಂದ ಅನುಸರಿಸಿದ್ದು, ಸರ್ಕಾರದ ಮೇಲಿನ ಜನರ ವಿಶ್ವಾಾಸವನ್ನು ಮತ್ತಷ್ಟು ಗಟ್ಟಿಿಗೊಳಿಸಿದೆ. ಜನಸಾಮಾನ್ಯರೊಂದಿಗೆ ನೇರ ಸಂವಾದ, ಅವರ ಸಮಸ್ಯೆೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮನೋಭಾವ ಮತ್ತು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ತಮ್ಮ ಪ್ರಯತ್ನಗಳು ತಮಗೆ ಜನನಾಯಕ ಎಂಬ ಗೌರವವನ್ನು ತಂದುಕೊಟ್ಟಿಿರುವುದು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತದೆ.
ಮುಂದಿನ ದಿನಗಳಲ್ಲಿಯೂ ನಿಮ್ಮ ಅಪಾರ ಅನುಭವ, ದೂರದೃಷ್ಟಿಿಯ ನಾಯಕತ್ವ ಮತ್ತು ಜನಪರ ಬದ್ಧತೆ ಕರ್ನಾಟಕ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಿಯ ಪಥದಲ್ಲಿ ಮುನ್ನಡೆಸಲಿ ಎಂದು ಹೊರಟ್ಟಿಿ ಶುಭ ಹಾರೈಸಿದ್ದಾರೆ.
ಸಿಎಂ ಸಿದ್ದರಾಮ್ಯರನ್ನು ಶ್ಲಾಘಿಸಿದ ಸಭಾಪತಿ ಹೊರಟ್ಟಿ ದೂರದೃಷ್ಟಿಯ ನಾಯಕತ್ವದಿಂದ ಸುದೀರ್ಘ ಅವಧಿ ಸಾಧ್ಯವಾಯಿತು

