ಸುದ್ದಿಮೂಲ ವಾರ್ತೆ ಕವಿತಾಳ, ನ.23:
ಸಮೀಪದ ಮಸ್ಕಿಿ ತಾಲೂಕಿನ ಜಂಗಮರಹಳ್ಳಿಿ ಗ್ರಾಾಮದಲ್ಲಿ ಚಂದೇಶ್ವರ ತಾತನವರ ಜಾತ್ರಾಾ ಮಹೋತ್ಸವದ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆೆ ಗಂಗಾ ಸ್ಥಳದಲ್ಲಿ ಪೂಜೆ ಸಲ್ಲಿಸಿದ ಮುತ್ತೈದೆಯರು ಕುಂಭ, ಕಳಸ, ಡೊಳ್ಳು ಬಾಜಾ ಭಜಂತ್ರಿಿ ಮಂಗಳ ವಾದ್ಯಗಳೊಂದಿಗೆ ಗ್ರಾಾಮದ ಪ್ರಮುಖ ರಸ್ತೆೆಗಳ ಮೂಲಕ ದೇವಸ್ಥಾಾನಕ್ಕೆೆ ಆಗಮಿಸಿದರು. ದೇವಸ್ಥಾಾನದಲ್ಲಿ ಚಂದೇಶ್ವರ ತಾತನವರ ಕತೃ ಗದ್ದುಗೆಗೆ ಮಹಾ ರುದ್ರಾಾಭಿಷೇಕ, ಸಹಸ್ರ ಬಿಲ್ವಾಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ಜರುಗಿದವು.
ಸಂಜೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಂಗಮರಹಳ್ಳಿಿ ಸೇರಿದಂತೆ ಸುತ್ತಮುತ್ತಲಿನ ಗ್ರಾಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊೊಂಡಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ಚಂದೇಶ್ವರ ತಾತ ಜಾತ್ರೆೆ ಅದ್ಧೂರಿ

