ಸುದ್ದಿಮೂಲ ವಾರ್ತೆ ರಾಯಚೂರು, ಡಿ.15:
ವಿದ್ಯಾಾರ್ಥಿಗಳಿಗೆ ಕೌಶಲ್ಯ ಅತ್ಯವಶ್ಯಕವಾಗಿದೆ. ಕೌಶಲ್ಯ ಕುರಿತು ಸರ್ಕಾರವು ಮನಗಂಡು ಪ್ರೌೌಢ ಶಾಲಾ ಹಂತದಲ್ಲಿಯೇ ಎನ್ಎಸ್ಎ್ಕ್ಯೂ ಪರಿಚಯಿಸಲಾಗಿದ್ದು, ವಿದ್ಯಾಾರ್ಥಿಗಳು ಸರ್ಕಾರಿ ನೌಕರಿಯನ್ನೇ ಅವಲಂಬಿಸದೇ ವಿವಿಧ ಕೌಶಲಗಳನ್ನು ಮೈಗೂಡಿಸಿಕೊಂಡು ಸ್ವಾಾವಲಂಬಿಗಳಾಗಿ ಬದುಕಬೇಕೆಂದು ಮಾನವಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ ಅವರು ಹೇಳಿದರು.
ಇತ್ತೀಚೆಗೆ ಜಿಲ್ಲೆಯ ಮಾನವಿ ಪಟ್ಟಣದ ಬಸವ ಕೈಗಾರಿಕಾ ತರಬೇತಿ ಸಂಸ್ಥೆೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆಯ ವತಿಯಿಂದ 2025-26ನೇ ಪಿಎಮ್ಎನ್ಎಎಮ್ ಯೋಜನೆಯಡಿಯಲ್ಲಿ ಶಿಶಿಕ್ಷು ಮೇಳಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಗ್ರಾಾಮೀಣ ಭಾಗದ ಬಡ, ಮದ್ಯಮ ವರ್ಗದ ವಿದ್ಯಾಾರ್ಥಿಗಳು ಐಟಿಐ ನಂತಹ ವೃತ್ತಿಿ ಶಿಕ್ಷಣದ ಕಡೆ ಆಸಕ್ತಿಿ ವಹಿಸುತ್ತಿಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅವರ ಆರ್ಥಿಕ ಸ್ಥಿಿತಿಗತಿಯ ಸುಧಾರಣೆಗೆ ಹಾಗೂ ಉತ್ತಮ ಜೀವನ ನಿರ್ವಹಣೆಗೆ ಅನುಕೂಲಕರವಾಗಿದೆ ಎಂದರು.
ಈ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಸುರೇಶ ಕುಮಾರ ಕುರ್ಡಿ ಅವರು ಮಾತನಾಡಿ, ನಾವು ವಿದ್ಯಾಾರ್ಥಿಗಳಾಗಿದ್ದಾಗ ಜಿಲ್ಲೆಗೆ ಕೇವಲ ಒಂದೇ ಒಂದು ಸರ್ಕಾರಿ ಐಟಿಐ ಕಾಲೇಜು ಇತ್ತು. ಇಂದು ಸರ್ಕಾರ ಪ್ರತಿ ತಾಲೂಕು ಮತ್ತು ಗ್ರಾಾಮೀಣ ಭಾಗದಲ್ಲಿಯೂ ಕೂಡ ಸರ್ಕಾರಿ ಐಟಿಐ ಕಾಲೇಜುಗಳನ್ನು ಪ್ರಾಾರಂಭಿಸುವ ಮೂಲಕ ಗ್ರಾಾಮೀಣ ಭಾಗದ ಬಡ ಮಧ್ಯಮ ವರ್ಗಗಳಿಗೆ ಹಾಗೂ ಎಂಬಿಬಿಎಸ್ ಮತ್ತು ಇಂಜಿನೀಯರಿಂಗ್ ನಂತಹ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ವಿದ್ಯಾಾರ್ಥಿಗಳಿಗೆ ಐಟಿಐ ಜೀವನ ಸಂಜೀವಿನಿಯಾಗಿದೆ ಎಂದರು.
ಶಿಶಿಕ್ಷು ಮೇಳದಲ್ಲಿ ಜೆಎಸ್ಡಬ್ಲ್ಯೂ ತೋರಣಗಲ್ಲು, ಹೋಂಡಾ ಕಂಪನಿ ಬೆಂಗಳೂರು, ಇ2ಇ ಕನ್ಸಲ್ಟೆೆನ್ಸಿಿ ರಾಯಚೂರು ಹಾಗೂ ಇತರೆ ವಿವಿಧ ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆೆಗಳಲ್ಲಿ ಐಟಿಐ ದ್ವಿಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿಿರುವ ಹಾಗೂ ಈಗಾಗಲೇ ಐಟಿಐ ಉತ್ತೀರ್ಣರಾದ ತರಬೇತಿದಾರರು ಮತ್ತು ಪಿಯುಸಿ ಹಾಗೂ ಪದವಿಯಲ್ಲಿ ಉತ್ತೀರ್ಣರಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.
40ಕ್ಕೂ ಹೆಚ್ಚು ವಿದ್ಯಾಾರ್ಥಿಗಳಿಗೆ ನೇಮಕಾತಿ ಪತ್ರ: ಪಿಎಮ್ಎನ್ಎಎಮ್ ಯೋಜನೆಯಡಿಯಲ್ಲಿ ಶಿಶಿಕ್ಷದ ಮೇಳ ಹಮ್ಮಿಿಕೊಳ್ಳಲಾಗಿತ್ತು. ಮೇಳಕ್ಕೆೆ ಆಗಮಿಸಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮೇಳದಲ್ಲಿ ಸುಮಾರು 60 ವಿದ್ಯಾಾರ್ಥಿಗಳು ನೋಂದಣಿಯಾಗಿದ್ದು, ಸುಮಾರು 40ಕ್ಕೂ ಹೆಚ್ಚು ವಿದ್ಯಾಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾನವಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆಯ ಪ್ರಾಾಚಾರ್ಯರಾದ ರುದ್ರಗೌಡ ಮಾಲಿಪಾಟೀಲ್, ಬಸವ ಕೈಗಾರಿಕಾ ತರಬೇತಿ ಸಂಸ್ಥೆೆಯ ಪ್ರಾಾಚಾರ್ಯರಾದ ತಿಪ್ಪಣ್ಣ ಹೊಸಮನಿ, ತಾಲೂಕು ನೌಕರರ ಸಂಘದ ನಿರ್ದೇಶಕರಾದ ಮುಕ್ಕಣ್ಣ .ಕೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆಯ ಸಿಬ್ಬಂದಿಗಳಾದ ಗಂಗಪ್ಪ, ಶರಣಪ್ಪ ಹಿಪ್ಪಲದಿನ್ನಿಿ, ನಾಗರಾಜ ಪಿ. ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಇದ್ದರು.
ಮಾನವಿಯಲ್ಲಿ ಶಿಶಿಕ್ಷು ಮೇಳಕ್ಕೆ ಚಾಲನೆ ವಿದ್ಯಾರ್ಥಿಗಳು ವಿವಿಧ ಕೌಶಲ್ಯ ಮೈಗೂಡಿಸಿಕೊಳ್ಳಿ: ಚಂದ್ರಶೇಖರ ದೊಡ್ಡಮನಿ

