ಸುದ್ದಿಮೂಲ ವಾರ್ತೆ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಾಗಿ ಬಿಜೆಪಿಯ ಛಲವಾದಿ ನಾರಾಯಣಸ್ವಾಾಮಿ ಅವರನ್ನು ನೇಮಕ ಮಾಡಲಾಗಿದೆ.
ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆೆಯಾದ ಬಳಿಕ ವಿಧಾನ ಪರಿಷತ್ತಿಿನ ಪ್ರತಿಪಕ್ಷ ಸ್ಥಾಾನ ಖಾಲಿಯಾಗಿತ್ತು. ಈ ಹುದ್ದೆಗೆ ಸಿ.ಟಿ.ರವಿ ಮತ್ತು ಎನ್.ರವಿಕುಮಾರ ಮಧ್ಯೆೆ ಪೈಪೋಟಿ ಇತ್ತು.
ಅಚ್ಚರಿಯ ರೀತಿಯಲ್ಲಿ ಛಲವಾದಿ ನಾರಾಯಣಸ್ವಾಾಮಿ ಅವರನ್ನು ನೇಮಕ ಮಾಡಲಾಗಿದೆ.
ಛಲವಾದಿ ನಾರಾಯಣಸ್ವಾಾಮಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಅವರು ಪರಿಶಿಷ್ಟ ಬಲಗೈ ಸಮುದಾಯಕ್ಕೆೆ ಸೇರಿದವರಾಗಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಸಮರ್ಥ ಎಂಬ ಲೆಕ್ಕಾಾಚಾರದ ಮೇಲೆ ಇವರನ್ನು ನೇಮಿಸಿರುವುದಾಗಿ ಗೊತ್ತಾಾಗಿದೆ.
ವಿಧಾನಸಭೆಯಲ್ಲಿ ಒಕ್ಕಲಿಗ ಸಮುದಾಯದ ಅಶೋಕ್ ಪ್ರತಿಪಕ್ಷದ ನಾಯಕರಾಗಿರುವುದರಿದ ಸಿ.ಟಿ.ರವಿ ಅವರಿಗೆ ಅವಕಾಶ ತಪ್ಪಿಿದೆ. ಆದರೆ, ಎನ್.ರವಿಕುಮಾರ ಹೆಸರು ಪೈಪೋಟಿಯಲ್ಲಿತ್ತು. ಆದರೆ ಅವರಿಗೂ ಸಹ ಈ ಸ್ಥಾಾನ ದೊರೆತಿಲ್ಲ. ಈ ಮೂಲಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಿನ ಎರಡೂ ಪ್ರತಿಪಕ್ಷ ನಾಯಕ ಸ್ಥಾಾನ ದಕ್ಷಿಣ ಕರ್ನಾಟಕದವರಿಗೆ ದೊರೆತಿದ್ದು, ಉತ್ತರ ಕರ್ನಾಟಕದವರಿಗೆ ಅನ್ಯಾಾಯ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.