ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.12:
ರಾಜ್ಯದಲ್ಲಿ ಖಾಲಿ ಇರುವ ಪ್ರಾಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ೆಬ್ರವರಿ 19 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಮ್ಮಿಿಕೊಳ್ಳಲಾಗುವುದು ಎಂದು ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಿಿಲಿ ಹೇಳಿದರು.
ಅವರು ಇಂದು ತಿಂಥಿಣಿ ಬ್ರಿಿಜ್ ನ ಕಾಗಿನೆಲೆ ಕನಕ ಗುರು ಪೀಠದಲ್ಲಿ ಹಾಲುಮತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಮಧ್ಯಾಾಹ್ನದ ನಂತರ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಾಗಿ 51 ಸಾವಿರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಬೇಗ ತುಂಬ ಬೇಕು.
ಈಗಾಗಲೇ ಒಳ ಮೀಸಲಾತಿ ಸಮಸ್ಯೆೆ ಬಗೆಹರಿದಿದೆ ಈಗ ಸದ್ಯ 13000 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವಾಗ ಕಲ್ಯಾಾಣ ಕರ್ನಾಟಕದ ದಲ್ಲಿ 5600 ಹುದ್ದೆಗಳನ್ನು ತುಂಬಬೇಕು, ಕಳೆದ ತಿಂಗಳ ಟೆಟ್ ಪರೀಕ್ಷೆ ಆಗಿದೆ 1 ಲಕ್ಷ 50 ಸಾವಿರ ಜನ ಅರ್ಹರಾಗಿದ್ದಾರೆ ಬೇಗ ಪರೀಕ್ಷೆ ಮುಗಿಸಿ ಬರುವ ಜೂನ್ ತಿಂಗಳಲ್ಲಿ ಆದೇಶ ಕೊಡಬೇಕು ಎಂದು ನಮ್ಮ ಪ್ರಮುಖವಾದ ಬೇಡಿಕೆಯಾಗಿದೆ ಜೊತೆಗೆ ಶಿಕ್ಷಕರ ಕೆಲಸದ ಮೇಲೆ ಒತ್ತಡ ಕಡಿಮೆ ಮಾಡಲು ಬಿಸಿಯೂಟ ಜವಾಬ್ದಾಾರಿ, ಹಾಗೂ ಆನ್ ಲೈನ್ ಕೆಲಸದಿಂದ ಕೈ ಬಿಡಬೇಕು ಈ ಕೆಲಸಗಳಿಗಾಗಿ ಕಂಪ್ಯೂೂಟರ್ ಆಪರೇಟರ್ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿದರು.
ಎಲ್ಲಾ ಶಿಕ್ಷಕರಿಗೆ ಬಡ್ತಿಿ ಕೊಡಬೇಕು : ರಾಜ್ಯದಲ್ಲಿ 51 ಸಾವಿರ ಅತಿಥಿ ಶಿಕ್ಷಕರು ಇದ್ದಾರೆ ಹೆಚ್ಚು ಮಕ್ಕಳು ಇರುವ ಶಾಲೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿ ಕಲಿಕೆ ಅನುಕೂಲ ಮಾಡಬೇಕು ಎಂದು ನಾವು ಸರ್ಕಾರಕ್ಕೆೆ ಮನವಿ ಮಾಡಿದ್ದೇವೆ.
ವಿಷಯಕ್ಕೆೆ ಒಬ್ಬರು ಶಿಕ್ಷಕರನ್ನು ಕೊಡದಿದ್ದರು ತರಗತಿಗೆ ಒಬ್ಬ ಶಿಕ್ಷಕರನ್ನು ಕೊಡಬೇಕು ಎಂದು ನಮ್ಮ ಬೇಡಿಕೆಯಾಗಿದೆ.
ರಾಜ್ಯದ ಎಲ್ಲಾ ಶಾಲೆಗಳನ್ನು ಡಿಜಿಟಲಿಕರಣ ಮಾಡಬೇಕು, ಸ್ಮಾಾರ್ಟ್ ಕ್ಲಾಾಸ್ ಪ್ರಾಾರಂಭಿಸಬೇಕು ಮಕ್ಕಳ ಕಲಿಕೆಗೆ ಅನುಕೂಲವಾಗಿರುವ ನಲಿ ಕಲಿ ರದ್ದು ಮಾಡಬಾರದು 41 ಸಾವಿರ ಶಾಲೆಗಳಲ್ಲಿ 20 ಸಾವಿರ ಶಾಲೆಗಳಲ್ಲಿ ನಲಿಕಲಿ ರದ್ದು ಮಾಡಲು ಸರ್ಕಾರ ಮುಂದಾಗಿದೆ ನಲಿಕಲಿ ಮುಂದುವರಿಸಲು ನಾವು ಪ್ರಭಲ ಹೋರಾಟ ಮಾಡುತ್ತೇವೆ.
ಅಲ್ಲದೇ ಸಂಗೀತ, ವುಡ್ ಕ್ರಾ್ಟಾ, ದೈಹಿಕ ಶಿಕ್ಷಕರಿಗೆ ಬಡ್ತಿಿ ಕೊಡಬೇಕು ಎಂದು ನಮ್ಮ ಪ್ರಮುಖವಾದ ಬೇಡಿಕೆಯಾಗಿದೆ ಎಂದು ಹೇಳಿದರು.
ರಾಜ್ಯದ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಾಗಿ ಮತ್ತು ಪ್ರಾಾಥಮಿಕ ಶಾಲಾ ಶಿಕ್ಷಕರ ಸಮಸ್ಯೆೆಗಳ ನಿವಾರಣೆಗಾಗಿ ಬರುವ ೆಬ್ರವರಿ 19ಕ್ಕೆೆ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಮಾಡಲಾಗುವುದು ಈ ಸಮಾವೇಶಕ್ಕೆೆ ಮುಖ್ಯ ಮಂತ್ರಿಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಸೇರಿದಂತೆ ಅನೇಕ ಶಿಕ್ಷಣ ತಜ್ಞರು ಭಾಗವಹಿಸುತ್ತಾಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಶಿಕ್ಷಕರ ಸಂಘದ ದೇವದುರ್ಗ ತಾಲೂಕ ಅಧ್ಯಕ್ಷ ವಿರುಪನ ಗೌಡ, ವಿಕಲಚೇತನ ಶಿಕ್ಷಕರ ಸಂಘದ ಅಧ್ಯಕ್ಷ ರಾಮಣ್ಣ ಸುಬೇದಾರ, ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ,ಶಿಕ್ಷಕರ ಸಹಕಾರ ಸಂಘದ ನಿರ್ದೇಶಕ ಗಂಗಾರೆಡ್ಡಿಿ ಪಾಟೀಲ್, ಶಿಕ್ಷಕರಾದ ಅಮತ್ಯಾಾಪ್ಪ, ರೇವಣ ಸಿದ್ದಪ್ಪಪೂಜಾರಿ, ಸಿದ್ದನ ಗೌಡ, ದೇವರಾಜ ಉಪಸ್ಥಿಿತರಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಶೈಕ್ಷಣಿಕ ಸಮಾವೇಶ : ಚಂದ್ರಶೇಖರ ನುಗ್ಗಿಲಿ

