ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಯಚೂರು ನಗರದ ವಾರ್ಡ್ 31 ಸಿಯಾತಲಾಬ್ನಲ್ಲಿರುವ ಅಂಬೇಡ್ಕರ್ ಭವನ ಛಲವಾದಿ ಸಮಾಜ ಕಲ್ಯಾಾಣ ಮಂಟಪ ಎಂದು ನಾಮಕರಣ ಮಾಡಿದ್ದಕ್ಕೆೆ ಜಯ ಕರ್ನಾಟಕ ರಕ್ಷಣಾ ಸೇನೆ ಆಕ್ಷೇಪಿಸಿ ದೂರು ಸಲ್ಲಿಸಿದೆ.
ಇಂದು ನಗರದ ಜಿಲ್ಲಾಾಧಿಕಾರಿ ಕಚೇರಿಯ ಸ್ಥಾಾನಿಕ ಅಧಿಕಾರಿ ಮೂಲಕ ಮನವಿ ಸಲ್ಲಿಸಿದ ಪದಾಧಿಕಾರಿಗಳು ವಾರ್ಡ್ 31 ಸಿಯಾತಲಾಬ್ನ 80 ಅಡಿ ರಸ್ತೆೆಯ ಪಕ್ಕದಲ್ಲಿ ಬರುವ ಡಾ.ಬಿ.ಆರ್ ಅಂಬೇಡ್ಕರ್ ಭವನದ ಹೆಸರನ್ನು ಉದ್ದೇಶಪೂರ್ವಕ ಬದಲಾಯಿಸಿ ಅದಕ್ಕೆೆ ಛಲವಾದಿ ಸಮಾಜ ಕಲ್ಯಾಾಣ ಮಂಟಪ ಎಂದು ನಾಮಕರಣ ಮಾಡಿರುವುದು ಸರಿಯಲ್ಲಘಿ ಎಂದು ದೂರಿದರು.
ಕೆ.ಇ.ಕುಮಾರ ಉದ್ದೇಶ ಪೂರ್ವಕವಾಗಿ ಬದಲಿಸಿ ಒಂದು ಸಮುದಾಯಕ್ಕೆೆ ಭವನ ಸೀಮಿತಗೊಳಿಸಿದ್ದು ಸರಿಯಲ್ಲ ತಕ್ಷಣ ಮೂಲ ಹೆಸರಿನಂತೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಎಂದೇ ನಾಮಕರಣ ಮಾಡಿ ಭವ್ಯ ಸಮುದಾಯ ಭವನ ನಿರ್ಮಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಎಚ್.ಕೆ.ರವಿಕುಮಾರ, ಎಚ್.ಸತ್ಯರಾಜ, ಟಿ.ವೀರೇಶ, ಜಗ್ಲಿಿ ಉರುಕುಂದಪ್ಪಘಿ, ಎಂ.ರಘುನಾಥ, ಆಂಜಿನೇಯ್ಯ, ಹನುಮಂತು, ವೆಂಕಟಸ್ವಾಾಮಿ, ರಾಘವೇಂದ್ರ ಸೇರಿ ಇತರರಿದ್ದರು.
ಛಲವಾದಿ ಸಮಾಜ ಕಲ್ಯಾಣ ಮಂಟಪ ನಾಮಕರಣ ಕೈ ಬಿಡಲು ಆಗ್ರಹ

