ಸುದ್ದಿಮೂಲ ವಾರ್ತೆ
ರಾಮನಗರ,ಜೂ.12 : ತಾಲೂಕಿನ ಬಿಡದಿ ಪುರಸಭಾ ವ್ಯಾಪ್ತಿಯ ಕೆಂಚನಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರು.ಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಅಧ್ಯಕ್ಷರಾಗಿದ್ದ ಮಲ್ಲೇದೇವರು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಸಂಘದಲ್ಲಿ ಚುನಾವಣೆ ನಡೆಯಿತು. ಚುನಾವಣಾ ವೇಳಾ ಪಟ್ಟಿಯಂತೆ ಅಧ್ಯಕ್ಷ ಸ್ಥಾನಕ್ಕೆ ಚಂದ್ರು.ಸಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚಂದ್ರು ಅವರು ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಕೆ.ಟಿ.ಉಮೇಶ್ ಘೋಷಿಸಿದರು.
ಸಂಘದಲ್ಲಿ ಒಟ್ಟು 12 ನಿರ್ದೇಶಕರಿದ್ದು, ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 11 ನಿರ್ದೇಶಕರುಗಳಾದ ಉಪಾಧ್ಯಕ್ಷ ಸೋಮ, ನಿರ್ದೇಶಕರಾದ ಮಲ್ಲಪ್ಪ, ಕೆ.ಆರ್, ರಮೇಶ್.ಕೆ.ಎನ್, ಮಲ್ಲೇದೇವರು, ಗುರುಮಲ್ಲೇಶ್, ರಾಜಣ್ಣ.ಎಂ, ಮಲ್ಲೇಶಯ್ಯ, ಲತಾ, ನೀಲಮ್ಮ, ಬಸವರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಶಕುಂತಲಾ ಅವರು ಚುನಾವಣಾ ಪ್ರಕ್ರಿಯೆಲ್ಲಿ ಗೈರಾಗಿದ್ದರು.
ನೂತನ ಅಧ್ಯಕ್ಷ ಚಂದ್ರು.ಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಸಹಕಾರಿ ಕ್ಷೇತ್ರದ ಮೂಲಕ ಸಂಘದ ಸದಸ್ಯರಿಗೆ ನೆರವಾಗುವ ಕೆಲಸವನ್ನು ಎಲ್ಲ ನಿರ್ದೇಶಕರ ಸಹಕಾರದಲ್ಲಿ ಮಾಡುತ್ತೇನೆ. ನನ್ನನ್ನು ಸಂಘದ ಅಧ್ಯಕ್ಷನಾಗಿ ಅವಿರೋಧ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಕೆಂಚನಕುಪ್ಪೆ ವಾರ್ಡಿನ ಪುರಸಭೆ ಸದಸ್ಯ ಕೆ.ಎನ್.ರಮೇಶ್, ಸಂಘದ ಸಿಇಓ ಶಶಿಧರ್.ಎಂ ಸಿಬ್ಬಂದಿಗಳಾದ ಬಸವರಾಜು, ದಕ್ಷಿಣಮೂರ್ತಿ ಹಾಗೂ ಹಾಜರಿದ್ದ ಎಲ್ಲ ನಿರ್ದೇಶಕರುಗಳು ನೂತನ ಅದ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.