ಸುದ್ದಿಮೂಲ ವಾರ್ತೆ ಮಸ್ಕಿ, ಡಿ.04:
ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಮೆಚ್ಚಿಿನ ಶರಣರಲ್ಲಿ ಚೆನ್ನಯ್ಯ ಒಬ್ಬರು’ ಎಂದು ದೊಡ್ಡಪ್ಪ ಮುರಾರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದ ಶ್ರೀ ಮರಿದೇವಿ ದೇವಸ್ಥಾಾನದ ಹತ್ತಿಿರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯನವರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚೆನ್ನಯ್ಯನವರು ಅನನ್ಯ ವಚನಕಾರರು. ಬಸವಣ್ಣನವರು ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ ಎಂದು ಚೆನ್ನಯ್ಯನವರಿಗೆ ಮೊದಲ ಪ್ರಾಾಶಸ್ತ್ಯ ನೀಡುತ್ತಿಿದ್ದರು’ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ಮಲ್ಲಯ್ಯ ಬಳ್ಳಾಾ, ಮೌನೇಶ್ ಮುರಾರಿ,ಮಲ್ಲಯ್ಯ ಮುರಾರಿ,ಸಿದ್ರಾಾಮಪ್ಪ ಕೊಠಾರಿ ಮುದುಕಪ್ಪ ದಾಸರ, ಕಾಶೀಮಪ್ಪ ಡಿ ಮುರಾರಿ, ದುರುಗಪ್ಪ ಮುರಾರಿ,
ಪರಶುರಾಮ್ ಮುರಾರಿ, ಚಂದ್ರಕಾಂತ್ ಮುರಾರಿ, ಎಲೆಕ್ಟ್ರಿಿಷಿಯನ್ ಅಶೋಕ, ಪ್ರಶಾಂತ್ ದಾನಪ್ಪ, ಗಂಗಾಧರ ಮುರಾರಿ,ಕಿರಣ್ ವಿ ಮುರಾರಿ, ಪ್ರಶಾಂತ್ ಕೊಠಾರಿ ಇತರರು ಭಾಗವಹಿಸಿದ್ದರು.
ಶಿವಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ

