ಸುದ್ದಿಮೂಲ ವಾರ್ತೆ ಮಾನ್ವಿ, ಜ.06:
ವಿಧಾನ ಪರಿಷತ್ತಿಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಾಮಿ ಅವರಿಗೆ ೇಸ್ಬುಕ್ ಮೂಲಕ ಜೀವಬೆದರಿಕೆ ಹಾಕಿರುವುದನ್ನು ಮಾನ್ವಿಿಯ ದಲಿತ ಮುಖಂಡ ಗುರುರಾಜ ಎನ್. ನಾಗಲಾಪುರ ಖಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಾಯಿಸಿದ್ದಾರೆ.
ವೆಂಕಟೇಶ ಅಪ್ಪುು ಎಂಬ ೇಸ್ ಬುಕ್ ಖಾತೆಯಿಂದ ಛಲವಾದಿ ನಾರಾಯಣಸ್ವಾಾಮಿ ಅವರ ವಿರುದ್ಧ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಾಣ ಬೆದರಿಕೆ ಹಾಕಿರುವುದು ಖಂಡನೀಯ. ಒಬ್ಬ ಜವಾಬ್ದಾಾರಿಯುತ ಜನಪ್ರತಿನಿಧಿಗೆ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವಕ್ಕೆೆ ಆಪತ್ತಾಾಗಿದೆ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವ ಇಂತಹ ವ್ಯಕ್ತಿಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ಆರೋಪಿಯನ್ನು ಬಂಧಿಸಿ, ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆೆ ಹಚ್ಚಬೇಕು. ಅಲ್ಲದೇ, ವಿರೋಧ ಪಕ್ಷದ ನಾಯಕರ ಸುರಕ್ಷತೆಯ ದೃಷ್ಟಿಿಯಿಂದ ಅವರಿಗೆ ತಕ್ಷಣವೇ ಪ್ಲಸ್ ಭದ್ರತೆಯನ್ನು ಒದಗಿಸಬೇಕು ಎಂದು ಡಿಜಿಪಿ ಅವರಿಗೆ ಸಲ್ಲಿಸಿದ ದೂರಿನಲ್ಲಿ ಒತ್ತಾಾಯಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರಿಗೆ ಜೀವ ಬೆದರಿಕೆ, ಗುರುರಾಜ ನಾಗಲಾಪುರ ಖಂಡನೆ

