ಸುದ್ದಿಮೂಲ ವಾರ್ತೆ ಕೊಪ್ಪಳ, ಜ.12:
ಕೊಪ್ಪಳ ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷರನ್ನು ದಿಢೀರ ಬದಲಾವಣೆ ಮಾಡಿದ್ದು ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ.
ಕೊಪ್ಪಳ ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದರನ್ನು ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷನ್ನಾಾಗಿ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯು ಆದೇಶ ಹೊರಡಿಸಿದೆ. ಇಲ್ಲಿಯವರೆಗೂ ಅಧ್ಯಕ್ಷರಾಗಿದ್ದ ಶ್ರೀನಿವಾಸ ಗುಪ್ತಾಾ ಅವರ ಬದಲಾವಣೆಯಾಗಿದೆ.
ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾಾ 2024 ಅ. 18 ರಂದು ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿದ್ದರು. ಶ್ರೀನಿವಾಸ ಗುಪ್ತಾಾ ಅವರು ಹಿಟ್ನಾಾಳ ಕುಟುಂಬದವರಿಗೆ ಆಪ್ತರಾಗಿದ್ದರು. ಆದರೆ ದಿಢೀರ ಅಧ್ಯಕ್ಷರ ಬದಲಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಾಸವಾಗಿದೆ.
ಒಂದು ಮೂಲದ ಪ್ರಕಾರ ನಗರಾಭಿವೃದ್ದಿ ಪ್ರಾಾಧಿಕಾರಕ್ಕೆೆ 3 ವರ್ಷದಲ್ಲಿ ಮೂರು ಜನರು ಅಧ್ಯಕ್ಷರನ್ನು ಮಾಡುವ ಒಳ ಒಪ್ಪಂದವಿದೆ. ಹೀಗಾಗಿ ಪ್ರತಿ ವರ್ಷಕ್ಕೊೊಬ್ಬರಂತೆ ಅಧ್ಯಕ್ಷರಾಗುವ ಸಾಧ್ಯತೆ ಇದ್ದು ಶ್ರೀನಿವಾಸ ಗುಪ್ತಾಾ ಆಯ್ಕೆೆಯಾಗಿ ಒಂದು ವರ್ಷ 2 ತಿಂಗಳಾಗಿರುವುದರಿಂದ ಈಗ ಬದಲಾವಣೆ ಮಾಡಿ ಹಿಟ್ನಾಾಳ ಕುಟುಂಬದ ಇನ್ನೊೊಬ್ಬ ಆತ್ಮೀಯರಾಗಿರುವ ಪ್ರಸನ್ನ ಗಡಾದರನ್ನು ನೇಮಕ ಮಾಡಿದ್ದಾಾರೆ ಎನ್ನಲಾಗಿದೆ.
ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷರ ಬದಲಾವಣೆ

