ಸುದ್ದಿಮೂಲವಾರ್ತೆ
ಮುದಗಲ್ ಏ,೧೩: ಬದುಕು ಚೈತನ್ಯವಾಗಿರಲು ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೊಡಿಸಿಕೊಳ್ಳಬೇಕೆಂದು ತಿಮ್ಮಾಪೂರು ಕಲ್ಯಾಣಾಶ್ರಮ ಮಹಾಂತೇಶ್ವರಮಠದ ಪೂಜ್ಯರಾದ ಮಹಾಂತಸ್ವಾಮೀಜಿ ಬುಧುವಾರ ಹೇಳಿದರು.
ಪಟ್ಟಣದ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ, ಬಸವಣ್ಣನ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಜೀವನ ದರ್ಶನ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಮುದಗಲ್ ಪಟ್ಟಣ ಜಾತಿ-ಮತ ಭೇದವಿಲ್ಲದೇ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಸತ್ಕಾರದ ಸೇವಾಕಾಂಕ್ಷಿ ಮನೋಭಾವನೆ ಗುಣ ಮನುಷ್ಯನನ್ನು ಎತ್ತರಕ್ಕೆ ಬೆಳೆಯುತ್ತಾನೆ.
ವರ್ತಮಾನದಲ್ಲಿ ನಾವೆಲ್ಲರೂ ಹುಟ್ಟಿರುವುದೇ ಪುಣ್ಯ. ಭಗವಂತ ಪ್ರಾಣಿ-ಪಕ್ಷಿಗಳಿಗೆ ನೀಡದ ಅರಿವಿನ ಜ್ಞಾನವನ್ನು ಮನುಷ್ಯನಿಗೆ ಮಾತ್ರ ಕಲ್ಪಿಸಿದ್ದಾನೆ. ಶಿವಸಮಯವನ್ನು ಬಹಳ ಜಾಗೃತಿಯಿಂದ ಸುಂದರವಾಗಿ ಬಳಸಿಕೊಂಡು ಬದುಕಬೇಕು. ಸಂತೆಕೆಲ್ಲೂರು ಘನಮಠ ಶರಣರು ಅತ್ಯಂತ ಮಹತ್ವವಾದ ವಿಚಾರಗಳನ್ನು ನಾಡಿಗೆ ನೀಡಿದ್ದಾರೆ. ದೇಶದ ಸಂಸ್ಕೃತಿ, ಸಂಪ್ರದಾಯದಲ್ಲಿ ನಮ್ಮ ಹಿರಿಯರು ಮಹಿಳೆಯರಿಗೆ ಎತ್ತರದ ಸ್ಥಾನ ಕೊಟ್ಟಿದ್ದಾರೆ. ಸಮಾಜದಲ್ಲಿ ಕೇಳುವವರಿಗಿಂತ, ಹೇಳುವವರೇ ಹೆಚ್ಚಾಗಿದ್ದಾರೆ. ಇಂತಹ ವಾತಾವರಣ ಮುಂದೆ ಸಮಾಜಕ್ಕೆ ಮಾರಕ ಎಂದರು.
ಮುದಗಲ್ಲಿನ ಇತಿಹಾಸದಲ್ಲಿ ಬಹಳಷ್ಟು ಮಹತ್ವವಿದೆ. ಅದರಂತೆ ನದಿಯಲ್ಲಿ ಹಡಗು, ಆಹಾರದಲ್ಲಿ ಸ್ವಾದ, ಶರೀರದಲ್ಲಿ ಕಾಲು, ಸಂಗೀತದಲ್ಲಿ ಸ್ವರ, ಪ್ರವಚನದಲ್ಲಿ ಕೇಳುವ ಶ್ರದ್ಧೆ, ಪೂಜೆಯಲ್ಲಿ ಉತ್ತಮ ಭಾವನೆ, ಕೊರಳಲ್ಲಿ ಹಾರ, ಮನೆಯಲ್ಲಿ ಪ್ರೀತಿಯಿಂದಿರುವ ವಿಷಯಗಳಿಗೆ ಬಹಳ ಮಹತ್ವವಿರುತ್ತದೆ ಎಂದು ಹೇಳಿದರು.
ಪ್ರವಚನದ ವೇದಿಕೆಗೆ ಘನಮಠದ ಗುರುಬಸವ ಸ್ವಾಮೀಜಿ ಹಾಗೂ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿಗಳನ್ನು ಭಕ್ತರು ಆರತಿ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕರೆದ್ಯೊದ್ದರು.
ಜೀವನ ದರ್ಶನ ಆದ್ಯಾತ್ಮ ಪ್ರವಚನ ಕಾರ್ಯಕ್ರಮ ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನಾ ಮಾಡಿದರು. ಕೆಲವರನ್ನು ವೇದಿಕೆಯಲ್ಲಿ ಸನ್ಮಾನಿಸಿದರು.
ಹಿರಿಯರಾದ ಗುರುಬಸಪ್ಪ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಮಂಜುನಾಥ ಗಡದಮಠ ನಿರ್ವಹಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಆದಾಪೂರು, ವೀರಭದ್ರಯ್ಯ ಸ್ವಾಮೀ ಸರಗಣಾಚಾರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಮಾಟೂರು, ಶಿವಪ್ಪ ಸುಂಕದ, ಸಿದ್ದಯ್ಯಸ್ವಾಮೀ ಸಾಲಿಮಠ, ಮಹಾಂತೇಶ ಪಾಟೀಲ್, ವಿರುಪಾಕ್ಷಪ್ಪ ನಾಗಲಿಕರ್ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿಯರು, ಯುವಕರು, ದೇವಸ್ಥಾನದ ಭಕ್ತರು ಇದ್ದರು.