ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.5:ನೂತನ ಸರ್ಕಾರ ಬಂದಾಗಿನಿಂದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ರಾಜಕಾರಿಣಿಗಳಿಗೆ ಇಚ್ಚಾ ಶಕ್ತಿ ಇಲ್ಲದಂತಾಗಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಹೇಳಿದರು.
ಹೊಸಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಂಬೇಡ್ಕರ್ ಪುತ್ಥಳಿಗಳು ಮತ್ತು ಭಾವಚಿತ್ರಗಳಿಗೆ ಕಿಡಿಗೇಡಿಗಳಿಂದ ಅಪಮಾನವಾಗಿದೆ. ಆದರೆ, ಈ ಬಗ್ಗೆ ಯಾವ ರಾಜಕಾರಣಿಗಳಿಂದಲೂ ಸಾಂತ್ವಾನದ ಮಾತುಗಳು ವ್ಯಕ್ತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಮ್ಮೆ ಸಭೆ ನಡೆಸಿ 10 ಸಾವಿರ ಮಂದಿ ಹೊಸಕೋಟೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆಗಳನ್ನು ಮಾಡುವ ಮೂಲಕ ರಾಜಕಾರಿಣಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು. ಈ ಹಿಂದೆ ದಲಿತರು ಧ್ವನಿ ಎತ್ತದಂತೆ ಇತ್ತು. ಇವತ್ತು ಹಾಗಿಲ್ಲ, ನಾವು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅಪ್ಪಟ ಅಭಿಮಾನಿಗಳಾದ ನಾವು ಈ ಒಂದು ಹೋರಾಟದಲ್ಲಿ ಅತಿ ಹೆಚ್ಚು ಜನ ಭಾಗವಸಿ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಕನ್ನಹಳ್ಳಿ ಕೃಷ್ಣಪ್ಪ, ಚಂದ್ರಪ್ಪ,ಕೃಷ್ಣಪ್ಪ ಇತರರು ಭಾಗವಹಿಸಿದ್ದರು.